ಕನ್ನಡಪ್ರಭ ವಾರ್ತೆ ಮೂಡಲಗಿ
ಶತಮಾನೋತ್ಸವ ಅಂಗವಾಗಿ ಭಾರತದ ಸೇವಾದಳದ ಶಿಬಿರಾರ್ಥಿಗಳಿಂದ ಪಟ್ಟಣದಲ್ಲಿ ಪ್ರಭಾತಪೇರಿ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಿಂದ ಆರಂಭವಾಗಿ ಕಲ್ಮೇಶ್ವರ ವೃತ್ತದವರಿಗೆ ಮರಳಿ ಮೂಡಲಗಿ ಶಿಕ್ಷಣ ಸಂಸ್ಥೆವರಿಗೆ ಜರುಗಿತು.
ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸೇವಾದಳದಲ್ಲಿ ಮಕ್ಕಳು ಭಾಗವಹಿಸವದರಿಂದ ಮಕ್ಕಳಲ್ಲಿ ಸೇವಾ ಮನೋಭಾವನೆ ಮತ್ತು ಶಿಸ್ತು, ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದರು.ಎಸ್.ಎಸ್.ಆರ್ ಪ್ರೌಢಶಾಲೆಯ ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ ಮಾತನಾಡಿ, 1923 ಡಿಸೆಂಬರ್ 28ರಂದು ಡಾ.ಎನ್.ಎಸ್ ಅರ್ಡೇಕರ್ ಅವರು ಆರಂಭ್ದಿ ಸೇವಾದಳ ಇಂದು ದೇಶಾದ್ಯಂತ ಶಾಲಾ-ಕಾಲೇಜು ಘಟಕಗಳು ಪ್ರಾರಂಭವಾಗಿ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆ ಕಾಣಲು ಸಹಾಯವಾಗಿದೆ ಎಂದ ಅವರು ಸೇವಾದಳ ಕಾರ್ಯ ವೈಖರಿಯನ್ನು ವಿವರಿಸಿದರು
ಶಿಕ್ಷಕರಾದ ಕೆ.ಎಚ್.ಪಾಟೀಲ ಸ್ವಾಗತಿಸಿ ನಿರೂಪಿಸಿದರು, ಎಂ ಎಸ್ ಮುತ್ತಣ್ಣವರ ವಂದಿಸಿದರು. ಮಕ್ಕಳಿಂದ ಸೇವಾದಳ ಪ್ರದರ್ಶಣ ವ್ಯಾವ್ಯಾಮ ಮತ್ತು ಸಾಭಿನಯ ಗೀತೆಗಳು ಮುಡಿಬಂದವರು.