ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ, ಬದುಕಿನ ಸಂಕಷ್ಟ, ಸವಾಲುಗಳ ನಡುವೆಯೂ ಸಮಾಜಕ್ಕೆ ಕೊಡುಗೆ ನೀಡಬೇಕೆನ್ನುವ ಚಿಂತನೆಯೊಂದಿಗೆ ಶಾಂತಿ ಅಚ್ಚಪ್ಪ ನಡೆಯುತ್ತಿದ್ದಾರೆ ಎಂದು ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಹೇಳಿದರು.
ಮಡಿಕೇರಿ : ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ, ಬದುಕಿನ ಸಂಕಷ್ಟ, ಸವಾಲುಗಳ ನಡುವೆಯೂ ಸಮಾಜಕ್ಕೆ ಕೊಡುಗೆ ನೀಡಬೇಕೆನ್ನುವ ಚಿಂತನೆಯೊಂದಿಗೆ ಶಾಂತಿ ಅಚ್ಚಪ್ಪ ನಡೆಯುತ್ತಿದ್ದಾರೆ ಎಂದು ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಹೇಳಿದರು.
ಬುಡಕಟ್ಟು ಸಮುದಾಯದ ಕಲ್ಯಾಣಕ್ಕೆ ನಿರಂತರ ಪರಿಶ್ರಮ, ತಳ ಸಮುದಾಯಗಳಿಗೆ ನೆರವಿನ ಹಸ್ತ ಚಾಚಿ ಸಾಮಾಜಿಕ ಸೇವಾಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಡಾ.ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರ ಜೀವನಗಾಥೆ ಶಾಂತ ಸಾಗರವನ್ನು ಸಾಹಿತಿ ಟಿ.ಆರ್.ಪ್ರಶಾಂತ್ ಅಕ್ಷರ ರೂಪಕ್ಕಿಳಿಸಿದ್ದು, ಮಂಗಳವಾರ ಪುಸ್ತಕದ ಮುಖ ಪುಟವನ್ನು ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಿ ಮಾತನಾಡಿದರು.ದುಬೈನಲ್ಲಿ ಪುಸ್ತಕ ಬಿಡುಗಡೆ: ತಮ್ಮ ಜೀವನ ಚರಿತ್ರೆಯನ್ನು ಲೇಖಕ ಟಿ.ಆರ್.ಪ್ರಶಾಂತ್ ಶಾಂತ ಸಾಗರ ಶೀರ್ಷಿಕೆಯಡಿ ರಚಿಸಿದ್ದಾರೆ. ಈ ಪುಸ್ತಕವನ್ನು ೨೨ರಂದು ದುಬೈನಲ್ಲಿ ಅಲ್ಲಿನ ಕನ್ನಡಿಗರಿಂದ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆಂದು ಮಾಹಿತಿ ನೀಡಿದರು.ಸಾಹಿತಿ ಟಿ.ಆರ್.ಪ್ರಶಾಂತ್ ಮಾತನಾಡಿ, ಶಾಂತ ಸಾಗರ ಪುಸ್ತಕ ಕನ್ನಡ, ಇಂಗ್ಲಿಷ್ ಮತ್ತು ಕೊಡವ ಭಾಷೆಯಲ್ಲಿ ಹೊರತರಲಾಗುತ್ತದೆ. ಕನ್ನಡ ಭಾಷೆಯ ಶಾಂತಿ ಸಾಗರವನ್ನು ಇಂಗ್ಲಿಷ್ಗೆ ನಾನೇ ಅನುವಾದ ಮಾಡಿದ್ದೇನೆ. ಕೊಡವ ಭಾಷೆಗೆ ಕಿಶನ್ ಉತ್ತಪ್ಪ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ಮತ್ತು ಕೊಡವ ಭಾಷಾ ಕೃತಿಗಳನ್ನು ಸ್ಥಳೀಯವಾಗಿ ಶೀಘ್ರದಲ್ಲೆ ಬಿಡುಗಡೆ ಮಾಡಲಾಗುತ್ತದೆಂದರು.
ಅತ್ತೂರು ಗ್ರಾಮದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆ ಸ್ಥಾಪಿಸಿ, ಆ ವಿಭಾಗದ ಮಕ್ಕಳ ಶಿಕ್ಷಣಕ್ಕೆ ಶಾಂತಿ ಅಚ್ಚಪ್ಪ ಶ್ರಮಿಸುತ್ತಿದ್ದಾರೆಂದು ಮಾಹಿತಿ ನೀಡಿದರು. ಬೊಟ್ಟೋಳಂಡ ನೈಲಾ ಗಣೇಶ್ ಮಾತನಾಡಿ, ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಸಮಾಜದ ದುರ್ಬಲ ವರ್ಗದ ಜನರಿಗೆ ನಿರಂತರವಾಗಿ ನೆರವಿನ ಹಸ್ತ ಚಾಚುತ್ತಾ, ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಅಪ್ಪನೆರವಂಡ ಶಾಂತಿ ಅಚ್ಚಪ್ಪ ಇದ್ದರು.