ಕನ್ನಡಪ್ರಭ ವಾರ್ತೆ ಗದಗ
ಗದಗ ನಗರದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 12ರಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಶಾಲಾ ಶಿಕ್ಷಣ ಇಲಾಖೆ ಗದಗ ಹಾಗೂ ಪಿಎಂಶ್ರೀ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾ ಅಂತರ್ಗತ ಪ್ರಯೋಗ ದುರ್ಗಸಿಂಹನ ಪಂಚತಂತ್ರ ಕಥೆಗಳ ಕಲಿ-ಕಲಿಸು ಯೋಜನೆ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಂಡಿತ ಜವಾಹರಲಾಲ್ ನೆಹರು ದೇಶದ ಅಪ್ರತಿಮ ನಾಯಕ, ಜನಸೇವಕ ಹಾಗೂ ಶ್ರೇಷ್ಠ ಸಾಹಿತಿಯಾಗಿ ಸ್ವಾತಂತ್ರ್ಯ ಹೋರಾಟದ ರೂವಾರಿಯಾಗಿ ಶ್ರಮಿಸಿ ಸದಾ ಜನಮಾನಸದಲ್ಲಿ ಚಿರಾಯುವಾಗಿದ್ದಾರೆ. ಅಂತೆಯೇ, ಪಂಚತಂತ್ರ ಕಥೆಗಳು ನಮ್ಮ ಮನಃಪರಿವರ್ತನೆಗೆ ಪ್ರೇರಕವಾಗಿದ್ದು, ಈ ಕಥಾ ಯೋಜನೆಯ ಮೂಲಕ ಮಕ್ಕಳು ಮಹಾಕವಿ ದುರ್ಗಸಿಂಹನನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಕಡೇಮನಿ ಮಾತನಾಡಿ, ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಚಿಂತನೆಯಂತೆ ನಮ್ಮ ದೇಶ ಭವ್ಯ ಭಾರತವಾಗಿ ನಿರ್ಮಾಣವಾಗಿದೆ. ದುರ್ಗಸಿಂಹನಂತಹ ಮಹಾಕವಿಯನ್ನು ಮಕ್ಕಳಿಗೆ ಪರಿಚಯಿಸಿ, ಕಥೆಗಳ ಮೂಲಕ ಸೃಜನಶೀಲತೆಯನ್ನು ಬೆಳೆಸಲು ಐ.ಎಫ್.ಎ ಸಂಯೋಜಕ ಬಸವರಾಜ ನೆಲಜೇರಿ ಉತ್ತಮ ಬೋಧನೆ ಮಾಡಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಾಲೆಯ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ನಗರಸಭೆ ಸದಸ್ಯೆ ಲಕ್ಷ್ಮೀ ಸಿದ್ದಮ್ಮನಹಳ್ಳಿ, ಮುಖ್ಯೋಪಾಧ್ಯಾಯ ಕೆ.ಡಿ. ತಳವಾರ, ಹಿರಿಯ ಶಿಕ್ಷಕ ಎಚ್.ಆರ್. ಕೋಣಿಮನಿ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಸಿ. ನಾಗರಹಳ್ಳಿ, ವಸಂತ ಸಿದ್ದಮ್ಮನಹಳ್ಳಿ, ಎಂ.ಎಸ್. ಮುಲ್ಲಾನವರ, ದುದ್ದುಗೌಡ ಪಾಟೀಲ, ಸಿದ್ದಲಿಂಗಯ್ಯ ನಮಸ್ತೆಮಠ, ಎಸ್.ಆರ್. ಕಂಪ್ಲಿ, ವೆಂಕಪ್ಪ ತಾಳದವರ ಹಾಗೂ ಪವಿತ್ರಾ ಕಾತರಕಿ ಮುಲ್ಲಾನವರ ಉಪಸ್ಥಿತರಿದ್ದರು.
ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ