ಭಾಗಮಂಡಲ: ಡಿ. 13ರಂದು ‘ಹುತ್ತರಿ ಕಪ್‌’ ಹಗ್ಗಜಗ್ಗಾಟ ಸ್ಪರ್ಧೆ

KannadaprabhaNewsNetwork |  
Published : Nov 25, 2024, 01:01 AM IST
ಚಿತ್ರ :  24ಎಂಡಿಕೆ6 : ಭಾಗಮಂಡಲ ನಾಡು ಗೌಡ ಒಕ್ಕೂಟದ ಅಧ್ಯಕ್ಷರಾದ  ಕಿಶೋರ್ ಕುದುಕುಳಿ ಮಾತನಾಡಿದರು.  | Kannada Prabha

ಸಾರಾಂಶ

ಪ್ರಥಮ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆ ಹುತ್ತರಿ ಕಪ್‌ 2024 ಡಿ. 13ರಂದು ಆಯೋಜಿಸಲಾಗಿದೆ. ಪಾಲ್ಗೊಂಡ ಎಲ್ಲ ತಂಡಗಳಿಗೆ ಸ್ಮರಣಿಕೆ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಗಮಂಡಲ ನಾಡು ಗೌಡ ಒಕ್ಕೂಟದ ವತಿಯಿಂದ ಗೌಡ ಜನಾಂಗದ ಕುಟುಂಬಗಳ ನಡುವಣ ಪ್ರಥಮ ವರ್ಷದ ಹಗ್ಗಜಗ್ಗಾಟ ಸ್ಪರ್ಧೆ ‘ಹುತ್ತರಿ ಕಪ್ 2024 ಡಿ 13 ರಂದು ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಕಿಶೋರ್ ಕುದುಕುಳಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿತ ಹಗ್ಗಜಗ್ಗಾಟ ಸ್ಪರ್ಧೆ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆಯಲಿದೆ.

ಪುರುಷರ ತಂಡದ ಒಟ್ಟು ತೂಕ 640 ಕೆ.ಜಿ. ಮೀರಬಾರದು ಮತ್ತು ಗರಿಷ್ಠ 10 ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಹಿಳೆಯರ ವಿಭಾಗದಲ್ಲಿ ತಂಡದ ಒಟ್ಟು ತೂಕ 540 ಕೆ.ಜಿ.ಮತ್ತು ಗರಿಷ್ಠ 10 ಆಟಗಾರರನ್ನು ಮೀರಬಾರದು ಎಂದು

ಆಟದ ನಿಯಮಗಳನ್ನು ವಿವರಿಸಿದರು. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯ ವಿಜೇತರಿಗೆ 20 ಸಾವಿರ ರು. , ಟ್ರೋಫಿ ಮತ್ತು ಪದಕಗಳನ್ನು ನೀಡಲಾಗುತ್ತದೆ. ದ್ವಿತೀಯ 20 ಸಾವಿರ ರು., ಟ್ರೋಫಿ ಮತ್ತು ಪದಕ, ಮಹಿಳೆಯರ ವಿಭಾಗದಲ್ಲಿ‌ ಪ್ರಥಮ ಬಹುಮಾನವಾಗಿ 15 ಸಾವಿರ ರು., ಟ್ರೋಫಿ ಮತ್ತು ಪದಕ, ದ್ವಿತೀಯ 6 ಸಾವಿರ ರು.., ಟ್ರೋಫಿ ಮತ್ತು ಪದಕವನ್ನು ನೀಡಲಾಗುತ್ತದೆ. ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೂ ಬಹುಮಾನಗಳಿರುತ್ತದೆ.

ಪಾಲ್ಗೊಂಡ ಎಲ್ಲ ತಂಡಗಳಿಗು ಸ್ಮರಣಿಕೆಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಕ್ಕೆ 1, 500 ರು., ಮತ್ತು ಮಹಿಳೆಯರ ವಿಭಾಗಕ್ಕೆ 1 ಸಾವಿರ ರು. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಡಿ.15ರ ಒಳಗಾಗಿ ಪುರುಷರ ವಿಭಾಗದಲ್ಲಿ ಮೊದಲು ನೋಂದಾಯಿಸಿಕೊಂಡ 50 ತಂಡಗಳಿಗೆ ಮತ್ತು ಮಹಿಳೆಯರ ವಿಭಾಗದಲ್ಲಿ 30 ತಂಡಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಕ್ಕೂಟದ ನಿರ್ದೇಶಕರಾದ ಚೇತನ್ ಕೂಡಕಂಡಿಯವರ ಬಳಿ (ಮೊ.8722278910) ಪ್ರವೇಶ ಶುಲ್ಕದೊಂದಿಗೆ ತಂಡದ ನೋಂದಾಯಿಸಿಕೊಳ್ಳಬಹುದೆಂದು ಹೆಸರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಚಲನ್ ನಿಡ್ಯಮಲೆ, ಸಹ ಕಾರ್ಯದರ್ಶಿ ಚೇತನ್ ಕೂಡಕಂಡಿ, ನಿರ್ದೇಶಕರಾದ ಕೋಳಿಬೈಲು ಸುರೇಂದ್ರ, ಕಲ್ಪನ ಹೊಸಗದ್ದೆ, ಸುಧೀರ್ ಕುಮಾರ್ ಹೊದ್ದೆಟ್ಟಿ, ಪವನ್ ಸುಳ್ಯಕೋಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ