ಯಲಬುರ್ಗಾ: ಭಕ್ತ ಕನಕದಾಸ ಜಯಂತಿಯನ್ನು ಸರಳವಾಗಿ ಆಚರಣೆಗೆ ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಹಾಲುಮತ ಸಮುದಾಯದ ಮುಖಂಡರ ತೀರ್ಮಾನದಂತೆ ಈ ಬಾರಿ ನ. ೮ರಂದು ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ತಹಸೀಲ್ದಾರ್ ಕಚೇರಿ ಮತ್ತು ಕನಕದಾಸ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನಕದಾಸ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದರು.
ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರೆ ಆರಂಭವಾಗುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಕುಂಭ ಕಳಸದ ಮೇರವಣಿಗೆ ಯಾವುದೇ ಕಾರಣಕ್ಕೂ ಬೇಡ. ಜಯಂತಿ ಸರಳವಾಗಿ ಆಚರಿಸಲು ಮುಂದಾಗೋಣ ಎಂದರು.ಈ ಸಂದರ್ಭದಲ್ಲಿ ರೇವಣಪ್ಪ ಹಿರೇಕುರುಬರ, ಕೆರಿಬಸಪ್ಪ ನಿಡಗುಂದಿ, ಗದ್ದೆಪ್ಪ ಕುಡಗುಂಟಿ, ಬಾಲಚಂದ್ರ ಸಾಲಭಾವಿ,ಯಲ್ಲಪ್ಪ ಹೊಸಮನಿ, ಅಶೋಕ ಮಾಲಿಪಾಟೀಲ್, ಶಿವು ರಾಜೂರು, ಸುರೇಶ ಜಮಾದಾರ, ಹನುಮಪ್ಪ ಹನುಮಾಪುರ, ಸಾವಿತ್ರಿ ಗೊಲ್ಲರ, ಶಾರದಾ ಸಾಲಭಾವಿ, ಅಧಿಕಾರಿಗಳಾದ ಎಂ.ದೇವರಡ್ಡಿ, ಹನುಮಗೌಡ ಮಾಲಿಪಾಟೀಲ್, ಸಣ್ಣಕುಂಟೆಪ್ಪ ಆಲೂರು, ಶಶಿಧರ ಸಕ್ರಿ ಸೇರಿದಂತೆ ಮತ್ತಿತರರು ಇದ್ದರು.