ಭಟ್ಕಳ: ಪಟ್ಟಣದ ಹಳೇ ಬಸ್ ನಿಲ್ದಾಣದ ಸನಿಹದ ಮೀನು ಮಾರುಕಟ್ಟೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು.
ಇದಕ್ಕುತ್ತರಿಸಿದ ಸಚಿವರು ಸೆ. 1ರಿಂದ ಸಂತೆ ಮಾರುಕಟ್ಟೆ ಸನಿಹದ ಹೊಸ ಮೀನು ಮಾರುಕಟ್ಟೆ ಆರಂಭವಾಗಲಿದ್ದು, ಈ ಮೀನು ಮಾರುಕಟ್ಟೆಯನ್ನು ಅಲ್ಲಿಗೆ ಸ್ಥಳಾಂತರ ಮಾಡುವುದಿಲ್ಲ. ಆದರೆ ಹೊಸ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವವರು ಮಾಡಬಹುದಾಗಿದೆ. ಮೀನು ತುಂಬಿದ ದೊಡ್ಡ ವಾಹನಗಳನ್ನು ಹೊಸ ಮಾರುಕಟ್ಟೆಯ ಬಳಿಯೇ ನಿಲ್ಲಿಸಲಾಗುತ್ತಿದ್ದು, ಅಲ್ಲಿಂದ ಮೀನು ತಂದು ನೀವು ಇಲ್ಲಿ ಮಾರಾಟ ಮಾಡಬಹುದು. ನೀವು ಈಗ ಮಾರಾಟ ಮಾಡುತ್ತಿರುವ ಮೀನು ಮಾರುಕಟ್ಟೆ ತೀರಾ ಹಳೆಯದಾಗಿದ್ದು, ಕಟ್ಟಡ ಶಿಥಿಲವಾಗಿದೆ. ಹೊಸ ಮೀನು ಮಾರುಕಟ್ಟೆ ಮಾಡುವ ಸಂದರ್ಭದಲ್ಲಿ ನಿಮ್ಮನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಬಳಿ ಚರ್ಚಿಸಿಯೇ ಮಾಡಲಾಗುತ್ತದೆ. ಈಗಿನ ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನೀವು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ ಎಂದರು.