ಕನ್ನಡಪ್ರಭ ವಾರ್ತೆ ಬೆಂಗಳೂರು
₹13.76 ಕೋಟಿ ಮೌಲ್ಯದ ಚರಾಸ್ತಿ, ₹9.58 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು ₹23.35 ಕೋಟಿ ಜಪ್ತಿ ಮಾಡಲಾಗಿದೆ. ಕೆ.ಸಿ.ವೀರೇಂದ್ರ ಸೇರಿ ಆರೋಪಿಗಳಾದ ಗುಲ್ಷನ್ ಖಟ್ಟರ್ ಮತ್ತು ನೇಹಾ ಟಂಡನ್ ಅವರಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಮೂಲಕ ಪ್ರಕರಣದಲ್ಲಿ ಈವರೆಗೆ ಇ.ಡಿ ₹343 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ. ತನಿಖೆ ವೇಳೆ ವೀರೇಂದ್ರ ಮತ್ತು ಸಹಚರರು ನಿಯಂತ್ರಿಸುತ್ತಿದ್ದರು ಎನ್ನಲಾದ ಬೆಟ್ಟಿಂಗ್ ವೆಬ್‌ಸೈಟ್‌ಗಳು, ಪೇಮೆಂಟ್ ಗೇಟ್‌ವೇಗಳು, ಶೆಲ್ ಕಂಪನಿಗಳು ಮತ್ತು ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದ ರಾಷ್ಟ್ರವ್ಯಾಪಿ ಬೃಹತ್ ಜಾಲ ಪತ್ತೆಯಾಗಿದೆ. ಈ ಜಾಲವನ್ನು ಅಕ್ರಮವಾಗಿ ಆದಾಯ ಗಳಿಸಲು ಮತ್ತು ಅಕ್ರಮವಾಗಿ ಹಣ ವರ್ಗಾಯಿಸಲು ಬಳಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.ಗುಲ್ಶನ್ ಖಟ್ಟರ್ ಅವರು ಮಾಲೀಕರಾಗಿರುವ ಫೋನ್‌ಪೈಸಾ ಮೇಮೆಂಟ್ ಸೆಲ್ಯೂಷನ್ ಪ್ರೈ.ಲಿ ಸಂಸ್ಥೆ ಮೂಲಕ ಅಪರಾಧದ ಆದಾಯ ಸ್ವೀಕರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಣಕಾಸು ಮಧ್ಯವರ್ತಿಯಾಗಿ ಸೇವೆಗಳನ್ನು ಒದಗಿಸಿದ್ದಕ್ಕಾಗಿ ಗುಲ್ಶನ್ ಖಟ್ಟರ್ ಅವರು ಭಾರಿ ಮೊತ್ತದ ಕಮಿಷನ್ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.
₹2,300 ಕೋಟಿಗೂ ಅಧಿಕ
ರಾಷ್ಟ್ರವ್ಯಾಪಿ ಇರುವ ಜಾಲದ ಮೂಲಕ ಬರೋಬ್ಬರಿ ₹2,300 ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆ ನಡೆದಿರುವುದಾಗಿ ಇ.ಡಿ ಸ್ಪಷ್ಟಪಡಿಸಿದೆ. ಈ ಹಣವನ್ನು ಹಲವು ಬ್ಯಾಂಕ್ ಖಾತೆಗಳು, ಹವಾಲಾ ಮಾರ್ಗಗಳು ಮತ್ತು ವಿದೇಶಿ ಸಂಸ್ಥೆಗಳ ಮೂಲಕ ವಿವಿಧ ಹಂತಗಳಲ್ಲಿ ಹಣ ವರ್ಗಾಯಿಸಿ, ಐಷಾರಾಮಿ ಆಸ್ತಿಗಳ ಖರೀದಿ, ವ್ಯವಹಾರಗಳಲ್ಲಿ ಹೂಡಿಕೆ, ವಿದೇಶಗಳಿಗೆ ಹಣ ರವಾನೆ ಹಾಗೂ ವೈಯಕ್ತಿಕ ವೆಚ್ಚಗಳಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.
ಕಿಂಗ್ 567 ಆ್ಯಪ್ ಮೂಲಕ ಬೆಟ್ಟಿಂಗ್ ದಂಧೆ!
---
ಆಸ್ತಿ ಮುಟ್ಟುಗೋಲು
-ಬಾಕ್ಸ್-
60ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಕಳೆದ 2025ರ ಆಗಸ್ಟ್‌ನಲ್ಲಿ ಇ.ಡಿ ಅಧಿಕಾರಿಗಳು ಶಾಸಕ ವೀರೇಂದ್ರ ಸೇರಿ ದೇಶದ ವಿವಿಧ ರಾಜ್ಯಗಳ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಆ ವೇಳೆ ಕಂತೆ ಕಂತೆ ನಗದು, ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳು, ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಹಾಗೂ ಹಲವು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಅಕ್ರಮ ಆನ್‌ಲೈನ್-ಆಫ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ವೀರೇಂದ್ರ ಅವರನ್ನು ಇ.ಡಿ ಬಂಧಿಸಿತ್ತು.