ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಯಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಮತ್ತು ಅಸ್ಸಾಂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು, ನಂತರ ಕೆಲಕಾಲ ಪ್ರತಿಭಟನೆ, ಮಾನವ ಸರಪಳಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಅಸ್ಸಾಂ ಸರ್ಕಾರದ ನಡೆಯನ್ನು ಖಂಡಿಸಿ ಕೆಪಿಸಿಸಿ ರಾಜ್ಯಾದಂತ ಪ್ರತಿಭಟನೆ ನಡೆಸುತ್ತಿದೆ. ಅಸ್ಸಾಂನಲ್ಲಿ ಸಂಪೂರ್ಣ ಕಾನೂನು ಬಾಹಿರತೆಯನ್ನು ಪ್ರದರ್ಶಿಸಲಾಗಿದೆ ಎಂದರು.ನ್ಯಾಯಯಾತ್ರೆಯ ಉದ್ದಕ್ಕೂ ಬಿಜೆಪಿ ಗೂಂಡಾಗಳ ಮೂಲಕ ದಾಳಿ ನಡೆಸಿದ್ದಾರೆ. ಈ ಮೂಲಕ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿರುವುದು ಖಂಡನೀಯ ಎಂದರು. ರಾಹುಲ್‌ಗಾಂಧಿ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ, ಇದು ಬಿಜೆಪಿ ಗೂಂಡಾ ಸಂಸ್ಕೃತಿ, ರಾಮ ರಾಜ್ಯದ ಹೆಸರೇಳುತ್ತ ಗೂಂಡಾ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಸರ್ಕಾರ ತೊಲಗಬೇಕು ಎಂದರು.
BOX
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾಗಿಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಹಮ್ಮದ್ ಅಜ್ಗರ್ ಮುನ್ನಾ, ಎ.ಎಸ್. ಗುರುಸ್ವಾಮಿ, ಎಚ್. ವಿ. ಚಂದ್ರು, ತೋಟೇಶ್, ಮುಕುಂದ ವರ್ಮ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ್ ಜಿಪಂ ಮಾಜಿ ಸದಸ್ಯ ಸದಾಶಿವಮೂರ್ತಿ, ರಮೇಶ್, ಕೊಪ್ಪಾಳಿ ಮಹದೇವನಾಯಕ, ಲತಾ ರಾಜಶೇಖರ್, ಚಿನ್ನಮ್ಮ, ಮುಖಂಡರಾದ ಸೈಯದ್‌ರಫಿ, ಮಹೇಶ್‌ಕುದರ್, ಡಿ.ಎನ್. ನಟರಾಜ್, ನಾಗವಳ್ಳಿ ಸೋಮಣ್ಣ, ಆರ್.ಪಿ.ನಂಜುಂಡಸ್ವಾಮಿ, ಸಿ,ಎ. ಮಹದೇವಶೆಟ್ಟಿ ಎನ್. ಲೋಕೇಶ್, ಮೋಹನ್, ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಸಂಸ್ಥೆಯ ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.