ದೀಪಾವಳಿ ಹಬ್ಬದ ಪ್ರಯುಕ್ತ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 13ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದಲ್ಲಿ ಅದ್ಧೂರಿಯಾಗಿ ಇತ್ತೀಚೆಗೆ ಆಚರಿಸಲಾಯಿತು.
ಮಡಿಕೇರಿ : ದೀಪಾವಳಿ ಹಬ್ಬದ ಪ್ರಯುಕ್ತ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 13ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದಲ್ಲಿ ಅದ್ಧೂರಿಯಾಗಿ ಇತ್ತೀಚೆಗೆ ಆಚರಿಸಲಾಯಿತು.
ಉದ್ಘಾಟಿಸಿದ ಸಮಾಜ ಸೇವಕರಾದ ಎಡಕೇರಿ ಪ್ರಸನ್ನ ಅವರು ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.ವೇದಿಕೆಯಲ್ಲಿ ಫ್ಯಾಷನ್ ಶೋ, ಛದ್ಮವೇಷ, ಹಾಡುಗಳು, ಸಮೂಹ ನೃತ್ಯ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ತಮಗೆ ಲಭಿಸಿದ ನಗದನ್ನು ಸಂಘದ ಸದಸ್ಯ ಉಮೇಶ್ ಅವರ ಚಿಕಿತ್ಸೆಗೆ ಹಣ ಸಹಾಯ ಮಾಡಿ ಮಾನವೀಯತೆ ಮೆರೆದರು.ಅಧ್ಯಕ್ಷತೆಯನ್ನು ಕೆ.ಗಣೇಶ್ ವಹಿಸಿದ್ದರು. ಉದ್ಯಮಿ ಗಿರೀಶ್ ಮಲ್ಲಪ್ಪ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜನಾರ್ದನ, ವೈದ್ಯ ರಾಜಾರಾಮ್, ಸಂಘದ ಹಿರಿಯ ಸದಸ್ಯ ಅಯ್ಯಪ್ಪ, ಸಂಘದ ಮುಖ್ಯ ಸಲಹೆಗಾರ ಅಪ್ಪು ಮಹೇಶ್, ಸಂಘದ ಉಪಾಧ್ಯಕ್ಷ ರಮೇಶ್, ಸಂಘದ ಯುವ ನಾಯಕ ಆದರ್ಶ್ ಉಪ್ಪಾರ, ಮಹಿಳಾ ಘಟಕದ ಉಪಾಧ್ಯಕ್ಷೆ ನೇತ್ರಾವತಿ, ಹಿರಿಯರಾದ ಸಾವಿತ್ರಿ ಹಾಗೂ ತಂಗಮಣಿ, ಶಿಕ್ಷಕ ಭರತ್ ಉಪಸ್ಥಿತರಿದ್ದರು. ಪ್ರತಿಮಾ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಶರತ್ ವಂದಿಸಿದರು.