ಗದಗ:
ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರ ಮಾತನಾಡಿ, ಕನಕದಾಸರು ಮಾನವ ಜೀವಿಗಳ ಬದುಕು ಹಸನವಾಗಲು ತಮ್ಮ ಕೀರ್ತನೆಗಳ ಮೂಲಕ ನಾಡನ್ನೆಲ್ಲ ಸಂಚರಿಸಿ ಜೀವನ ಸಂದೇಶಗಳನ್ನು ಬೋಧಿಸಿದ್ದಾರೆ. ನಾವು ಕುರುಬರು, ನಮ್ಮಜ್ಜ ಬೀರಪ್ಪ ಕಾಯುವ ಕುರಿಗಳನ್ನೆಲ್ಲ ಎಂಬ ಕೀರ್ತನೆ ಮೂಲಕ ಸಕಲ ಜೀವಿಗಳನ್ನು ಸಹಿಸುವ ದೇವರು ಎಲ್ಲ ಜೀವಿಗಳ ರಕ್ಷಕನಾಗಿದ್ದಾನೆ. ಜೀವ ಮತ್ತು ಜೀವನ ದೇವರು ಕೊಟ್ಟ ಪ್ರಸಾದ ಇದನ್ನು ಮನುಕುಲದ ಉದ್ಧಾರಕ್ಕಾಗಿ ಸವೆಸಬೇಕು. ಜೀವನದ ತಲ್ಲಣಗಳಿಗೆ ತತ್ತರಿಸಲಾರದ ಸಮಾಧಾನದಿಂದ ಬದುಕಿನ ಕಷ್ಟಗಳನ್ನು ಎದುರಿಸಬೇಕು. ಎಲ್ಲರನ್ನು ಸಲಹುವವನು ದೇವರಿದ್ದಾರೆ. ಚಿಂತ್ಯಾಕ ಮಾಡುತಿದ್ದಿ, ಚಿನ್ಮಯನಿದ್ದಾನೆ ಎಂಬ ಕನಕದಾಸರ ಮಾತು ನೊಂದ ಜೀವಿಗಳ ನೊಂದ ಜೀವಿಗಳ ಬದುಕಿಗೆ ಚೈತನ್ಯ ನೀಡುವ ಮಹಾಬೆಳಕಾಗಿದೆ. ಕುಲ-ಕುಲ ಎಂದು ಹೊಡೆದಾಡದೆ ಎಲ್ಲ ಮನುಜರು ಒಂದೇ ಎಂಬ ಸಮಬಾಳು- ಸಮಪಾಲು ವಿಶ್ವ ಸಂದೇಶ ನೀಡಿದ ಮಹಾದಾರ್ಶನಿಕ ಕನಕದಾಸರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕ ಬೆಳಕಿನ ಬದುಕಾಗುತ್ತದೆ ಎಂದರು.
ಮುಖಂಡರಾದ ರವಿ ದಂಡಿನ, ವಾಸಣ್ಣ ಕುರಡಗಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ. ಬಿ. ಬಿಡಿನಹಾಳ ಮಾತನಾಡಿದರು.ಡಾ. ಟಿ.ಎನ್. ಗೋಡಿ ಸ್ವಾಗತಿಸಿ ಪರಿಚಯಿಸಿದರು. ವಿ.ವೈ. ಮಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ. ಎನ್. ಕಾಮನಹಳ್ಳಿ ಅಧ್ಯಕ್ಷತೆ ವಹಿಸಿ ಕನಕಾಮೃತ ಸೇವಾ ಸಂಘದ ರೂಪುರೇಷೆಗಳನ್ನು ವಿವರಿಸಿದರು.
ಜಯದೇವ ಮೆಣಸಗಿ, ಡಾ. ಎನ್.ಎಂ. ಅಂಬಲಿಯವರ, ರಾಮಕೃಷ್ಣ ರೊಳ್ಳಿ, ಯರನಾಳ ಬಿ.ಎನ್., ಸುರೇಶ ಕೊಪ್ಪದ, ಪ್ರಕಾಶ ಕರಿ, ಶ್ವೇತಾ ಪಿ. ಬೆನಕನವಾರಿ, ವಿಜಯಲಕ್ಷ್ಮೀ ಎಸ್. ದಿಂಡೂರ, ಮುತ್ತಣ್ಣ ಮುಶಿಗೇರಿ, ಡಾ. ಯಶವಂತಕುಮಾರ ಕುರಿ, ಡಾ. ನಾಗರಾಜ ವಡಗೇರಿ, ಡಿ.ಐ. ಅಸುಂಡಿ, ಅಂದಪ್ಪ ವಡಗೇರಿ, ಆರ್.ಬಿ. ಅಂದಪ್ಪನವರ, ರುದ್ರಣ್ಣ ಗುಳಗುಳಿ, ವೈ.ಎಸ್. ಕೊಂಡಿ, ಸುರೇಶ ಕೊಪ್ಪದ, ರಾಮಣ್ಣ ಕಾಶಪ್ಪನವರ, ನಾಗರಾಜ ಕಂಬಳಿ, ರೇಣುಕಾ ಕೇಸರಿ, ಶಕುಂತಲಾಬಾಯಿ ದಂಡಿನ ಹಾಗೂ ಸಮಾಜದ ಗಣ್ಯರು, ಗುರು-ಹಿರಿಯರು, ಸಮಾಜ ಬಾಂಧವರು ಇದ್ದರು. ಡಾ. ಎಸ್.ಎನ್. ವೆಂಕಟಾಪುರ, ಡಾ. ಎಂ. ಮಡ್ಡಿ ಹಾಗೂ ಅಡವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೈ.ಕೆ. ಪಿಡಗಣ್ಣವರ ವಂದಿಸಿದರು.