ಕನ್ನಡಪ್ರಭ ವಾರ್ತೆ ಬೇಲೂರು
ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಅಧುನಿಕ ಕಾಲಘಟ್ಟದಲ್ಲಿ ದೇವರನಾಮ ಮತ್ತು ಭಜನಾ ಗೀತೆಗಳು ನಶಿಸುತ್ತಿವೆ. ಈ ಹಿಂದೆ ಪ್ರತಿ ದೇವಾಲಯದಲ್ಲಿ ರಾಮನವಮಿ ಮತ್ತು ಕಾರ್ತಿಕ ಮಾಸದಲ್ಲಿ ಭಜನೆ ನಡೆಸುತ್ತಿರುವ ವಾಡಿಕೆ ಇತ್ತು. ಆದರೆ ದೃಶ್ಯ ಮಾಧ್ಯಮಗಳ ಭರಾಟೆಯಿಂದ ಭಜನೆ ಗೀತೆಗಳು ಮೂಲೆ ಸೇರುತ್ತಿವೆ. ಭಜನೆ ಗೀತೆಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಮತ್ತು ಸಂಸ್ಕಾರ ನೀಡುವ ಕಾರಣದಿಂದ ಇಂತಹ ಭಜನೆ ಗೀತೆಗಳನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುವ ಅಗತ್ಯವಿದೆ. ಈ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹರಿಕಥಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಸಾಹಿತಿ ಇಂದಿರಮ್ಮ ಮಾತನಾಡಿ, ಹಿಂದೆ ಯಾವುದೇ ಮಾಧ್ಯಮಗಳಿಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ದೇಗುಲದಲ್ಲಿ ಭಜನೆಯ ಮೂಲಕ ಮನರಂಜನೆ ಮತ್ತು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಭಜನೆಯು ಕೇವಲ ಹಿರಿಯರಿಗೆ ಸೀಮಿತವಾಗಿಲ್ಲ. ಸಣ್ಣ ಮಕ್ಕಳಿಗೆ ಭಜನೆಯ ಮಹತ್ವವನ್ನು ತಿಳಿಸಬೇಕಿದೆ ಎಂದು ತಿಳಿಸಿದರು.ಶಾರದಾ ಶಂಕರ ಭಜನಾ ಮಂಡಳಿ( ಮಹಿಳೆಯರು)ಮಧ್ವಪತಿ ವಿಠ್ಠಲ ಭಜನಾ ಮಂಡಳಿ,ಶಾರದಾ ಶಂಕರ ಭಜನಾ ಮಂಡಳಿ ( ಪುರುಷರು) ಗಾಯಿತ್ರಿ ಭಜನಾ ಮಂಡಳಿ, ಪೂರ್ಣಪ್ರಜ್ಞ ಭಜನಾ ಮಂಡಳಿ, ಚನ್ನಕೇಶವ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ವೀರಾಂಜನೇಯ ಭಜನಾ ಮಂಡಳಿಯವರು ಭಾಗವಹಿಸಿದ್ದರು.
ಭಜನೆಗೆ ಜಾತಿಯಲ್ಲ,ಭಕ್ತಿ ಮುಖ್ಯ: