ಚನ್ನಪಟ್ಟಣ: ಶುಕ್ರವಾರ ಕಜಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ತಾಲೂಕಿನ ನೀರಾವರಿ ಯೋಜನೆಗೆ ನೀಲನಕ್ಷೆ ರೂಪಿಸಿ, ಅದರ ಸಾಕಾರಕ್ಕೆ ಶ್ರಮಿಸಿದ್ದ ನಿವೃತ್ತ ಎಂಜಿನಿಯರ್ ವೆಂಕಟೇಗೌಡ ಅವರ ಅಂತ್ಯಕ್ರಿಯೆ ಭಾನುವಾರ ಸ್ವಗ್ರಾಮ ಅಗ್ರಹಾರ ವಳಗೆರಹಳ್ಳಿಯಲ್ಲಿ ನೆರವೇರಿತು.
ನಂತರ ಅವರ ಸ್ವಗ್ರಾಮ ಅಗ್ರಹಾರ ವಳಗೆರಹಳ್ಳಿಗೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಸಂಜೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ನೂತನ ಶಾಸಕ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಮುಖಂಡ ದುಂತೂರು ವಿಶ್ವನಾಥ್, ರೈತ ಮುಖಂಡ ಸಿ.ಪುಟ್ಟಸ್ವಾಮಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ನೇಹಬಳಗ ಮೃತರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಪೊಟೋ೨೪ಸಿಪಿಟಿ೨: ಶಾಸಕ ಸಿ.ಪಿ.ಯೋಗೇಶ್ವರ್ ವೆಂಕಟೇಗೌಡರ ಅಂತಿಮ ದರ್ಶನ ಪಡೆದರು.