ಕನ್ನಡಪ್ರಭ ವಾರ್ತೆ ವಿಜಯಪುರ: ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ಅವರು ತಮ್ಮ ಜೀವನುದ್ದಕ್ಕೂ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ತಂದುಕೊಡಲು ತಮ್ಮ ಜೀವನವನ್ನೇ ಅರ್ಪಿಸಿದರು ಎಂದು ಪ್ರಾಚಾರ್ಯ ಡಾ.ಎಸ್.ಟಿ.ಮೇರವಾಡೆ ಹೇಳಿದರು.
ಪ್ರೊ.ಎಸ್.ಎಂ.ಚುಂಚೂರ ಮಾತನಾಡಿ, ನೀವು ನನ್ನನ್ನು ಕೊಲ್ಲಬಹುದು ಹೊರತು ನನ್ನ ಆತ್ಮವನ್ನಲ್ಲ. ಭಾರತೀಯರಿಗೆ ಹೇಳುವುದು ಸ್ಪಷ್ಟವಾಗಿ ಹೇಳಿ, ಏಕೆಂದರೆ ಒಮ್ಮೆಲೆ ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ. ನಮ್ಮವರೇ ನಮಗೆ ಮೋಸ ಮಾಡುವಂತೆ ಭಗತ ಸಿಂಗ್ ಅವರಿಗೆ ಭಾರತೀಯ ವಕೀಲರೆ ಎದುರು ವಕಾಲತ್ತು ವಹಿಸಿ ಮರಣ ದಂಡನೆಗೆ ಗುರಿ ಮಾಡಿದರು ಎಂದು ಎಚ್ಚರಿಸಿದರು.
ಉಪನ್ಯಾಸಕರಾದ ಜಿ.ಎಸ್.ಬಗಲಿ, ಶ್ರೀಶೈಲ ತರಳಗಟ್ಟಿ, ಎನ್.ಎಸ್.ಹರನಾಳ, ಜಿ.ಎ.ಮೇಟಿ, ಆರ್.ಎಸ್.ಚಲವಾದಿ, ವ್ಹಿ.ಐ.ಅಂಗಡಿ, ಎಂ.ಟಿ.ಶೇಲಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಭಗತ ಸಿಂಗ್ ಜೀವನ ಕುರಿತು ಸಾನಿಯಾ ತಾಂಬೋಲಿ ಮಾತನಾಡಿದರು. ಚನ್ನಮ್ಮ ಖಾನಾಪೂರ ನಿರೂಪಿಸಿದರು. ರಾಧಾ ಕದಂಪುರ ವಂದಿಸಿದರು.