ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಮೀಪದ ದೊಡ್ಡಾಲಘಟ್ಟ ಗ್ರಾಮದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗೋವಿಂದರಾಜನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರೊಡನೆ ಮಾತನಾಡಿ, ದೊಡ್ಡ ಹಾಲ್ಘಟ್ಟ ಗ್ರಾಮದ ಕೆರೆಯ ಸುತ್ತಮುತ್ತಲಿನ ಗ್ರಾಮದ ಕೆರೆಗಳಿಗೆ ಅತಿ ಶೀಘ್ರದಲ್ಲೇ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತದೆ. ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಹಾಗೂ ಸ್ಥಳೀಯ ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ಸರಿಪಡಿಸಿ ರೈತರಿಗೆ ಸಮರ್ಪಕ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ರೈತರು ಕೆರೆಗಳು ತುಂಬಿಲ್ಲ ಎಂದು ಭಯ ಬೀಳುವ ಅವಶ್ಯಕತೆ ಬೇಡ. ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಭರಮಸಾಗರ ಕೆರೆ ಮೊದಲು ತುಂಬಿದರೆ ಸ್ಥಳೀಯವಾಗಿರುವಂತಹ ಎಲ್ಲಾ ಕೆರೆಗಳು ತುಂಬಿದಂತೆ. ಭರಮಸಾಗರ ಸುತ್ತಮುತ್ತಲಿನ ಕೆರೆಗಳಿಗೆ ಭರಮಸಾಗರ ಕೆರೆ ಒಂದು ಡ್ಯಾಂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಡ್ಯಾಂ ತುಂಬಿದರೆ ಸಣ್ಣಪುಟ್ಟ ಕೆರೆಗಳು ತುಂಬುತ್ತವೆ ಎಂದು ರೈತರಿಗೆ ಮನವರಿಕೆ ಮಾಡಿದರು.ದೊಡ್ಡಾಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ ನಾಗರಾಜಪ್ಪ ಮಾತನಾಡಿ, ಸಿರಿಗೆರೆ ಮಠಕ್ಕೂ ದೊಡ್ಡಾಲಘಟ್ಟ ಗ್ರಾಮಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಶ್ರೀಗಳ ಕೃಪೆಯಿಂದ ದೊಡ್ಡಾಲಘಟ್ಟ ಗ್ರಾಮದ ಕೆರೆಗೆ ತುಂಗಭದ್ರಾ ನೀರನ್ನ ಹರಿಸುವುದರ ಮೂಲಕ ರೈತರಿಗೆ ನೆರವಾಗಿದ್ದಾರೆ ಎಂದರು. ಗ್ರಾಮಸ್ಥರು ಶ್ರೀಗಳನ್ನು ಅದ್ಧೂರಿಯಾಗಿ ಡೊಳ್ಳು ನಗಾರಿ ಬಾರಿಸುವುದರ ಮೂಲಕ ರಸ್ತೆ ಉದ್ಧಕ್ಕೂ ತಳಿರು-ತೋರಣ ಕಟ್ಟಿ ಗ್ರಾಮಕ್ಕೆ ಬರಮಾಡಿಕೊಂಡರು.
ಸಮಸ್ಯೆ ಇದ್ದರೆ ಮಠಕ್ಕೆ ಬಂದು ಪರಿಹರಿಸಿಕೊಳ್ಳಿ