ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳಾ ವಿಭಾಗದ ಥ್ರೋಬಾಲ್ ಪಂದ್ಯದಲ್ಲಿ ಎಕ್ಸೆಲ್ ಪಬ್ಲಕ್ ಶಾಲಾ ಸಿಬ್ಬಂದಿ ವರ್ಗದವರು ವಿಜೇತರಾಗಿ ಪರ್ಯಾಯ ಪಾರಿತೋಷಕವನ್ನು ಪಡೆದರು. ಎನ್‌ಪಿಎಸ್ ಶಾಲೆಯು ರನ್ನರ್ ತಂಡವಾಗಿ ಹೊರಹೊಮ್ಮಿತು. ಎನ್‌ಪಿಎಸ್ ಶಾಲೆಯ ಜಿ. ಬಿಂದಿಯಾ ಸರಣಿ ಶ್ರೇಷ್ಠ ಹಾಗೂ ಇಪಿಎಸ್ ಶಾಲೆಯ ಪಂದ್ಯ ಶ್ರೇಷ್ಠ ಪಟು ಕೀರ್ತಿಗೆ ಭಾಜನರಾದರು.
ಕ್ರಿಕೆಟ್ ಪಂದ್ಯದಲ್ಲಿ ಬೆಟ್ಟದಪುರದ ಎಸ್ಎಂಎಸ್ ವಿದ್ಯಾಸಂಸ್ಥೆಯು ವಿಜೇತರಾಗಿ ಪರ್ಯಾಯ ಪಾರಿತೋಷಕವನ್ನು ಪಡೆದರು. ಪ್ರಮತಿ ಹಿಲ್ವ್ಯೂಅಕಾಡೆಮಿ ವಿದ್ಯಾಸಂಸ್ಥಯು ರನ್ನರ್ ತಂಡವಾಗಿ ಹೊರಹೊಮ್ಮಿತು. ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಜಿ. ಗುರುಪ್ರಸಾದ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು, ಬೆಟ್ಟದಪುರದ ಎಸ್ಎಂಎಸ್ ಬೆಟ್ಟದಪುರ ವಿದ್ಯಾಸಂಸ್ಥೆಯ ಟಿ.ಕೆ. ಪ್ರತಾಪ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿದರು. ಮುಖ್ಯ ಅತಿಥಿಯಾಗಿದ್ದ ದೇಶೀಯ ಕ್ರಿಕೆಟ್ ಆಟಗಾರರಾದ ದರ್ಶನ್ ಅವರು , ವಿಜೇತರಿಗೆ ಪಾರಿತೋಷಕ ವಿತರಿಸಿದರು.