ಕಿರೇಸೂರ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ

KannadaprabhaNewsNetwork |  
Published : Nov 20, 2026, 02:30 AM IST
ಕಿರೇಸೂರ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಶಾಲೆ ಹಾಗೂ ಅದೇ ಶಾಲೆಯ ಆಂಗ್ಲಭಾಷಾ ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಅವರಿಗೆ ಬೆಸ್ಟ್ ಟೀಚರ್ ಅವಾರ್ಡ್‌ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಐ ಇನ್ವೆಂಟ್ ಮಿ, ನೆಬ್ರೊಸ್, ಡಿಡಿ ಕ್ಲಿಕ್ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷ ನಾವಿನ್ಯಯುತ ಪ್ರಯೋಗಗಳು ಮತ್ತು ವಿನೂತನ ಚಟಿವಟಿಕೆಗಳಿಗೆ ನೀಡಲಾಗುವ ವಾರ್ಷಿಕ ಬಹುಮಾನಗಳಿಗೆ ಕಿರೇಸೂರ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ನೀಡಿದೆ.

ಬ್ಯಾಹಟ್ಟಿ:

ಐ ಇನ್ವೆಂಟ್ ಮಿ, ನೆಬ್ರೊಸ್, ಡಿಡಿ ಕ್ಲಿಕ್ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷ ನಾವಿನ್ಯಯುತ ಪ್ರಯೋಗಗಳು ಮತ್ತು ವಿನೂತನ ಚಟಿವಟಿಕೆಗಳಿಗೆ ನೀಡಲಾಗುವ ವಾರ್ಷಿಕ ಬಹುಮಾನಗಳಿಗೆ ಕಿರೇಸೂರ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಶಾಲೆ ಹಾಗೂ ಅದೇ ಶಾಲೆಯ ಆಂಗ್ಲಭಾಷಾ ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಅವರಿಗೆ ಬೆಸ್ಟ್ ಟೀಚರ್ ಅವಾರ್ಡ್‌ ನೀಡಿ ಗೌರವಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಐ ಇನ್ವೆಂಟ್ ಮಿ ಸಂಸ್ಥೆಯಿಂದ ಶಾಲೆಯ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಯೋಜನಾ ಸಮನ್ವಯಾಧಿಕಾರಿಗಳಾದ ಎಸ್.ಎಂ. ಹುಡೇದಮನಿ, ನೆಬ್ರೂ ಸಂಸ್ಥೆಯ ಮಾಣಿಕ ಝರಾಲ್ಡ್, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ತಿರ್ಲಾಪೂರ ಅವರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿದರು.

ಅರಳೀಕಟ್ಟೆ ತೆರೆದ ವಾಚನಾಲಯ, ಸಾಲಿಗುಡಿ ಶಾಲಾ ದ್ವೈಮಾಸಿಕ ದ್ವಿಭಾಷಾ ಪತ್ರಿಕೆ, ಕಲ್ಪನಾ ಚಾವ್ಲಾ ಬಾಹ್ಯಾಕಾಶ ಪ್ರಯೋಗಾಲಯ, ನಾಟಕದ ಮೂಲಕ ಪಾಠ, ಪುಸ್ತಕ ಜೋಳಿಗೆ, ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದ ಮೊದಲಾದ ವಿನೂತನ ಆವಿಷ್ಕಾರಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದ ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಅವರಿಗೆ ಪ್ರಶಸ್ತಿ ಪತ್ರ ಹಾಗೂ ₹ ೧೫,೦೦೦ ಚೆಕ್ ನೀಡಲಾಯಿತು. ಎಂದಿನಂತೆ ಅವರು ತಮಗೆ ಬಂದ ಪ್ರಶಸ್ತಿ ಹಣವನ್ನು ಈ ಬಾರಿ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಹೆಣ್ಣುಮಕ್ಕಳ ಶಾಲೆಗೆ ದತ್ತಿಯಾಗಿ ನೀಡಿದರು.

ಶಿಕ್ಷಕರಾದ ಚಂದ್ರಶೇಖರ ಶೀಪರಮಟ್ಟಿ ಸ್ವಾಗತಿಸಿದರು. ಅರ್ಜುನ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಸುಲೋಚನಾ ಬೆಳಗಾವಿ ವಂದಿಸಿದರು. ಸರ್ವಧರ್ಮ ಪ್ರಾರ್ಥನೆ, ಸಂವಿಧಾನ ಗೀತೆಯಿಂದ ಪ್ರಾರಂಭವಾದ ಕಟ್ಟೆ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿ ಮತ್ತು ಶಾಲಾ ಸಂಸತ್ತಿನಲ್ಲಿ ಸಾಧನೆ ತೋರಿದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಸದಾಶಿವ ಮೇತ್ರಿ
ಕಲಾ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿಕೊಳ್ಳಿ