- ದಾವಣಗೆರೆ ಮತದಾರರ ವಿಶ್ವಾಸ ನನ್ನ ಮೇಲಿದೆ: ಪಕ್ಷೇತರ ಅಭ್ಯರ್ಥಿ ವಿನಯಕುಮಾರ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಭದ್ರಾ ಮೇಲ್ದಂಡೆ ಜಾರಿ, ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಈಗ ಭರವಸೆ ನೀಡುತ್ತಿರುವ ಕಾಂಗ್ರೆಸ್-ಬಿಜೆಪಿ ಅಧಿಕಾರಿಗಳು ಇಲ್ಲಿಯವರೆಗೆ ಅಧಿಕಾರ ಇದ್ದರೂ, ಅವುಗಳನ್ನು ಏಕೆ ಮಾಡಲಿಲ್ಲವೆಂಬ ಬಗ್ಗೆ ಮೊದಲು ಜನತೆಗೆ ಉತ್ತರಿಸಲಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.
ನಗರದ ಎಸ್.ಎಸ್. ಬಡಾವಣೆಯ ಗೃಹ ಕಚೇರಿಯಲ್ಲಿ ಬೆಂಬಲಿಗರು, ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಈಗ ರೈತರಿಗೆ ನೀರು, ದುಡಿಯುವ ಕೈಗಳಿಗೆ ಕೈಗಾರಿಕೆ ಅಂತೆಲ್ಲಾ ಮಾತನಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರಗಳಿದ್ದಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.ಈ ಲೋಕಸಭೆ ಚುನಾವಣೆಯಲ್ಲಿ ನನಗೆ ಸಿಲಿಂಡರ್ ಚಿಹ್ನೆ ಲಭಿಸಿದೆ. ನನ್ನನ್ನು ಗೆಲ್ಲಿಸಲು ಜನತೆ ನಿರ್ಧರಿಸಿದ್ದಾರೆ. ಚುನಾವಣೆಯಿಂದ ನಾನು ಹಿಂದೆ ಸರಿಯುವೆ ಅಂದು ಕೊಂಡವರಿಗೆ ನಿರಾಸೆಯಾಗಿದೆ. ಬೂತ್ ಮಟ್ಟದ ಏಜೆಂಟರನ್ನು ಗುರುತಿಸಿದ್ದೇವೆ. ನಮ್ಮಲ್ಲಿ ಯಾವುದೇ ಮುಖಂಡರು ಇಲ್ಲ. ಹೊಸ ನಾಯಕರು ತಯಾರಾಗುತ್ತಿದ್ದಾರೆ. ಸಿಲಿಂಡರ್ ಗುರುತಿನ ಬಗ್ಗೆ ಜನರಿಗೆ ತಿಳಿಸಿ, ನನಗೆ ಮತ ಹಾಕುವಂತೆ ಮನದಟ್ಟು ಮಾಡಿಕೊಡಲಿದ್ದೇವೆ ಎಂದು ವಿನಯಕುಮಾರ್ ತಿಳಿಸಿದರು.
ಕಾಂಗ್ರೆಸ್, ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯ ಅಸಮಾಧಾನಿತರಿದ್ದಾರೆ. ಅಂಥವರೆಲ್ಲಾ ನನಗೆ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದುಕೊಂಡಿದ್ದೆವು. ಅಲ್ಲಿಯೂ ಅದೇ ಶುರುವಾಗಿದೆ. ಕಾಂಗ್ರೆಸ್ಸಿನಲ್ಲಿ ಒಂದೇ ಮನೆಗೆ ಮೂರು ಅಧಿಕಾರ ಇದೆ. ಒಬ್ಬರು ಸಚಿವರು, ಮತ್ತೊಬ್ಬರು ಶಾಸಕರು. ಇದೀಗ ಮಗದೊಬ್ಬರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಒಂದೇ ಮನೆಯಲ್ಲೇ ಶಾಸಕರು, ಸಚಿವರು, ಸಂಸದರಾದರೆ ಕಷ್ಟವೆಂಬ ಕಾರಣಕ್ಕೆ ಜನರೂ ಕಾಂಗ್ರೆಸ್ಸಿಗೆ ಬೆಂಬಲಿಸುವುದಿಲ್ಲ. ದಾವಣಗೆರೆಯಲ್ಲಿ ಇನ್ನೇನಿದ್ದರೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮಧ್ಯೆ ಸ್ಪರ್ಧೆ ಎಂದು ಅವರು ಹೇಳಿದರು.- - -
ಬಾಕ್ಸ್ ಸಿಲಿಂಡರ್ ವಿಷಯದಲ್ಲಿ ಮೋದಿ, ಸಿದ್ದು ಇಬ್ರೂ ಪ್ರಚಾರ ಮಾಡ್ತಾರೆನನಗೆ ಅದ್ಭುತವಾದ ಸಿಲಿಂಡರ್ ಚಿಹ್ನೆ ಸಿಕ್ಕಿದೆ. ಸಿಲಿಂಡರ್ ಇಲ್ಲದ ಮನೆ ಇಲ್ಲ. ಪ್ರತಿ ವರ್ಗದ ಮನೆಯಲ್ಲೂ ಇದು ಇದೆ. ತೆಂಗಿನ ಮರದ ಗುರುತು ಕೇಳಿದ್ದೆ. ಕಲ್ಪವೃಕ್ಷ ಎಂಬ ಕಾರಣಕ್ಕೆ. ಆದರೆ, ಅಧಿಕೃತವಾಗಿ ಗ್ಯಾಸ್ ಸಿಲಿಂಡರ್ ಗುರುತು ಸಿಕ್ಕಿದೆ. ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಇಬ್ಬರೂ ನನ್ನ ಪರ ಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಅನ್ನಭಾಗ್ಯದಡಿ ಅನ್ನ ಮಾಡಲು ಸಿಲಿಂಡರ್ ಬೇಕು. ಮೋದಿ ಬಂದರೆ ಉಜ್ವಲದಡಿ ಗ್ಯಾಸ್ ಸಿಲಿಂಡರ್ ನೀಡಿದ್ದೇವೆಂದು ಮತ ಕೇಳುತ್ತಾರೆ. ಯಾರು ಮಾತನಾಡಿದರೂ ಗ್ಯಾಸ್ ಸಿಲಿಂಡರ್ ಬಗ್ಗೆನೇ ಮಾತನಾಡುತ್ತಾರೆ. ಸಿಲಿಂಡರ್ ಗುರುತು ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಪಕ್ಷೇತರ ಜಿ.ಬಿ.ವಿನಯಕುಮಾರ ತಮ್ಮದೇ ಧಾಟಿಯಲ್ಲಿ ವಿಶ್ಲೇಷಿಸಿದರು.- - - ಕೋಟ್ ದಾವಣಗೆರೆ ಮತದಾರರಿಗೆ ಮನವಿ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಎಂದೆಲ್ಲಾ ಹೋಗಬೇಡಿ. ಮೋದಿಯವರಿಗೆ ಈ ಕ್ಷೇತ್ರ ಹೋದರೆ ನಷ್ಟವಾಗಲ್ಲ, ಒಂದು ಸ್ಥಾನದಲ್ಲಿ ಕಾಂಗ್ರೆಸ್ ಸೋತರೂ ಏನೂ ಆಗುವುದಿಲ್ಲ. ಯಾವುದೇ ಒಂದು ಸಮುದಾಯ ಒಂದು ಪಕ್ಷಕ್ಕೆ ಅನಿವಾರ್ಯವಾಗಿ ಮತ ಹಾಕುತ್ತಿತ್ತು. ಈಗ ಬೇರೊಂದು ಅವಕಾಶ ಇದೆ. ಮುಕ್ತವಾಗಿ, ತತ್ವ, ಸಿದ್ಧಾಂತಕ್ಕೆ ಅಂಟಿಕೊಳ್ಳದೇ ವ್ಯಕ್ತಿ ನೋಡಿ, ಕೆಲಸ ಗಮನಿಸಿ ಮತ ನೀಡಿ. ವ್ಯಕ್ತಿ ನೋಡಿ ಓಟ್ ಮಾಡಿ
- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ- - - -(ಫೋಟೋ ಬರಲಿವೆ)