ದ್ಯಾಮವ್ವ-ದುರ್ಗವ್ವ ದೇವಿಯರ ಹೊನ್ನಾಟಕ್ಕೆ ಭಕ್ತಸಾಗರ ಸಾಕ್ಷಿ

KannadaprabhaNewsNetwork |  
Published : May 04, 2026, 02:15 AM IST
ಸಂಭ್ರಮದ ದ್ಯಾಮವ್ವ-ದುರ್ಗವ್ವ ಜಾತ್ರೆ | Kannada Prabha

ಸಾರಾಂಶ

ಧಾರವಾಡದ ಐತಿಹಾಸಿಕ ಮತ್ತು ಪುರಾತನ ಬಡಾವಣೆಗಳಲ್ಲಿ ಒಂದಾಗಿರುವ ಹಾವೇರಿಪೇಟೆಯ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತಿದ್ದು, ಭಾನುವಾರ ನಡೆದ ಹೊನ್ನಾಟ ಭಕ್ತರ ಕಣ್ಮನ ಸೆಳೆಯಿತು.

ಧಾರವಾಡ:

ನಗರದ ಐತಿಹಾಸಿಕ ಮತ್ತು ಪುರಾತನ ಬಡಾವಣೆಗಳಲ್ಲಿ ಒಂದಾಗಿರುವ ಹಾವೇರಿಪೇಟೆಯ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತಿದ್ದು, ಭಾನುವಾರ ನಡೆದ ಹೊನ್ನಾಟ ಭಕ್ತರ ಕಣ್ಮನ ಸೆಳೆಯಿತು.

30 ವರ್ಷಗಳ ಬಳಿಕ ನಡೆಯುತ್ತಿರುವ ಈ ಜಾತ್ರೆಯು ಕಳೆದ ಹಲವು ದಿನಗಳಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭವಾಗಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆ ಹೊನ್ನಾಟದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ದೇವಿಯರ ಕೃಪೆಗೆ ಪಾತ್ರರಾದರು.ದೇವಿಯರ ಮೆರವಣಿಗೆ:

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿದವು. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ದೇವಿಯರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಬಂಡಾರದ ಓಕುಳಿ:

ಹೊನ್ನಾಟದ ಅಂಗವಾಗಿ ಭಕ್ತರು ಪರಸ್ಪರ ಬಂಡಾರ ಎರಚುವ ಮೂಲಕ ಸಂಭ್ರಮಿಸಿದರು. ದೇವಿಯರ ಪಲ್ಲಕ್ಕಿಯ ಮೇಲೆ ಹೂಮಳೆ ಸುರಿಸುತ್ತ, ಜಯಘೋಷ ಹಾಕುತ್ತಾ ಸಾಗಿದ ದೃಶ್ಯ ಭಕ್ತಿಯ ಪರಾಕಾಷ್ಠೆಯನ್ನು ತಲುಪಿದ್ದಂತೂ ವಿಶೇಷವಾಗಿತ್ತು.ಸಾಂಸ್ಕೃತಿಕ ವೈಭವ:ಮೆರವಣಿಗೆಯ ಉದ್ದಕ್ಕೂ ಕರಡಿ ಮಜಲು, ಡೊಳ್ಳು ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕುಣಿದು ಕುಪ್ಪಳಿಸಿದರು.ಭಕ್ತಿಯ ಸಾಗರ: ಮನೆಗಳ ಮುಂದೆ ಸಾರಣೆ ಹಾಕಿ, ರಂಗೋಲಿ ಬಿಡಿಸಿ ದೇವಿಗೆ ಉಡಿ ತುಂಬುವ ಕಾರ್ಯ ನಡೆಯಿತು. ಜಾತ್ರೆಗೆ ಹಾವೇರಿಪೇಟೆ, ಸುತ್ತಮುತ್ತಲಿನ ಓಣಿ, ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಭೀಮಣ್ಣವರ, ಗಂಗಣ್ಣ ಜಮದಾಳೆ, ಗೌರವ ಕಾರ್ಯದರ್ಶಿ ವಿಜಯ ಬೋಸ್ಲೆ, ಖಜಾಂಚಿ ಆರ್.ಜಿ. ಕೆಲಗೇರಿ, ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಮಕ್ಕಳು, ತಾಯಂದಿರು ಸಡಗರದಿಂದ ಪಾಲ್ಗೊಂಡಿದ್ದರು.

ಹಾವೇರಿಪೇಟೆಯ ದ್ಯಾಮವ್ವ-ದುರ್ಗವ್ವನ ಜಾತ್ರೆಯೆಂದರೆ ನಮಗೆ ಹಬ್ಬದ ಸಂಭ್ರಮ. ಅದರಲ್ಲೂ ಭಾನುವಾರ ನಡೆದ ಹೊನ್ನಾಟದ ವೈಭವ ಕಣ್ತುಂಬಿಕೊಳ್ಳಲು ಬಂದ ಭಕ್ತಸಾಗರ ಪ್ರಸಾದ ಸ್ವೀಕರಿಸಿ ದೇವಿಯರ ಕೃಪೆಗೆ ಪಾತ್ರರಾದರು.

ಕೆ.ಎಸ್. ಭೀಮಣ್ಣವರ, ಅಧ್ಯಕ್ಷ ಜಾತ್ರಾ ಮಹೋತ್ಸವ ಸಮಿತಿ

ಈ ಹೊನ್ನಾಟದೊಂದಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ ಒಂದು ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ದೇವಿಯರ ಮರಳಿ ಗುಡಿ ಸೇರುವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.ವಿಜಯ ಬೋಸ್ಲೆ, ಗೌರವ ಕಾರ್ಯದರ್ಶಿ ಜಾತ್ರಾ ಮಹೋತ್ಸವ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಹಗಾರರಿಂದ ಸದಭಿರುಚಿಯ ಕವನ, ಕಥೆಗಳು ಹೊರಹೊಮ್ಮಲಿ: ದಿನೇಶ ಹೊಳ್ಳ
ಆಧುನಿಕೀಕರಣದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂಖ್ಯೆ ಕುಸಿತ: ಸಂಗಮೇಶ ಪ್ರಭಾಕರ್