ಗುರುವಾರ ಲಿಂಗೈಕ್ಯರಾಗಿದ್ದ ತಾಲೂಕಿನ ಹಿರೂರ ಗ್ರಾಮದ ಅನ್ನದಾನೇಶ್ವರ ಮಠದ ೩೫ನೇ ಪೀಠಾಧಿಪತಿ ಶತಾಯುಷಿ ಸಂತ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ (೧೦೧) ಅವರ ಅಂತಿಮ ದರ್ಶನವನ್ನು ಶುಕ್ರವಾರ ವಿವಿಧ ಮಠಾಧೀಶರು, ಶಾಸಕರು, ವಿವಿಧ ರಾಜಕೀಯ ಮುಖಂಡರು ಹಾಗೂ ಭಕ್ತಸಮೂಹದವರು ಪಡೆದುಕೊಂಡರು. ಇದೆ ವೇಳೆ ಕಾಶಿ ಜಗದ್ಗುರುಗಳು ಕೂಡ ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಗುರುವಾರ ಲಿಂಗೈಕ್ಯರಾಗಿದ್ದ ತಾಲೂಕಿನ ಹಿರೂರ ಗ್ರಾಮದ ಅನ್ನದಾನೇಶ್ವರ ಮಠದ ೩೫ನೇ ಪೀಠಾಧಿಪತಿ ಶತಾಯುಷಿ ಸಂತ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ (೧೦೧) ಅವರ ಅಂತಿಮ ದರ್ಶನವನ್ನು ಶುಕ್ರವಾರ ವಿವಿಧ ಮಠಾಧೀಶರು, ಶಾಸಕರು, ವಿವಿಧ ರಾಜಕೀಯ ಮುಖಂಡರು ಹಾಗೂ ಭಕ್ತಸಮೂಹದವರು ಪಡೆದುಕೊಂಡರು. ಇದೆ ವೇಳೆ ಕಾಶಿ ಜಗದ್ಗುರುಗಳು ಕೂಡ ಆಗಮಿಸಿದ್ದರು.

ಲಿಂಗೈಕ್ಯ ಗುರುಶಾಂತವೀರ ಶಿವಾಚಾರ್ಯರ ಅಂತಿಮ ದರ್ಶನಕ್ಕೆ ಗ್ರಾಮದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ನಂತರ ಲಿಂಗೈಕ್ಯಶ್ರೀಗಳನ್ನು ಅಡ್ಡಪಲ್ಲಕ್ಕಿ ಮೂಲಕ ಗ್ರಾಮದ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದಲ್ಲಿಯೇ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಂತ್ಯಸಂಸ್ಕಾರದ ಪೂಜಾ ವಿಧಿ ವಿಧಾನವನ್ನು ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಸಾಸನೂರ-ತುಂಬಗಿ ಮಹಾಂತಲಿಂಗ ಶಿವಾಚಾರ್ಯರು, ಗುಂಡಕನಾಳ ಗುರುಲಿಂಗ ಶಿವಾಚಾರ್ಯರು, ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ನೆರವೇರಿಸಿ ಶ್ರೀಗಳ ಪೇಠವನ್ನು ಪ್ರಸ್ತುತ ಮಠದ ಶ್ರೀಗಳಾದ ಜಯಸಿದ್ದೇಶ್ವರ ಮಹಾಸ್ವಾಮಿಗಳಿಗೆ ತೊಡಸಿದರು. ಈ ಸಮಯದಲ್ಲಿ ಮಾಗಣಗೇರಿಯ ಡಾ.ವಿಶ್ವರಾಧ್ಯ ಶಿವಾಚಾರ್ಯರು, ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರು ಸಿಂದಗಿ ಸಾರಂಗಮಠ, ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗಿರಿಸಾಗರ ಸ್ವಾಮಿಗಳು, ನಾವದಗಿ ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ರುದ್ರಮುನಿ ಸ್ವಾಮಿಗಳು, ಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯರು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯರು, ರಾಚೋಟೇಶ್ವರ ಶಿವಾಚಾರ್ಯರು, ಸುಗೂರೇಶ್ವರ ಶಿವಾಚಾರ್ಯರು, ಶಿವಕುಮಾರ ಸ್ವಾಮಿಗಳು, ಪಡೇಕನೂರ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಿದ್ದರಾಮ ಮಹಾಸ್ವಾಮಿಗಳು, ವಡವಡಗಿ ವೀರಸಿದ್ದ ಮಹಾಸ್ವಾಮಿಗಳು, ಬೃಂಗೇಶ್ವರ ಶಿವಾಚಾರ್ಯರು, ಸಾಸನೂರದ ಮಹಾಂತಲಿಂಗ ಶಿವಾಚಾರ್ಯರು, ಶಿವಬಸವ ಮಹಾಸ್ವಾಮಿಗಳು ತಿಕೋಟ, ಚಬನೂರ ಬಳಗಾನೂರದ ಮಂಜುಳಾತಾಯಿ, ಕುಂಟೋಜಿ ಚನ್ನವೀರ ಶಿವಾಚಾರ್ಯರು, ಡವಳಗಿ ಶ್ರೀ, ಕಲಕೇರಿ ಶ್ರೀ, ಹತ್ತಿಗುಡೂರ ಶ್ರೀ, ಕೇಂಭಾವಿ ಶ್ರೀ, ಸುರಪೂರ ಶ್ರೀ, ಮದ್ದರಕಿ ಶ್ರೀ, ತೊರವಿ ಶ್ರೀ, ಗುಳಬಾಳ ಶ್ರೀ, ಕೇರೂಟಗಿ ಶ್ರೀ, ಹರನಾಳ ಶ್ರೀ, ಹತ್ತಳ್ಳಿ ಶ್ರೀ ಸೇರಿದಂತೆ ವಿವಿಧ ಜಿಲ್ಲೆಯ ಮಠಮಾನ್ಯಗಳ ಶ್ರೀಗಳು, ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಶಾಸಕ ರಾಜುಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಅಸ್ಕಿ ಫೌಂಡೇಶನ್‌ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ, ಸಾಹೇಬಗೌಡ ಪಾಟೀಲ(ಸಾಸನೂರ), ಜಿಪಂ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಬಸನಗೌಡ ಯಡಿಯಾಪೂರ, ಒಳಗೊಂಡು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು, ಹಿರಿಯರು, ಭಕ್ತ ಸಮೂಹದವರು ಪಾಲ್ಗೊಂಡು ಶ್ರೀಗಳ ಅಂತಿಮ ದರ್ಶನ ಪಡೆದರು.ಅನ್ನದಾನೇಶ್ವರ ಮಠದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವಲ್ಲಿ ಗುರುಶಾಂತವೀರ ಶಿವಾಚಾರ್ಯರು ಮುಖ್ಯಪಾತ್ರದಾರರು. ಪವಾಡ ಪುರುಷ ಅನ್ನದಾನೇಶ್ವರ ಶಿವಯೋಗಿಗಳು ನೆಲೆಸಿದ ಹಿರೂರ ಗ್ರಾಮದ ಮಠವು ತನ್ನದೇ ಆದ ಪರಂಪರೆ ಹೊಂದಿದೆ. ಶ್ರೀಮಠದ ಪರಂಪರೆಗೆ ಯಾವುದೇ ಚುತಿಬರದ ಹಾಗೆ ಸಮಾಜಕ್ಕೆ ಮಠಮಾನ್ಯಗಳ ಕೊಡುಗೆಯನ್ನು ಅರ್ಥೈಸಿಕೊಂಡು ಸದಾ ಭಕ್ತೋದ್ದಾರ ಬಯಸುತ್ತ ಸಾಗಿದ್ದ ಶ್ರೀಗಳು ಸದಾಸೀದ ಸ್ವಾಮಿಗಳಾಗಿದ್ದರು, ಕರ್ಮಯೋಗಿಗಳಾಗಿದ್ದರು.

-ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಜಗದ್ಗುರು.