ಕುಡಿತ ಮರೆಯಲು ಭಜನೆ, ಸಂಗೀತ ದಿವ್ಯೌಷಧ: ಡಾ.ಕಿಕ್ಕೇರಿ ಕೃಷ್ಣಮೂರ್ತಿ

KannadaprabhaNewsNetwork |  
Published : Dec 09, 2025, 01:00 AM IST
8ಕೆಎಂಎನ್ ಡಿ26 | Kannada Prabha

ಸಾರಾಂಶ

ನೋವು ಮರೆವಿಗೆ ಮದ್ಯ ಮದ್ದಲ್ಲ. ನೋವು ಮರೆಯುವ ನೆಪದಲ್ಲಿ ಕುಡಿದು ಮನಸ್ಸು, ಆರೋಗ್ಯ, ದೇಹ ಕೊನೆಗೆ ಇಡೀ ಸಂಸಾರವನ್ನೆ ಹಾಳು ಮಾಡುತ್ತದೆ. ಸಂಗೀತಕ್ಕೆ ಬಡವ ಶ್ರೀಮಂತ ಎಂಬ ಬೇಧವಿಲ್ಲ. ಎಲ್ಲರನ್ನು ಸೆಳೆಯುವ ಸಮ್ಮೋಹನ ಸಾಧನವಾಗಿದೆ. ಭಜನೆ, ಸಂಗೀತ ಕೇಳುವಿಕೆ, ಹಾಡುವಿಕೆಯಿಂದ ಸೂಪ್ತ ಮನಸ್ಸು ಜಾಗೃತವಾಗಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕುಡಿತ ಚಟ ಮನುಷ್ಯನ ದೇಹ ಸುಡುವ ಜೊತೆಗೆ ಬಿಡದ ಭೂತವಾಗಿ ಕಾಡಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಟ್ರಸ್ಟ್ ಮತ್ತಿತರ ಸಂಘ ಸಂಸ್ಥೆ ಸಹಕಾರದಲ್ಲಿ ಜರುಗಿದ ಮದ್ಯವರ್ಜನಾ ಶಿಬಿರದಲ್ಲಿ ಮದ್ಯ ವ್ಯಸನಿಗಳಿಗೆ ಸಂಗೀತಾದ ಚಿಕಿತ್ಸೆ ನೀಡಿ, ಸಂಗೀತಕ್ಕೆ ಸೋಲದ ಮನಸ್ಸಿಲ್ಲ. ನೋವು ಮರೆಯಲು ಸಂಗೀತ, ಹಾಡುಗಳನ್ನು ಗುನುಗಿ ಭಜನೆಯನ್ನು ಮಾಡಿ ಮನಸ್ಸು ಪ್ರಫುಲ್ಲವಾಗಲಿದೆ ಎಂದು ಕಿವಿಮಾತು ಹೇಳಿದರು.

ನೋವು ಮರೆವಿಗೆ ಮದ್ಯ ಮದ್ದಲ್ಲ. ನೋವು ಮರೆಯುವ ನೆಪದಲ್ಲಿ ಕುಡಿದು ಮನಸ್ಸು, ಆರೋಗ್ಯ, ದೇಹ ಕೊನೆಗೆ ಇಡೀ ಸಂಸಾರವನ್ನೆ ಹಾಳು ಮಾಡುತ್ತದೆ. ಸಂಗೀತಕ್ಕೆ ಬಡವ ಶ್ರೀಮಂತ ಎಂಬ ಬೇಧವಿಲ್ಲ. ಎಲ್ಲರನ್ನು ಸೆಳೆಯುವ ಸಮ್ಮೋಹನ ಸಾಧನವಾಗಿದೆ. ಭಜನೆ, ಸಂಗೀತ ಕೇಳುವಿಕೆ, ಹಾಡುವಿಕೆಯಿಂದ ಸೂಪ್ತ ಮನಸ್ಸು ಜಾಗೃತವಾಗಲಿದೆ ಎಂದರು.

ಸಂಗೀತಕ್ಕೆಎಲ್ಲ ನೋವು ಮರೆಸುವ ಚಿಕಿತ್ಸಾ ಗುಣವಿದೆ. ಮರಗಿಡಗಳೆ ಸಂಗೀತಾಕ್ಕೆ ಮಾತನಾಡಲಿವೆ. ಹಸುಗಳು ಸಂಗೀತಾ ಕೇಳಿ ಹೆಚ್ಚು ಹಾಲು ಕೊಡುವುದು ಸಾಬೀತಾಗಿದೆ. ಈಗಿರುವಾಗ ಕುಡಿತದಿಂದ ದೂರವಾಗಲು ಸಂಗೀತವನ್ನು ದಿವ್ಯೌಷಧವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಪರಮ ಪಾವನ ಮಂತ್ರ ಪಂಚಾಕ್ಷರಿ ಮಂತ್ರ, ಶಿವನಾಥ ನಿನ್ನ ಮಹಿಮಾಯಾವರಾಗದೀ ಹಾಡಲೀ ಮಂಜುನಾಥ, ಶಿವಶಿವ ಎಂದರೆ ಭಯವಿಲ್ಲ’ ಮತ್ತಿತರ ಶಿವಸ್ತುತಿ ಗೀತೆಗಳನ್ನು ತಾವು ಹಾಡಿ ವ್ಯಸನಿಗಳೊಂದಿಗೆ ಹಾಡಿಸಿ ಆನಂದದಲ್ಲಿ ತೇಲುವಂತೆ ಮಾಡಿದರು.

ಸಂಸ್ಥೆ ಶಿಬಿರ ಯೋಜನಾಧಿಕಾರಿ ಮುಖೇಶ್, ಶಿಬಿರಾಧಿಕಾರಿ ದಿನೇಶ್ ಮರಾಠಿ, ಮೇಲ್ವಿಚಾರಕ ವಸಂತ, ಎಂ.ಎನ್. ಸುಬ್ರಹ್ಮಣ್ಯ, ವೆಂಕಟೇಶ್‌ ಇದ್ದರು.

ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್: ಶಾಸಕ ಕೆ.ಎಂ.ಉದಯ್

ಮದ್ದೂರು: ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರಸಭೆ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಬಿ.ಆರ್.ಅಂಬೇಡ್ಕರ್ ಮಹಾನ್ ವ್ಯಕ್ತಿ. ನ್ಯಾಯ, ಸಮಾನತೆ ಮತ್ತು ಬದ್ಧತೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸಲು ಸ್ಫೂರ್ತಿ ನೀಡಿದವರು. ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದು ಕೊಡಲು ಪ್ರಯತ್ನಿಸಿದವರು ಎಂದರು.

ಇದೇ ವೇಳೆ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಗ್ಯಾರಂಟಿ ಸದಸ್ಯ ಸಿದ್ಧರಾಜು, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಹದೇವಯ್ಯ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುವರ್ಣ ಸೌಧ ಮೊಗಸಾಲೆಯಲ್ಲಿ ಡಿಕೆ ಆಪ್ತರ ಸಭೆ
ನಾಳೆ ರಾಜ್ಯ ರೈತಸಂಘದಿಂದ ಬೆಳಗಾವಿ ಚಲೋ