ಮಂಡ್ಯ ಜಿಲ್ಲೆಯಲ್ಲಿ ಭಾರತೀ ಉತ್ಸವ ತನ್ನದೇ ಆದ ಛಾಪು ಮೂಡಿಸಿದೆ: ಮಧು ಜಿ.ಮಾದೇಗೌಡ

KannadaprabhaNewsNetwork |  
Published : Sep 17, 2025, 01:05 AM IST
16ಕೆಎಂಎನ್ ಡಿ15 | Kannada Prabha

ಸಾರಾಂಶ

ವಿವಿಧ ಅಂಗ ಸಂಸ್ಥೆ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಿಂದ ಮದ್ದೂರಿನ ಕ್ರೀಡಾಂಗಣದಿಂದ ಆರಂಭವಾದ ವಾಕ ಥಾನ್ ಟಿ.ಬಿ.ಸರ್ಕಲ್ ವೃತ್ತದ ಮಾರ್ಗವಾಗಿ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆ, ಮರಕಾಡುದೊಡ್ಡಿ, ದೇವರಹಳ್ಳಿ ಗೇಟ್ ಮಾರ್ಗವಾಗಿ ಭಾರತೀ ಕ್ಯಾಂಪಸ್ ವರೆಗೆ ನಡೆದ ಕಾಲ್ನನಡಿಗೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಂಡ್ಯ ಜಿಲ್ಲೆಯಲ್ಲೆ ಭಾರತೀ ಉತ್ಸವ ತನ್ನದೇ ಆದ ಛಾಪು ಮೂಡಿಸಿ ಸಾಂಸ್ಕೃತಿಕ ಉತ್ಸವವಾಗಿ ಬಿಂಬಿತವಾಗಿದೆ ಎಂದು ವಿಧಾನ ಪರಿಪತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಚೇರ್‍ಮನ್ ಮಧು ಜಿ.ಮಾದೇಗೌಡ ಹೇಳಿದರು.ಭಾರತೀ ಕಾಲೇಜಿನ ಗೇಟ್ ಮುಂಭಾಗ ಭಾರತೀ-ವಾಕಥನ್ ಕಾಲ್ನಡಿಗೆ ಭಾರತೀ ಉತ್ಸವದೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ವೇದಿಕೆ ಸಿದ್ಧಪಡಿಸಿ ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಲು, ಆಸಕ್ತಿ ಮೂಡಿಸಲು ಆಯೋಜಿಸಲಾಗಿದೆ ಎಂದರು.

ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ. ಜಿಲ್ಲೆಯ ಸೊಬಗನ್ನು ಮತ್ತಷ್ಟು ಪ್ರಜ್ವಲ ಗೊಳಿಸಲು ಭಾರತೀ ಉತ್ಸವ ಆಯೋಜಿಸಲಾಗುತ್ತಿದೆ. ಜನತೆ ಈ ಸೊಬಗನ್ನು ಸವಿಯಬೇಕು ಎಂದರು.

ವಿವಿಧ ಅಂಗ ಸಂಸ್ಥೆ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಿಂದ ಮದ್ದೂರಿನ ಕ್ರೀಡಾಂಗಣದಿಂದ ಆರಂಭವಾದ ವಾಕ ಥಾನ್ ಟಿ.ಬಿ.ಸರ್ಕಲ್ ವೃತ್ತದ ಮಾರ್ಗವಾಗಿ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆ, ಮರಕಾಡುದೊಡ್ಡಿ, ಉಪ್ಪಿನಕೆರೆಗೇಟ್, ಬೋರಾಪುರ, ಛತ್ರದ ಹೊಸಹಳ್ಳಿ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಗೇಟ್, ದೇವರಹಳ್ಳಿ ಗೇಟ್ ಮಾರ್ಗವಾಗಿ ಭಾರತೀ ಕ್ಯಾಂಪಸ್ ವರೆಗೆ ನಡೆದ ಕಾಲ್ನನಡಿಗೆಯಲ್ಲಿ ಸುಮಾರು 3 ಸಾವಿರ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಸ್ಥೆಯ ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕರು, ಅಂಗ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕ ಕೇತರಾರು ನಡಿಗೆಯಲ್ಲಿ ಪಾಲ್ಗೊಂಡರು. ವಾಕಥಾನ್ ನಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್, ಮೊಬೈಲ್ ಆರೋಗ್ಯ ಸೇವೆ, ಬಾಳೆಹಣ್ಣು, ನೀರಿನ ವ್ಯವಸ್ಥೆ ಹಾಗೂ ಎಲ್ಲರಿಗೂ ಈ ಪ್ರಮಾಣ ಪತ್ರ ನೀಡಲಾಯಿತು.

ಸುಮಾರು 15 ಕಿ.ಮೀ ಈ ವಾಕಥಾನ್ ಸಮುದಾಯ ಭಾಗವಹಿಸಿಕೆ ಮತ್ತು ಪ್ರೋತ್ಸಾಹದ ಉದ್ದೇಶದಿಂದ ಕೈಗೊಳ್ಳಲಾಗಿತ್ತು.

ಈ ವೇಳೆ ಸಂಸ್ಥೆ ಸಿಇಒ ಆಶಯ್ ಜಿ.ಮಧು, ವಿವಿಧ ಅಂಗ ಸಂಸ್ಥೆ ಮುಖ್ಯಸ್ಥರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್. ನಾಗರಾಜ್, ಡಾ.ತಮಿಜ್ ಮಣಿ, ಡಾ.ಬಿ.ಆರ್.ಚಂದನ್, ಡಾ.ಎಸ್.ಎಲ್.ಸುರೇಶ್, ಜಿ.ಕೃಷ್ಣ, ಪುಟ್ಟಸ್ವಾಮಿ, ಜಿ.ಬಿ.ಪಲ್ಲವಿ, ಸಿ.ವಿ.ಮಲ್ಲಿಕಾರ್ಜುನ, ಆಡಳಿತ ಅಧಿಕಾರಿಗಳಾದ ಜವರೇಗೌಡ, ಶೋಭಾ, ಸುನೀಲ್ ಕುಮಾರ್ ಸೇರಿದಂತೆ ಮತ್ತಿತರಿದ್ದರು.ಸೆ.18,19 ಹಾಗೂ 20 ರಂದು ಭಾರತೀ ಉತ್ಸವ: ಡಾ.ಎಂ.ಎಸ್.ಮಹದೇವಸ್ವಾಮಿ

ಕೆ.ಎಂ.ದೊಡ್ಡಿ:

ಭಾರತೀ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಸೆ.18,19 ಹಾಗೂ 20 ರಂದು 3 ದಿನಗಳ ಕಾಲ ಭಾರತೀ ಉತ್ಸವ ಜರುಗಲಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ತಿಳಿಸಿದರು.

ಕಳೆದ ಒಂದೂವರೆ ದಶಕಗಳಿಂದ ಅತ್ಯಂತ ವಿಜೃಂಭಣೆ ಮತ್ತು ವೈಭವದಿಂದ ಭಾರತೀ ಉತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಂಸ್ಕೃತಿಕ ಉತ್ಸವವನ್ನು ಮತ್ತಷ್ಟು ಮೆರಗು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸೆ.18ರಂದು ಬೆಳಗ್ಗೆ ಉತ್ಸವಕ್ಕೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ ಚಾಲನೆ ನೀಡುವರು. ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಅತಿಥಿಗಳಾಗಿ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಆಗಮಿಸಲಿದ್ದಾರೆ. ಶಾಸಕ, ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆ ಮುಖ್ಯ ಕಾರ್ಯನಿರ್ವಣಾಧಿಕಾರಿ ಆಶಯ್ ಜಿ.ಮಧು, ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿಗಳಾದ ಬಿ.ಎಂ. ನಂಜೇಗೌಡ, ಸಿದ್ದೇಗೌಡರು ಹಾಗೂ ಟ್ರಸ್ಟಿಗಳು ಭಾಗವಹಿಸಲಿದ್ದಾರೆ ಎಂದರು.

ಸೆ.18 ರಂದು ಕಾಲೇಜಿನ ರಸ್ತೆಗಳಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಜೊತೆಗೆ ಪೂಜಾ ಕುಣಿತ, ವೀರಗಾಸೆ, ಬ್ಯಾಂಡ್ ಸೆಟ್ ಇತ್ಯಾದಿಗಳನ್ನೊಳಗೊಂಡ ಮೆರವಣಿಗೆ, 3 ದಿನಗಳು ಬೆಳಗ್ಗೆ ಯಿಂದ ಸಂಜೆವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸೆ.18 ರಂದು ಸಂಜೆ ಡಾ.ಶಮಿತಾ ಮಲ್ನಾಡ್ ಮತ್ತು ತಂಡದಿಂದ ಮ್ಯೂಸಿಕಲ್ ನೈಟ್ ಮತ್ತು ನೃತ್ಯ, ಸೆ.19 ಸಂಜೆ 7 ಗಂಟೆಗೆ ಮಿಮಿಕ್ರಿ ಗೋಪಿ ಮತ್ತು ತಂಡದಿಂದ ಮಿಮಿಕ್ರಿ, ಹಾಸ್ಯ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ, ಸೆ.20 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಟಿಯಲ್ಲಿ ಪ್ರಧಾನ ಸಂಚಾಲಕರಾದ ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಎಸ್. ನಾಗರಾಜು, ಭಾರತೀ ಹೆಲ್ತ್ ಸೈನ್ಸ್‌ಸ್ ನಿರ್ದೇಶಕ ಡಾ.ಟಿ. ತಮೀಜ್‌ಮಣಿ, ಸಂಚಾಲಕ ಪ್ರೊ.ಎಸ್. ರೇವಣ್ಣ, ಸಹ ಸಂಚಾಲಕರಾದ ಬಿ.ಕೆ. ಕೃಷ್ಣ, ಸುಂದ್ರೇಶ್ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ