ಜೀವ ಸಂಕುಲಗಳ ಉಳಿವಿಗೆ ಪಣತೊಡಿ: ಕೆ.ಟಿ.ಹನುಮಂತು

KannadaprabhaNewsNetwork |  
Published : May 24, 2026, 02:00 AM IST
23ಕೆಎಂಎನ್ ಡಿ32 | Kannada Prabha

ಸಾರಾಂಶ

ಪ್ರಾಕೃತಿಕ ಭೂಮಿಯಲ್ಲಿ ವೈವಿಧ್ಯತೆಯಲ್ಲಿ ಅಸಂಖ್ಯಾತ ಜೀವ ಸಂಕುಲಗಳು ಹುಟ್ಟಿ ಬೆಳೆಯುತ್ತವೆ. ಸಸ್ಯ ಸಂಪತ್ತು, ಪಕ್ಷಿ ಸಂಪತ್ತು, ಕೀಟಸಂಪತ್ತು, ಸೂಕ್ಷ್ಮಜೀವಿ ಸಂಪತ್ತು, ಪ್ರಾಣಿ ಸಂಪತ್ತು ಹೀಗೆ ಅನೇಕ ವೈವಿಧ್ಯತೆಯ ಜೀವಸಂಕಲುಗಳಿವೆ. ಇವುಗಳು ಮನುಷ್ಯನ ದುರಾಸೆಯಿಂದ ನಾಶವಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮನುಷ್ಯನ ದುರಾಸೆಯಿಂದ ನಾಶವಾಗುತ್ತಿರುವ ಅಸಂಖ್ಯಾತ ಜೀವ ಸಂಕುಲಗಳ ಉಳಿವಿಗೆ ಪಣತೊಡಬೇಕಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಸ್ನೇಹ ಬಳಗ ಅಲಯನ್ಸ್ ಸಂಸ್ಥೆ, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನ ಪ್ರಯುಕ್ತ ಜಾಗತೀಕರಣ ಪರಿಣಾಮಕ್ಕಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು ಎಂಬ ಘೋಷವಾಕ್ಯದೊಡನೆ ಸಸಿ ನೆಡುವುದು ಪೋಷಿಸುವುದು ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.

ಪ್ರಾಕೃತಿಕ ಭೂಮಿಯಲ್ಲಿ ವೈವಿಧ್ಯತೆಯಲ್ಲಿ ಅಸಂಖ್ಯಾತ ಜೀವ ಸಂಕುಲಗಳು ಹುಟ್ಟಿ ಬೆಳೆಯುತ್ತವೆ. ಸಸ್ಯ ಸಂಪತ್ತು, ಪಕ್ಷಿ ಸಂಪತ್ತು, ಕೀಟಸಂಪತ್ತು, ಸೂಕ್ಷ್ಮಜೀವಿ ಸಂಪತ್ತು, ಪ್ರಾಣಿ ಸಂಪತ್ತು ಹೀಗೆ ಅನೇಕ ವೈವಿಧ್ಯತೆಯ ಜೀವಸಂಕಲುಗಳಿವೆ. ಇವುಗಳು ಮನುಷ್ಯನ ದುರಾಸೆಯಿಂದ ನಾಶವಾಗುತ್ತಿವೆ ಎಂದು ಆಂತಕ ವ್ಯಕ್ತಪಡಿಸಿದರು.

ಇತ್ತೀಚಿನ ವರದಿ ಪ್ರಕಾರ ಜಾಗತೀಕ ತಾಪಮಾನದಿಂದ ಅಳಿವಿನಂಚಿನಲ್ಲಿರುವ 16 ಪ್ರಭೇದಗಳ ಪುನರುಜ್ಜೀವನಕ್ಕಾಗಿ ‘ವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ’ಯ ಯೋಜನೆಗಳು ಬಂದಿವೆ. ಸಂರಕ್ಷಣೆಗಾಗಿ ಪಣತೊಡಲಾಗಿದೆ, ಜೇನು, ಗುಬ್ಬಚ್ಚಿ, ರಣಹದ್ದು, ಹಾವುಗಳು, ನರಿಗಳು ಹೀಗೆ ಹಲವು ಪ್ರಾಣಿ-ಪಕ್ಷಿಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದಿಸಿದರು.

ಅಲಯನ್ಸ್ ಸಂಸ್ಥೆ ಮಂಡ್ಯ ಜಿಲ್ಲಾ 1ನೇ ಉಪರಾಜ್ಯಪಾಲ ಚಂದ್ರಶೇಖರ್ ಮಾತನಾಡಿ, ಜೈವಿಕ ವೈವಿಧ್ಯತೆ ಸಂಪನ್ಮೂಲಗಳು ನಾಗರಿಕತೆಗಳನ್ನು ನಿರ್ಮಿಸುವ ಆಧಾರ ಸ್ತಂಭಗಳಾಗಿವೆ. ಮೀನು ಸುಮಾರು ಮೂರು ಶತಕೋಟಿ ಜನರಿಗೆ ಶೇ.20 ರಷ್ಟು ಪ್ರೋಟೀನ್ ಅನ್ನು ಒದಗಿಸುತ್ತಿದೆ ಎಂದು ನುಡಿದರು.

80 ಪ್ರತಿಶತಕ್ಕೂ ಹೆಚ್ಚು ಸಸ್ಯಗಳು ಮನುಷ್ಯರಿಗೆ ಆಹಾರ ಒದಗಿಸುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶೇ.80 ರಷ್ಟು ಜನರು ಮೂಲ ಆರೋಗ್ಯ ರಕ್ಷಣೆಗಾಗಿ ಸಾಂಪ್ರದಾಯಿಕ ಸಸ್ಯ ಆಧಾರಿತ ಔಷಧಗಳನ್ನು ಅವಲಂಬಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಂಗಣದ ಅಂಚಿನಲ್ಲಿ ಹಲವು ಸಸಿಗಳನ್ನು ನೆಟ್ಟು ನೀರೆರೆದು ಪೋಷಣೆಗಾಗಿ ಒಬ್ಬಬ್ಬರು ಒಂದೊಂದು ಗಿಡವನ್ನು ದತ್ತು ಪಡೆದರು. ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಷಡಕ್ಷರಿ, ಪರಿಸರ ಪ್ರೇಮಿ ಪುರುಷೋತ್ತಮ್, ಶಿಕ್ಷಕ ರಾಜೇಗೌಡ, ಅಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಧನಂಜಯ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಕೃಷಿಕ ಅಲಯನ್ಸ್ ಸಂಸ್ಥೆ ಮೋಹನ್, ಪಾಪಯ್ಯ, ಕೃಷ್ಣೇಗೌಡ, ಸ್ನೇಹ ಬಳಗ ಅಲಯನ್ಸ್ ಸಂಸ್ಥೆ ಜೋಗಿಗೌಡ, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ನಿತಿನ್‌ಗೌಡ, ಡಾ.ವೈ.ಎಚ್.ರತ್ನಮ್ಮ, ಲೋಕೇಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ
ದಾಖಲೆಗಳು ಸರಿಯಾಗಿದ್ದರೆ ನಿವೇಶನಗಳು ಖಚಿತ: ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ