ಬಮೂಲ್ ಚುನಾವಣೆಗೆ ಭಾಸ್ಕರ್ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : May 19, 2025, 02:48 AM ISTUpdated : May 19, 2025, 12:14 PM IST
ಪೋಟೋ 11 : ನೆಲಮಂಗಲ ಕ್ಷೇತ್ರದಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಭಾಸ್ಕರ್ ನಾಮಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

  ಮೇ 25ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಭಾಸ್ಕರ್ ನಾಮಪತ್ರ ಸಲ್ಲಿಸಿದರು.

ದಾಬಸ್‍ಪೇಟೆ: ಮೇ 25ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಭಾಸ್ಕರ್ ನಾಮಪತ್ರ ಸಲ್ಲಿಸಿದರು.

ಬೆಂಗಳೂರಿನ ಹಾಲು ಒಕ್ಕೂಟದ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿವಿಧ ಕಾಂಗ್ರೆಸ್ ಮುಖಂಡರು ಹಾಗೂ ಕೆಲ ಡೈರಿ ಅಧ್ಯಕ್ಷರ ಬೆಂಬಲದಲ್ಲಿ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಭಾಸ್ಕರ್, ಕಳೆದ ಐದು ವರ್ಷದ ಅವಧಿಯಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ 18 ಹಾಲು ಸಂಸ್ಕರಣ ಘಟಕ (ಬಿಎಂಸಿ), 64 ನೂತನ ಡೈರಿ ಕಟ್ಟಡ, 2 ಸಾವಿರ ಚೇರ್ ವಿತರಣೆ, 10ಸಾವಿರಕ್ಕೂ ನೀರಿನ ಕ್ಯಾನ್ ವಿತರಣೆ ಸೇರಿದಂತೆ ತಾಲೂಕಿನಲ್ಲಿ ಬಮೂಲ್ ಪಶು ಆಹಾರ ಕಾರ್ಖಾನೆ ನಿರ್ಮಾಣಕ್ಕೆ ಸುಮಾರು 15ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಕ್ಷೇತ್ರದಲ್ಲಿ ಶಾಸಕ ಎನ್.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ. ಮತ್ತೊಮ್ಮೆ ಅವಕಾಶ ನೀಡಿದಲ್ಲಿ ರೈತರಿಗೆ ಮತ್ತಷ್ಟು ಸೇವೆಯನ್ನು ಪ್ರಾಮಾಣಿಕ ಮಾಡಲಾಗುವುದು. ಈ ಬಾರಿ ರೈತರು ಹೆಚ್ಚು ಮತದಿಂದ ಗೆಲುವು ನೀಡಲಿದ್ದಾರೆಂಬ ಭರವಸೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಟಿ.ನಾಗರಾಜು, ಜಗದೀಶ್, ನೆಲಮಂಗಲ ಯೋಜನಾ ಪ್ರಾಧಿಕಾರ ಸದಸ್ಯ ಪ್ರಕಾಶ್ ಬಾಬು, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ಬೆಂಗಳೂರು ಸಹಕಾರ ಯೂನಿಯನ್ ನಿರ್ದೇಶಕ ಜಗದೀಶ್, ಕಂಬಾಳು ಡೈರಿ ಅಧ್ಯಕ್ಷ ಯೋಗಾನಂದ್, ಮಲ್ಲರಬಾಣವಾಡಿ ಅಧ್ಯಕ್ಷ ಕುಮಾರ್, ಡೈರಿ ಕಾರ್ಯದರ್ಶಿಗಳಾದ ರಾಜಗೋಪಾಲ, ನಾಗರಾಜು, ನರಸಿಂಹಮೂರ್ತಿ, ಹರೀಶ್, ತಟ್ಟೆಕೆರೆ ನಾಗರಾಜು, ಮುಖಂಡ ಭಕ್ತನಪಾಳ್ಯ ಮುನಿರಾಜು, ವೆಂಕಟೇಶ್, ಬಿ.ಟಿ.ರಾಮಚಂದ್ರ, ಗಂಗರಾಜು ಮತ್ತಿತರರು ಉಪಸ್ಥಿತರಿದ್ದರು.

ಪೋಟೋ 11 :ನೆಲಮಂಗಲ ಕ್ಷೇತ್ರದಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಭಾಸ್ಕರ್ ನಾಮಪತ್ರ ಸಲ್ಲಿಸಿದರು.

PREV
Read more Articles on

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ