ರಾಮನಗರ: ನಾಗರಿಕರ ಆರೋಗ್ಯ ಸುಧಾರಣೆ ವಿಚಾರದಲ್ಲಿ ವೈದ್ಯರು ಮತ್ತು ಫಾರ್ಮಾಸಿಸ್ಟ್‌ಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಉತ್ತಮ ಸೇವೆ ಸಲ್ಲಿಸಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಹೇಳಿದರು.
ತಾಲೂಕಿನ ಬಿಡದಿಯಲ್ಲಿ ವಿಶ್ವ ಫಾರ್ಮಾಸಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ಇರುವಷ್ಟೇ ಮಹತ್ವ ಫಾರ್ಮಾಸಿಸ್ಟ್‌ಗಳಿಗೂ ಇದೆ ಎಂದರು.ತುಮಕೂರು ವಲಯದ ಡೆಪ್ಯೂಟಿ ಡ್ರಗ್ ಕಂಟ್ರೋಲರ್ ಮಲ್ಲಿಕಾರ್ಜುನ್ ನಾಗೂರ್ ಮಾತನಾಡಿ, ಶೆಡ್ಯೂಲ್ ಹೆಚ್, ಶೆಡ್ಯೂಲ್ ಎಚ್ 1, ಔಷಧಗಳನ್ನು ನೋಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾರಬೇಡಿ. ಆಂಟಿ ಮೈಕ್ರೋಬಿಯಲ್ ಪ್ರತಿರೋಧವನ್ನು ತಡೆಯುವ ವಿಚಾರದಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರಾದ ನಮ್ರತಾ ಹಳ್ಳೂರ ಮಾತನಾಡಿ, ಭಾರತದಲ್ಲಿ ಔಷಧ ತಯಾರಿಕಾ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ದೇಶ ಈಗ ನವೀನ ಹಾಗೂ ಪರಿಣಾಮಕಾರಿ ಔಷಧಗಳನ್ನು ತಯಾರಿಸುತ್ತಿದೆ. ಈ ಕ್ಷೇತ್ರದಲ್ಲಿ ಭಾರತ ವಿಶ್ವದ ಗಮನ ಸೆಳೆದಿದೆ, ಔಷಧ ಕ್ಷೇತ್ರದಲ್ಲಿ ಈಗ ಅಗಾಧವಾದ ಅವಕಾಶಗಳಿವೆ ಎಂದು ಹೇಳಿದರು.ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಔಷಧ ವ್ಯಾಪಾರಿಗಳ ಸಂಘದ ಗೌರವ ಅಧ್ಯಕ್ಷ ಕೆ.ಎಸ್.ಕೃಷ್ಣ, ಅಧ್ಯಕ್ಷ ಎಚ್.ಮಂಜುನಾಥ್, ಕಾರ್ಯದರ್ಶಿ ರೂಪೇಶ್ ಕುಮಾರ್, ಮುಖ್ಯ ಅತಿಥಿ ಚನ್ನಪಟ್ಟಣ ಪುಣ್ಯ ಆಸ್ಪತ್ರೆಯ ವೈದ್ಯೆ ಡಾ. ಪದ್ಮಾವತಿ, ಐಕಾನ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಎಸ್ ರಾಜಶೇಖರ್ ಮಾತನಾಡಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಖಜಾಂಚಿ ಆರ್.ಕೆ.ಅತೀಕ್, ಚನ್ನಪಟ್ಟಣ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಚ್.ಬಿ.ಜಯಪ್ರಕಾಶ್, ಕಾರ್ಯದರ್ಶಿ ಎಸ್.ಹರೀಶ್, ಖಜಾಂಚಿ ಹರೀಕೃಷ್ಣ ಆರ್, ಬಿಡದಿ ಹೋಬಳಿ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ರಾಜಶೇಖರ್, ಕಾರ್ಯದರ್ಶಿ ಕೆ.ಮೋಹನ್ ರಾಜ್, ಮಾಗಡಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಶಂಕರ್, ಪುರುಷೋತ್ತಮ, ಕುದೂರು-ಸೋಲೂರು ಹೋಬಳಿ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ನಾಗೇಂದ್ರ, ಬಿಡದಿ ಹೋಬಳಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಪೌಂಢೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಜಯರಾಮ್ ಖಜಾಂಚಿ ಪ್ರಕಾಶ್ ನಾಗವಾರ, ವರುಣ್, ನವೀನ್ ಗವಿರಾಜ್, ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಔಷಧಿ ವ್ಯಾಪಾರಿಗಳು ಭಾಗವಹಿಸಿದ್ದರು.ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ದಕ್ಷಿಣ ವೃತ್ತ, ಐಕಾನ್ ಫಾರ್ಮಸಿ ಕಾಲೇಜು, ಬಿಡದಿ, ಔಷಧಿ ವ್ಯಾಪಾರಿಗಳ ಸಂಘ, ಬಿಡದಿ ಹೋಬಳಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಆಂಟಿಬಯೋಟಿಕ್ ಔಷಧಗಳ ಅತಿಯಾದ ಬಳಕೆ ಮಾಡಬಾರದು, ವೈದ್ಯರ ಸಲಹೆ ಇಲ್ಲದೆ ಬಳಸಿ ದುರುಪಯೋಗ ಪಡೆದುಕೊಳ್ಳಬಾರದು ಎಂದು ಅಭಿಯಾದನ ಮೂಲಕ ನಾಗರೀಕರಲ್ಲಿ ಜಾಗೃತಿ ಮೂಡಿಸಲಾಯಿತು. ಐಕಾನ್ ಫಾರ್ಮಸಿ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕುಗಳಿಂದ ಆಗಮಿಸಿದ್ದ ಫಾರ್ಮಸಿಸ್ಟಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.
5ಕೆಆರ್ ಎಂಎನ್ 10.ಜೆಪಿಜಿ ರಾಮನಗರ ತಾಲೂಕಿನ ಬಿಡದಿಯಲ್ಲಿ ವಿಶ್ವ ಫಾರ್ಮಾಸಿ ದಿನಾಚರಣೆ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು.