ಸಸ್ಯಶಾಸ್ತ್ರದ ಧೃವತಾರೆ ಬಿ.ಜಿ.ಎಲ್ ಸ್ವಾಮಿ: ಟಿ.ಬಿ. ಕೋರಿಶೆಟ್ಟಿ

KannadaprabhaNewsNetwork |  
Published : Feb 07, 2024, 01:46 AM ISTUpdated : Feb 07, 2024, 04:01 PM IST
(ಫೋಟೋ 6ಬಿಕೆಟಿ6, ಕನ್ನಡದ ಶ್ರೇಷ್ಠ ಲೇಖಕರಾದ  ಹಾಗೂ ಸಸ್ಯಶಾಸ್ತ್ರಜ್ಞರಾದ ಬೆಂಗಳೂರು ಗುಂಡಪ್ಪ ಲಕ್ಷ್ಮೀ ನಾರಾಯಣ ಸ್ವಾಮಿಯವರ 106 ನೇ ಜನ್ಮ ವಾರ್ಷಿಕೋತ್ಸವವನ್ನು  ಆಚರಿಸಲಾಯಿತು.) | Kannada Prabha

ಸಾರಾಂಶ

ಬಿ.ಜಿ.ಎಲ್ ಸ್ವಾಮಿಯವರು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟರಲ್ಲದೆ, ವೈಜ್ಞಾನಿಕ ಬರಹಗಳಿಂದ ಸಸ್ಯಶಾಸ್ತ್ರದ ವಿಖ್ಯಾತ ವಿಜ್ಞಾನಿಗಳ ಗಮನ ಸೆಳೆದವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ. ಕೋರಿಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿ.ಜಿ.ಎಲ್ ಸ್ವಾಮಿಯವರು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು. ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟರಲ್ಲದೆ, ವೈಜ್ಞಾನಿಕ ಬರಹಗಳಿಂದ ಸಸ್ಯಶಾಸ್ತ್ರದ ವಿಖ್ಯಾತ ವಿಜ್ಞಾನಿಗಳ ಗಮನ ಸೆಳೆದವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ. ಕೋರಿಶೆಟ್ಟಿ ಹೇಳಿದರು.

ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಸ್ಯಶಾಸ್ತ್ರದ ವಿಭಾಗದಿಂದ ಕನ್ನಡದ ಶ್ರೇಷ್ಠ ಲೇಖಕ ಹಾಗೂ ಸಸ್ಯಶಾಸ್ತ್ರಜ್ಞ ಬೆಂಗಳೂರು ಗುಂಡಪ್ಪ ಲಕ್ಷ್ಮೀ ನಾರಾಯಣ ಸ್ವಾಮಿಯವರ 106ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮಾತನಾಡಿದರು. ಗುಂಡಪ್ಪ ಲಕ್ಷ್ಮೀ ನಾರಾಯಣ ಸ್ವಾಮಿ ಅವರು ಸಸ್ಯಶಾಸ್ತ್ರದ ಧೃವತಾರೆಯಾಗಿದ್ದರು. ಸಸ್ಯಗಳ ಅಂಗರಚನೆ ವಿಶೇಷವಾಗಿ ಸಸ್ಯಗಳ ಬೇರು ಮತ್ತು ಕಾಂಡಗಳ ನಡುವಿನ ಸಂಪರ್ಕಗಳ ರಚನೆ ಬಗ್ಗೆ ಅಧ್ಯಯನ ಮಾಡಿದ್ದರು. ಅಸ್ಕರಿನಾ ಮಹೇಶ್ವರಿ ಮುಂತಾದ ಸಸ್ಯಪ್ರಬೇಧಗಳನ್ನು ಕಂಡು ಹಿಡಿದರು. ಸಸ್ಯಗಳ ಚಿತ್ರಗಳನ್ನು ಸ್ವತಃ ರಚನೆ ಮಾಡುತ್ತಿದ್ದರು ಎಂದರು.

ವಿಭಾಗದ ಮುಖ್ಯಸ್ಥ ಪ್ರೊ ಬಸವರಾಜ ಸಾಲಿ, ಡಾ.ಮೊಹಮ್ಮದ ಯಾಸೀನ್‌ ದೊಡಮನಿ, ಸಿಬ್ಬಂದಿ ಕಾರ್ಯದರ್ಶಿ ಚಂದ್ರಕಾಂತ ಚೌಕಿಮಠ ಕೊಟ್ಟೆ ಜೋನಾ, ಸಂಗೀತಾ ಪಾಟೀಲ, ಪ್ರವೀಣ ಮೇಟಿ, ಪ್ರಮೋದ ಮೇಟಿ ಮುಂತಾದ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು