ಕೋಟಿಲಿಂಗೇಶರಕ್ಕೆ ಹರಿದು ಬಂದ ಭಕ್ತಸಾಗರ

KannadaprabhaNewsNetwork |  
Published : Feb 27, 2025, 12:30 AM IST
26ಕೆಜಿಎಫ್‌2 | Kannada Prabha

ಸಾರಾಂಶ

ಬುಧವಾರ ಬೆಳಿಗ್ಗೆ ದೇವಾಲಯದ ಅರ್ಚಕರಿಂದ ೧೦೮ ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು ೫೧ ಅಡಿ ಎತ್ತರದ ಶಿವಲಿಂಗಕ್ಕೆ ಹಾಲು ತುಪ್ಪದ ಅಭಿಷೇಕವನ್ನು ಮಾಡಲಾಯಿತು, ನಂತರ ಹೂಗಳಿಂದ ಪುಷ್ಪರ್ಚನೆ ಮಾಡಲಾಯಿತು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಪ್ರತಿಷ್ಠಾಪನೆ ಮಾಡಿದ್ದ ಶಿವಲಿಂಗಗಳಿಗೆ ಹಾಲಿನ ಅಭಿಷೇಕವನ್ನು ಸಲ್ಲಿಸಿ ಪೂಜೆಯನ್ನು ಮಾಡಿದರು.

ಕನ್ನಡಪ್ರಭ ವಾರ್ತ ಕೆಜಿಎಫ್ ನಗರದ ಹೊರವಲಯದ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ದಕ್ಷಿಣ ಭಾರತದಾತ ಲಕ್ಷಾಂತರ ಭಕ್ತರ ಸಮೂಹವೇ ಹರಿದುಬಂದು ಶಿವಲಿಂಗಳನ್ನು ಪ್ರತಿಷ್ಠಾಪನೆ ಮಾಡಿದರು. ಕುಟುಂಬಸ್ಥರು ಶಿವಲಿಂಗಗಳಿಗೆ ಅಭಿಷೇಕವನ್ನು ಹಾಗೂ ಪೂಜಾ ಕಂಕೈರ್ಯಗಳನ್ನು ನೇರವೇರಿಸಿದರು.ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಗಣೇಶನ ದೇವಾಲಯ, ಮಂಜುನಾಥ ದೇವಾಲಯ, ಶ್ರೀದೇವಿ, ಭೂದೇವಿ, ಶನಿಸಿಂಗಾಪುರ, ಅಯ್ಯಪ್ಪ, ಸುಬ್ರಮಣ್ಯ, ವಿಷ್ಣು ಮಹೇಶ್ವರ, ಕನ್ಯಕಾಪರಮೇಶ್ವರಿ, ದುರ್ಗಾದೇವಿ ದೇವಾಲಯಗಳಲ್ಲಿ ಹಾಗೂ ದೇವಾಲಯದ ಅವರಣದಲ್ಲಿ ಪ್ರತಿಸ್ಥಾಪನೆ ಮಾಡಿರುವ ಕೋಟಿಲಿಂಗಗಳಿಗೆ ಅಭಿಷೇಕ, ನವ್ಯ ದ್ರವ್ಯಗಳಿಂದ ವಿಷೇಶ ಪೂಜೆ, ಹೋಮ ಹವನಗಳನ್ನು ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿರವರಿಂದ ಏರ್ಪಡಿಸಿದ್ದರು.೧೦೮ ಅಡಿ ಎತ್ತರದ ಶಿವಲಿಂಗ

ಬುಧವಾರ ಬೆಳಿಗ್ಗೆ ದೇವಾಲಯದ ಅರ್ಚಕರಿಂದ ೧೦೮ ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು ೫೧ ಅಡಿ ಎತ್ತರದ ಶಿವಲಿಂಗಕ್ಕೆ ಹಾಲು ತುಪ್ಪದ ಅಭಿಷೇಕವನ್ನು ಮಾಡಲಾಯಿತು, ನಂತರ ಹೂಗಳಿಂದ ಪುಷ್ಪರ್ಚನೆ ಮಾಡಲಾಯಿತು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಪ್ರತಿಷ್ಠಾಪನೆ ಮಾಡಿದ್ದ ಶಿವಲಿಂಗಗಳಿಗೆ ಹಾಲಿನ ಅಭಿಷೇಕವನ್ನು ಸಲ್ಲಿಸಿ ಪೂಜೆಯನ್ನು ಮಾಡಿದರು. ಶಾಸಕ, ಸಚಿವರಿಂದ ಪೂಜೆ ಅಹಾರ ಮತ್ತು ನಾಗರಿಕ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅ‍ರ ಪುತ್ರಿ ಶಾಸಕಿ ರೂಪಕಲಾಶಶಿಧರ್ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಕೋಟಿಲಿಂಗಗಳ ದರ್ಶನವನ್ನು ಪಡೆದುಕೊಂಡರು, ದೇವಾಲಯದ ಆವರಣದಲ್ಲಿದ್ದ ಎಲ್ಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು ನಂತರ ಬೃಹತ್ ೧೦೮ ಅಡಿ ಲಿಂಗದ ಮುಂಬಾಗ ತನ್ನ ಬೆಂಬಲಿಗರ ನಿಂತು ಪೂಜೆಯನ್ನು ಸಲ್ಲಿಸಿದರು. ಕೋಟಿಲಿಂಗಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಶಿವರಾತ್ರಿ ಪ್ರಯುಕ್ತ ಕೆಜಿಎಫ್, ಬಂಗಾರಪೇಟೆ ಕೋಲಾರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ವಿಕೋಟದಿಂದ ಬರುವ ಭಕ್ತರಿಗೆ ರಾಜ್ಯ ಸಾರಿಗೆ ಸಂಸ್ಥೆಯವರು ವಿಷೇಶ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಿದ್ದರು.

ಪೊಲೀಸ್ ಬಂದೋಬಸ್ತ್ಪೊಲೀಸ್ ವರಿಷ್ಠಾದಿಕಾರಿ ಶಾಂತರಾಜು ಮಾರ್ಗದರ್ಶನದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ೧೦೦ ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಅದರಲ್ಲೂ ಮುಖ್ಯವಾಗಿ ವಾಹನ ದಟ್ಟಣೆಯನ್ನು ತಡೆಗಟ್ಟಲು ಪೊಲೀಸ್‌ರು ಕರ‍್ಯನಿರ್ವಹಿಸಿದ್ದರು.ಶಿವರಾತ್ರಿ ಪ್ರಯುಕ್ತ ಕೇಂದ್ರ ವಲಯ ಐಜಿ ಲಾಬುರಾಮ್,ಕೋಲಾರ ಜಿಲ್ಲಾ ಪಂ, ಸಿ.ಓ ಪ್ರವೀಣ್ ಬಾಗೇವಾಡಿ, ಹಾಗೂ ಇನ್ನಿತರ ಗಣ್ಯರು ಶಿವಲಿಂಗಗಳ ದರ್ಶನವನ್ನು ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ