ಮುಂದಿನ ದಿನಗಳಲ್ಲಿ ಹಾಲಿನ ಡೇರಿಗಳು ಆರ್ಥಿಕತೆಯ ಶಕ್ತಿ ಕೇಂದ್ರಗಳಾಗಲಿವೆ. ಒಂದು ಡೇರಿ ಬಂದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ. ಅದಲ್ಲದೇ, ಬೇರೆ ಬೇರೆ ಅಭಿವೃದ್ಧಿಗಳು ಹಾಲಿನ ಡೇರಿಯಲ್ಲಿ ಆಗಲಿದೆ. ಅದಕ್ಕೆ ಅನುಗುಣವಾಗಿ ಕಟ್ಟಡವನ್ನು ರೂಪಿಸಿಕೊಳ್ಳಿ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಚಿಕ್ಕಬಾಣಸವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆಯನ್ನು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ನೆರವೇರಿಸಿದರು.ನಂತರ ಶಾಸಕ ರವಿಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಹಾಲಿನ ಡೇರಿಗಳು ಆರ್ಥಿಕತೆಯ ಶಕ್ತಿ ಕೇಂದ್ರಗಳಾಗಲಿವೆ. ಒಂದು ಡೇರಿ ಬಂದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ. ಅದಲ್ಲದೇ, ಬೇರೆ ಬೇರೆ ಅಭಿವೃದ್ಧಿಗಳು ಹಾಲಿನ ಡೇರಿಯಲ್ಲಿ ಆಗಲಿದೆ. ಅದಕ್ಕೆ ಅನುಗುಣವಾಗಿ ಕಟ್ಟಡವನ್ನು ರೂಪಿಸಿಕೊಳ್ಳಿ. ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಕೆ.ರಮೇಶ್ ಮಾತನಾಡಿ, ಗ್ರಾಮದಲ್ಲಿ ಹಾಲಿನ ಡೇರಿಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸುಮಾರು 15 ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರಾದ ಜಗದೀಶ್, ಪಾಪೇಗೌಡ, ಲಿಂಗಪ್ಪ, ರಮೇಶ್, ಸುಜಾತ ಸೋಮೇಗೌಡ, ಮಮತಾ ಪಂಚಲಿಂಗ, ಪ್ರಸನ್ನ ಕುಮಾರ್, ಆನಂದ, ಶಂಕರ್ ನರಸಿಂಹಮೂರ್ತಿ, ವಿಸ್ತರಣಾಧಿಕಾರಿ ಇಂದ್ರ, ಕಾರ್ಯದರ್ಶಿ ವೇಣು ಸೇರಿದಂತೆ ಹಲವರಿದ್ದರು.
ಹಾಡ್ಲಿ: ಇಂದು ವಿದ್ಯುತ್ ವ್ಯತ್ಯಯಹಲಗೂರು: ಸಮೀಪದ ಹಾಡ್ಲಿ ಬಳಿ ಇರುವ 66/11 ಕೆ.ವಿ.ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.27 ರಂದು ಶುಕ್ರವಾರ ಲಿಂಕ್ ಲೈನ್ ಕಾಮಗಾರಿ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಕಾರಣದಿಂದ ಹಾಡ್ಲಿ, ಅಗಸನಪುರ, ಜೋಗಿಪುರ, ಮೇಗಳಾಪುರ, ಕಂಸಾಗರ, ಲಿಂಗಣಾಪುರ, ನಡಕಲಪುರ, ನಂಜೇಗೌಡನದೊಡ್ಡಿ, ಗ್ರಾಮದೇವತೆಪುರ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಚೆನ್ನೀಪುರ, ಬಸವನಪುರ, ಡಿ.ಹಲಸಹಳ್ಳಿ, ಧನಗೂರು, ಕೂನನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಮಳವಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.