ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶಿಕ್ಷಕರ ಭವನದಲ್ಲಿ ವಯೋ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆ.ಬಿ.ಬೋರೇಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕ ರಂಗಸ್ವಾಮಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ತಾಲೂಕು ನಿವೃತ್ತ ಸರ್ಕಾರಿ ದೈಹಿಕ ಶಿಕ್ಷಕರ ಸಂಘದಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ತಿಬ್ಬೇಗೌಡ ಅಭಿನಂದಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ನಜೀರ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪದಾಧಿಕಾರಿಗಳಾದ ನರಸಿಂಹರಾಜೇ ಅರಸ್, ವಸಂತಕುಮಾರ, ಶ್ರೀಕಂಠೇಗೌಡ, ಕಾಳೇಗೌಡ, ಶಿವಲಿಂಗಪ್ಪ, ನಂಜಪ್ಪ, ಜವರೇಗೌಡ ಮಂಜುನಾಥ್, ಪ್ರಕಾಶ್, ಬೊಮ್ಮೇಗೌಡ, ರಾಮಚಂದ್ರ, ಕೃಷ್ಣೇಗೌಡ, ಸ್ವಾಮಿ, ಪರಶಿವಮೂರ್ತಿ, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಕರೀಗೌಡ, ನಿಂಗಪ್ಪ, ಕೃಷ್ಣೇಗೌಡ, ರೇಣುಕಾ, ಜವರಯ್ಯ, ಮಂಜು ಸೇರಿದಂತೆ ಹಲವರು ಭಾಗವಹಿಸಿದ್ದರು.ಯಶಸ್ವಿನಿ ಕಾರ್ಡ್ ನೋಂದಣಿ, ನವೀಕರಣ ಆರಂಭ
ಮಂಡ್ಯ:2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿಸಲು ಮತ್ತು ನವೀಕರಣ ಕಾರ್ಯ ನ.30ರಿಂದ ಆರಂಭಗೊಂಡಿದೆ. ಸದಸ್ಯರನ್ನು ನೋಂದಾಯಿಸಲು ನೋಂದಣಿ ಶುಲ್ಕ ಗ್ರಾಮೀಣ ಸಹಕಾರ ಸಂಘಗಳಲ್ಲಿ ನೋಂದಣಿಯಾದ ಸದಸ್ಯರ ಕುಟುಂಬದ ಒಟ್ಟು 4 ಜನರಿಗೆ 500 ರು., ನಾಲ್ಕಕ್ಕಿಂತ ಹೆಚ್ಚಾದಲ್ಲಿ ಒಬ್ಬ ಸದಸ್ಯರಿಗೆ 100 ರು. ಹೆಚ್ಚಿಗೆ ನೋಂದಣಿ ಶುಲ್ಕ ಪಾವತಿಸಬೇಕಿರುತ್ತದೆ ಹಾಗೂ ನಗರ ಸಹಕಾರ ಸಂಘಗಳಲ್ಲಿ ನೋಂದಣಿಯಾದ ಸದಸ್ಯರ ಕುಟುಂಬದ ಒಟ್ಟು 4 ಜನರಿಗೆ 1000 ರು., ನಾಲ್ಕಕ್ಕಿಂತ ಹೆಚ್ಚಾದಲ್ಲಿ ಒಬ್ಬ ಸದಸ್ಯರಿಗೆ 200 ರು. ಹೆಚ್ಚುವರಿ ನೋಂದಣಿ ಶುಲ್ಕ ಪಾವತಿಸಬೇಕು. ಪ.ಜಾತಿ, ಪ.ಪಂಗಡ ಸದಸ್ಯರ ನೋಂದಣಿ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಸಮುದಾಯದ ವಿವರಗಳನ್ನು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದಲ್ಲಿರುವಂತೆ ಆರ್ ಡಿ ಸಂಖ್ಯೆಯನ್ನು ಕಡ್ಡಾಯವಾಗಿ ತಪ್ಪದೇ ನಮೂದಿಸಬೇಕು. ಈ ಸಮುದಾಯದ ಸದಸ್ಯರನ್ನು ಒಂದೇ ಬಾರಿ ಮೂರು ವರ್ಷಗಳ ಅವಧಿಗೆ ನೋಂದಾಯಿಸಿಕೊಂಡು ಕಾರ್ಡ್‌ಗಳನ್ನು ವಿತರಿಸಲಾಗುವುದು.
2024-25ನೇ ಸಾಲಿನ ಯಶಸ್ವಿನಿ ಯೋಜನೆಯ ವಂತಿಕೆ ಪಾವತಿಸಲು ಡಿ.1ರಿಂದ 31ರವರೆಗೆ ದಿನಾಂಕ ನಿಗದಿಪಡಿಸಿದೆ. ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ರು. ನಿಗದಿಪಡಿಸಿದೆ. ಈ ಯೋಜನೆಯಡಿ ಒಟ್ಟು 1650 ಕಾಯಿಲೆಗಳಿಗೆ ಮತ್ತು 478 (ಐಸಿಯು) ಚಿಕಿತ್ಸೆಗಳು ಸೇರಿ ಒಟ್ಟು 2128 ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಗೆ ಅಳವಡಿಸಿಕೊಂಡು ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇದರ ಪ್ರಯೋಜನೆ ಪಡೆಯಬಹುದು.ಡಿ.26ಕ್ಕೆ ದಿಶಾ ಸಭೆಮಂಡ್ಯ:
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ ಸಭೆ)ಯನ್ನು ಡಿ.26 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಅವರು ತಿಳಿಸಿದ್ದಾರೆ.