ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯವನ್ನು ಜಗತ್ತಿನ ಇತರೆ ಭಾಷೆಗಳಿಗೆ ಪರಿಚಯಿಸಿದ ಕೀರ್ತಿ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದು ಕಸಾಪ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ತಿಳಿಸಿದರು.
ಕನ್ನಡ ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಪ್ರಸಿದ್ಧಿ ಪಡೆದಿವೆ. ಕನ್ನಡ ಸಾಹಿತ್ಯವನ್ನು ಕಾದಂಬರಿಗಳ ಮೂಲಕ ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡಿದರು. ಕನ್ನಡ ಸಾಹಿತ್ಯ ಲೋಕ ಅಪತ್ರಿಮ ದೇಶಭಕ್ತ ಹಾಗೂ ಕನ್ನಡ ಸಾಹಿತ್ಯದ ಮೇರುವ್ಯಕ್ತಿಯನ್ನು ಕಳೆದುಕೊಂಡು ಬಡವಾಗಿದೆ ಎಂದರು.
ಪ್ರೊ. ಅಂಗಡಿ, ಪೂರ್ಣಾಜಿ ಕರಾಟೆ, ನಾಗರಾಜ ಹಣಗಿ. ಮಹಾನಂದಾ ಕೊಣ್ಣೂರ, ನಿರ್ಮಲಾ ಅರಳಿ, ಎಸ್.ಎಫ್. ಆದಿ ಮಾತನಾಡಿದರು. ತಾಲೂಕು ಅಧ್ಯಕ್ಷ ಜೆ.ಎಸ್. ರಾಮಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಕೊಣ್ಣೂರ, ಎನ್.ಆರ್. ಸಾತಪುತೆ, ವೀರಣ್ಣ ಹೂಗಾರ, ಎಂ.ಕೆ. ಕಳ್ಳಿಮಠ, ರತ್ನಾ ಕರ್ಕಿ, ಶಂಕರ ಶಿಳ್ಳಿನ ಇದ್ದರು. ಅಶೋಕ ಸೊರಟೂರ ವಂದಿಸಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆಲಕ್ಷ್ಮೇಶ್ವರ: ತಾಲೂಕು ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಪಟ್ಟಣದ ಚೆಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಆವರಣದಲ್ಲಿ ಜರುಗಿತು.ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಅವರು ಸಭೆಗೆ ಚಾಲನೆ ನೀಡಿ, ಸಂಘದ ಎಲ್ಲ ಸದಸ್ಯರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ದೊರೆಯುವ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅದರೊಂದಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ, ಆರೋಗ್ಯ ಶಿಬಿರ ಮತ್ತು ಫುಟ್ ಫಲ್ಸ್ ಥೆರಪಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಾಗರಿಕರೊಂದಿಗೆ ಮತ್ತಿತರ ನೂರಾರು ಜನರು ಶಿಬಿರಗಳ ಲಾಭ ಪಡೆದುಕೊಂಡಿದ್ದಾರೆ ಎಂದರು.ಸಂಘದ ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ ಮಾತನಾಡಿ, ನಮ್ಮ ಸಂಘವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅವರಿಗೆ ಎದುರಾಗುವ ಸಾಮಾಜಿಕ, ಕಾನೂನಾತ್ಮಕ ಸಮಸ್ಯೆಗಳನ್ನು ಸಂಘದ ವತಿಯಿಂದ ಹೋರಾಟ ಮಾಡಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಬಾಳಿಹಳ್ಳಿಮಠ, ಸಂಗಪ್ಪ ಯಳಮಲಿ, ಗೋಪಾಲ ಪಡ್ನೀಸ್, ಐ.ಎಸ್. ಮಡಿವಾಳರ, ಪಿ.ಕೆ. ಬದಿ, ನೀಲಪ್ಪ ಕರ್ಜೆಕಣ್ಣವರ, ಹೇಮಗಿರಿಮಠ, ಪಾರವ್ವ ಧರಣಿ, ಮಾಲಾದೇವಿ ದಂಧರಗಿ, ಶಕುಂತಲಾ ಅಳಗವಾಡಿ, ಷಣ್ಮುಖಗೌಡ್ರ ಪಾಟೀಲ, ಯಲ್ಲಪ್ಪ ಬಿಂಜಡಗಿ ಸೇರಿದಂತೆ ಮತ್ತಿತರರು ಇದ್ದರು. ನಂತರ ಹಿರಿಯ ನಾಗರಿಕರ ಜನ್ಮದಿನದ ಸವಿನೆನಪಿಗಾಗಿ ಕೇಕ್ ಕತ್ತರಿಸಲಾಯಿತು.