ಮನಸ್ಸಿನ ಮಾಲಿನ್ಯ ತೊಳೆಯಲು ಭಜನೆ ಅತ್ಯಂತ ಸಹಕಾರಿ: ಶ್ರೀನಿವಾಸಮೂರ್ತಿ

KannadaprabhaNewsNetwork |  
Published : Jan 11, 2026, 02:15 AM IST
9ಕೆಕೆಡಿಯು3. | Kannada Prabha

ಸಾರಾಂಶ

ಕಡೂರುನೀರು ಮನುಷ್ಯನ ದೈಹಿಕ ಮಾಲಿನ್ಯ ತೊಳೆದರೆ ಮನಸ್ಸಿನ ಮಾಲಿನ್ಯ ತೊಳೆಯಲು ಮತ್ತು ಭಕ್ತಿ ಮಾರ್ಗದೆಡೆಗೆ ಸಾಗಲು ಭಜನೆ ಅತ್ಯಂತ ಸಹಕಾರಿ ಮಾರ್ಗ ಎಂದು ಪುರಸಭಾ ಮಾಜಿ ಅಧ್ಯಕ್ಷ ಕೆ.ಜಿ. ಶ್ರೀನಿವಾಸಮೂರ್ತಿ ಹೇಳಿದರು.

- ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಭಜನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ನೀರು ಮನುಷ್ಯನ ದೈಹಿಕ ಮಾಲಿನ್ಯ ತೊಳೆದರೆ ಮನಸ್ಸಿನ ಮಾಲಿನ್ಯ ತೊಳೆಯಲು ಮತ್ತು ಭಕ್ತಿ ಮಾರ್ಗದೆಡೆಗೆ ಸಾಗಲು ಭಜನೆ ಅತ್ಯಂತ ಸಹಕಾರಿ ಮಾರ್ಗ ಎಂದು ಪುರಸಭಾ ಮಾಜಿ ಅಧ್ಯಕ್ಷ ಕೆ.ಜಿ. ಶ್ರೀನಿವಾಸಮೂರ್ತಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕೆರೆಸಂತೆ ಮಹಾ ಲಕ್ಷೀ ಭಜನಾ ಮಂಡಳಿ, ಶ್ರೀ ಮಂಜುನಾಥಸ್ವಾಮಿ ಭಜನಾ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಶಿಸುತ್ತಿರುವ ನಮ್ಮ ಧರ್ಮ, ಪರಂಪರೆ ಉಳಿಸುವಲ್ಲಿ, ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಶ್ರೀ ಕ್ಷೇತ್ರದ ಪಾತ್ರ ಪ್ರಮುಖವಾಗಿದೆ. ಚತುರ್ವಿಧಾನ ಪರಂಪರೆಗೆ ಹೆಸರು ವಾಸಿ ಯಾಗಿರುವ ಶ್ರೀ ಕ್ಷೇತ್ರ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರ ಮಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.

ಷಡ್ಯಂತ್ರದ ನಡುವೆಯೂ ಧರ್ಮ ಉಳಿದಿದೆ ಎಂಬುದಕ್ಕೆ ಶ್ರೀ ಕ್ಷೇತ್ರವೇ ಸಾಕ್ಷಿಯಾಗಿದೆ ಎಂಬುದಕ್ಕೆ ಇತ್ತೀಚಿನ ಬುರುಡೆ ಗ್ಯಾಂಗ್ ಪ್ರಕರಣವೇ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಪುರಸಭಾ ಸದಸ್ಯ ಮರುಗುದ್ದಿ ಮನು ಮಾತನಾಡಿ, ಭಜನೆ ಮೂಲಕ ಪರಮಾತ್ಮನನ್ನು ನೆನೆದಲ್ಲಿ ದೇವರ ಬಳಿ ತೆರಳಲು ಸಾಧ್ಯ ಅದಕ್ಕೆ ತಕ್ಕ ಭಕ್ತಿ ಇರಬೇಕು ಎಂದರು.

ಕ್ಷೇತ್ರದ ಯೋಜನೆ ಸಮನ್ವಯಾಧಿಕಾರಿ ಸಂತೋಷ್ ಅಳಿಯಾರ್ ಶ್ರೀ ಕ್ಷೇತ್ರದಿಂದ ಕೈಗೊಂಡ ಸಾಮಾಜಿಕ ಕಾರ್ಯಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯಿಂದ ಹಿರಿಯ ಪೌರ ಕಾರ್ಮಿಕ ರಂಗಪ್ಪ, ಶಾರದಮ್ಮನವರಿಗೆ ಸನ್ಮಾನ ಮಾಡಲಾಯಿತು.

ಶ್ರೀ ಕೆರೆಸಂತೆ ಮಹಾಲಕ್ಷೀ ಭಜನಾ ಮಂಡಳಿ ಅಧ್ಯಕ್ಷ ರಮೇಶ್ ಮಂಡಳಿ ಕೈಗೊಂಡಿರುವ ಧಾರ್ಮಿಕ ಮತ್ತು ಸಾಾಮಾಜಿಕ ಕಾರ್ಯಕ್ರಮಗಳನ್ನು ಸಭೆಗೆ ವಿವರಿಸಿದರು. ಪುರಸಭೆ ಮಾಜಿ ಸದಸ್ಯ ಈರಳ್ಳಿ ರಮೇಶ್, ಮುಖ್ಯಾಧಿಕಾರಿ ಕೆ.ಎಸ್. ಮಂಜು ನಾಥ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಜಯರಾಂ ಸೇರಿದಂತೆ ಮತ್ತಿತರರು ಇದ್ದರು.

9ಕೆಕೆಡಿಯುು3.

ಕಡೂರು ಪಟ್ಟಣದ ಪುರಸಭೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆರ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕೆರೆ ಸಂತೆ ಮಹಾ ಲಕ್ಷೀ ಭಜನಾ ಮಂಡಳಿ ಶ್ರೀ ಮಂಜುನಾಥಸ್ವಾಮಿ ಭಜನಾ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು