ಮುಂಡರಗಿ:ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದ ನಂತರ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸರ್ಕಾರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮೋದಿಯವರ 11 ವರ್ಷಗಳ ಅಧಿಕಾರದ ಅವಧಿಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.
ಬಿಜೆಪಿ ಯುವ ಮುಖಂಡ ಆನಂದಗೌಡ ಪಾಟೀಲ ಮಾತನಾಡಿ, ಜನಧನ್ ಯೋಜನೆ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದ ಕೀರ್ತಿ,ಉಜ್ವಲ್ ಯೋಜನೆ ಮೂಲಕ ಬಡ ಕುಟುಂಬಗಳನ್ನು ಹೊಗೆಯಿಂದ ಮುಕ್ತಗೊಳಿಸಿದ ಕೀರ್ತಿ, ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಆರೋಗ್ಯ ರಕ್ಷಣೆ ಒದಗಿಸಿದ ಕೀರ್ತಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಿರಾಶ್ರಿತರಿಗೆ ಮನೆ ನೀಡಿದ ಕೀರ್ತಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಯಾವುದೇ ಫಲಾಪೇಕ್ಷೆ ಇಲ್ಲದೇ ನಡೆಯುತ್ತಿರುವ ಅವರ ಸೇವೆ ನೂರ್ಕಾಲ ಮುಂದುವರೆಯಲಿ ಎಂದರು.ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಅಂಗಡಿ, ರಜನಿಕಾಂತ ದೇಸಾಯಿ, ಪವನ್ ಮೇಟಿ, ತಿಮ್ಮಪ್ಪ ದಂಡೀನ, ಜ್ಯೋತಿ ಹಾನಗಲ್, ಪ್ರಶಾಂತಗೌಡ ಗುಡಪ್ಪನವರ, ಬಸವರಾಜ ಬಿಳಿಮಗ್ಗದ, ಎಸ್.ಎಸ್. ಗಡ್ಡದ, ಪರಶುರಾಮ ಕರಡಿಕೊಳ್ಳ, ವೀರೇಂದ್ರ ಅಂಗಡಿ, ಮೈಲಾರಪ್ಪ ಕಲಕೇರಿ, ನಾಗರಾಜ ಗುಡಿಮನಿ, ದಸ್ತಗಿರಸಾಬ್ ಹೊಸಮನಿ, ಆರ್ ಎಂ ತಪ್ಪಡಿ, ವೀರಣ್ಣ ತುಪ್ಪದ, ಶ್ರೀನಿವಾಸ್ ಅಬ್ಬಿಗೇರಿ, ನಾಗರಾಜ ಕೊರ್ಲಹಳ್ಳಿ, ಚಿನ್ನಪ್ಪ ವಡ್ಡಚ್ಚಿ, ಯಲ್ಲಪ್ಪ ಗಣಾಚಾರಿ, ಮಂಜುನಾಥ ಮುಧೋಳ, ಸುಭಾಶ್ಚಂದ್ರ ಕ್ವಾಟಿ, ಪರಶುರಾಮ ಸುಣಗಾರ, ದ್ರುವಕುಮಾರ ಹೂಗಾರ, ಪವಿತ್ರಾ ಕಲ್ಲಕುಟಗರ, ಅರುಣಾ ಪಾಟೀಲ್, ವೀಣಾ ಬೂದಿಹಾಳ್ ,ಪುಷ್ಪಾ ಉಕ್ಕಲಿ, ಪವನ್ ಲೇಂಡ್ವೆ, ಶಿವಾನಂದ ಪೂಜಾರ, ಕೃಷ್ಣಾ ರಾಠೋಡ, ರವೀಂದ್ರಗೌಡ ಪಾಟೀಲ್, ಆನಂದ ಗುರ್ನಳ್ಳಿ, ಅಶೋಕ್ ಶೀಗೇನಹಳ್ಳಿ, ಸೋಮರೆಡ್ಡಿ ಮುದ್ದಾಬಳ್ಳಿ, ಹನುಮಂತ ಲಮಾಣಿ, ಅಶೋಕ ಚೂರಿ, ವಿನಾಯಕ ಕರಿಬಿಷ್ಟಿ, ವೆಂಕಟೇಶ ಪುರದ್, ಲೋಹಿತ ಪುರದ ಉಪಸ್ಥಿತರಿದ್ದರು.