ಕನ್ನಡಪ್ರಭ ವಾರ್ತೆ ಸಿಂದಗಿ: ನಾಗಲೋಟದಲ್ಲಿ ಬೆಳೆಯುತ್ತಿರುವ ವಿಜ್ಞಾನದ ಮಧ್ಯದಲ್ಲಿ ನಮ್ಮ ಮಕ್ಕಳು ಬೆಳೆಯಬೇಕಾದರೆ ಅವರಿಗೆ ಶಿಕ್ಷಣದ ಜೊತೆಗೆ ಬೇರೆ ಬೇರೆ ಕೌಶಲ್ಯ, ತಂತ್ರಜ್ಞಾನ ಕಲಿಸುವುದು ಅನಿವಾರ್ಯವಾಗಿದೆ ಎಂದು ಎಚ್.ಜಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.
ಸಂಸ್ಥೆಯ ಮಾರ್ಗದರ್ಶಕ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಮಕ್ಕಳಿಗೆ ನೀಡುವ ವಿವಿಧ ರೀತಿಯ ಕೌಶಲಗಳಿಂದ ವಿವೇಚನಾ ಶಕ್ತಿ ಮತ್ತು ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ಶಾಲೆಯ ಕಲಿಕೆಯು ಅತ್ಯಂತ ಸುಲಭವಾಗಿ ರೂಪಗೊಳ್ಳುತ್ತದೆ ಎಂದರು.
ಶಾಲೆಯ ಪ್ರಾಚಾರ್ಯ ಶಾನಿಮೋಲ್ ರಾಬಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳು ನೀಡಿದ ವಿವಿಧ ರೀತಿಯ ಚಟುವಟಿಕೆಗಳ ನಿರ್ಣಾಯಕರಾಗಿ ಶಿಕ್ಷಕಿ ಬಂಗಾರಿ ಕುಲಕರ್ಣಿ ಆಗಮಿಸಿದ್ದರು.ಸಂಸ್ಥೆಯ ಅಧ್ಯಕ್ಷರಾದ ನೀಲಮ್ಮ ಹೆಗ್ಗಣದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಟೇನಿ ರಾಬಿನ್ ಶಿಕ್ಷಕಿ ಪ್ರಿಯದರ್ಶಿನಿ ನಿರೂಪಿಸಿದರು. ಈ ವೇಳೆ ಮಕ್ಕಳಿಂದ ಪಠ್ಯೇತರ ಚಟುವಟಿಕೆಗಳಾದ ಆಶುಭಾಷಣ, ರಂಗೋಲಿ, ಛದ್ಮವೇಷ, ಕಸದಿಂದ ರಸ ಸೇರಿದಂತೆ ವಿವಿಧ ಚಟುವಟಿಕೆಗಳು ಮಕ್ಕಳಿಂದ ಮೂಡಿ ಬಂದವು. ಈ ಸಂದರ್ಭದಲ್ಲಿ ಪಾಲಕರು ಮತ್ತು ಶಿಕ್ಷಕ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.