ಹಾನಗಲ್ಲ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಶಾಸಕ ಶ್ರೀನಿವಾಸ ಮಾನೆ ಅವರ ೫೨ನೇ ಜನ್ಮದಿನದ ನಿಮಿತ್ತ ಆ. ೬ರಂದು ಹಿಂದು ಮುಸ್ಲಿಂ ಕ್ರೈಸ್ತ ಧರ್ಮಗುರುಗಳಿಗೆ ರಕ್ತ ತುಲಾಭಾರ ಆಯೋಜಿಸುವ ಮೂಲಕ ಇನ್ನೊಂದು ಭಾವ್ಯಕ್ಯತೆಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಹಾನಗಲ್ಲ: ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಶಾಸಕ ಶ್ರೀನಿವಾಸ ಮಾನೆ ಅವರ ೫೨ನೇ ಜನ್ಮದಿನದ ನಿಮಿತ್ತ ಆ. ೬ರಂದು ಹಿಂದು ಮುಸ್ಲಿಂ ಕ್ರೈಸ್ತ ಧರ್ಮಗುರುಗಳಿಗೆ ರಕ್ತ ತುಲಾಭಾರ ಆಯೋಜಿಸುವ ಮೂಲಕ ಇನ್ನೊಂದು ಭಾವ್ಯಕ್ಯತೆಯ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿ ಹಾನಗಲ್ಲ ತಾಲೂಕಿನಲ್ಲಿ ರಾಜಕೀಯವಾಗಿ ನೆಲೆಯೂರಿ, ಎರಡು ಬಾರಿ ಶಾಸಕರಾಗಿ, ಈಗ ಪ್ರತಿ ಗ್ರಾಮದಲ್ಲಿ ಶೈಕ್ಷಣಿಕ, ಸಾಮಾಜಿಕ ಹೊಸ ಸಂಚಲನ ಮೂಡಿಸುತ್ತಿದೆ. ಅವರ ನೇತೃತ್ವದಲ್ಲಿ ತಾಲೂಕಿನ ಅಭಿವೃದ್ಧಿಯಲ್ಲಿಯೂ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಅತ್ಯಂತ ಕಾಳಜಿಯಿಂದ ಕೆಲಸ ಮಾಡಿದ ಶ್ರೀನಿವಾಸ್ ಮಾನೆ, ಆರನೇ ಗ್ಯಾರಂಟಿ ಎಂದೇ ಬಿಂಬಿತವಾಗಿರುವ ಮನೆಗಳ ಹಕ್ಕುಪತ್ರ ವಿತರಣೆಯಲ್ಲಿ ರಾಜ್ಯಕ್ಕೆ ಮಾದರಿಯಾದುದು ಇತಿಹಾಸ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕೈಗೊಂಡಿರುವ ಹಲವು ಕಾರ್ಯಕ್ರಮಗಳು ಅವರನ್ನು ಜನಾನುರಾಗಿ ನಾಯಕರಾಗಿ ಗುರುತಿಸಿವೆ.
ಕ್ಷೇತ್ರದ ಯುವಜನರ ಭವಿಷ್ಯ ರೂಪಿಸುವ ಉದ್ದೇಶದಿಂದ ಆರಂಭಿಸಲಾದ ಪರಿವರ್ತನ ಕಲಿಕಾ ಕೇಂದ್ರ ಕಳೆದ ನಾಲ್ಕೈದು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುವ ವಿದ್ಯಾರ್ಥಿಗಳಿಗೆ ಪರಿಣತ ವಿಷಯ ತಜ್ಞರಿಂದ ಗುಣಮಟ್ಟದ ತರಬೇತಿ ನೀಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಮಾರ್ಗದರ್ಶನ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿರುವುದು ಈ ಕೇಂದ್ರದ ವಿಶೇಷತೆ. ಇದರ ಮೂಲಕ ಅನೇಕ ಯುವಕರು ವಿವಿಧ ಸರ್ಕಾರಿ ಸೇವೆಗಳಿಗೆ ಆಯ್ಕೆಯಾಗುವಲ್ಲಿ ನೆರವಾಗಿದೆ.
ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಸಮೃದ್ಧಿ ಕೇಂದ್ರ ಸ್ಥಾಪಿಸಿ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುತ್ತಿರುವುದು ಮತ್ತೊಂದು ಗಮನಾರ್ಹ ಹೆಜ್ಜೆಯಾಗಿದೆ. ವಿವಿಧ ಖಾಸಗಿ ಕಂಪನಿಗಳನ್ನು ಒಂದೇ ವೇದಿಕೆಗೆ ಕರೆತಂದು ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಪಡೆದಿದೆ.
ಸರ್ಕಾರದ ಅನುದಾನದ ನೆರವೂ ಅಲ್ಲದೆ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಮಾರು ₹೪ ಕೋಟಿ ವೆಚ್ಚದಲ್ಲಿ ೧೩೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲಾ ಕಟ್ಟಡಗಳ ಅಭಿವೃದ್ಧಿ, ಅಗತ್ಯ ಮೂಲಸೌಕರ್ಯ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಕಾರ್ಯಕ್ಕೆ ಈ ಯೋಜನೆ ನೆರವಾಗಿದೆ.
ಶ್ರೀನಿವಾಸ್ ಮಾನೆ ಅವರ ೫೨ನೇ ಹುಟ್ಟುಹಬ್ಬದ ನಿಮಿತ್ತ ಆ. ೬ರಂದು ಹಾನಗಲ್ಲ ತಾಲೂಕಿನ ೬ ಕಡೆಗಳಲ್ಲಿ ರಕ್ತದಾನ ಶಿಬಿರದ ಮೂಲಕ ೭೦೦ ಯುನಿಟ್ ರಕ್ತದಾನ ಪಡೆಯುವ ನಿಟ್ಟಿನಲ್ಲಿ ಶ್ರೀನಿವಾಸ ಮಾನೆ ಅವರ ಆಭಿಮಾನಿಗಳು ಮುಂದಾಗಿದ್ದಾರೆ. ಬೆಳಗಿನಿಂದಲೇ ಹಾನಗಲ್ಲ ಪಟ್ಟಣ, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಆಡೂರು, ಅಕ್ಕಿಆಲೂರು, ತಿಳವಳ್ಳಿ, ಹೀರೂರು ಗ್ರಾಮಗಳಲ್ಲಿ ಆಯಾ ಭಾಗದ ರಕ್ತದಾನಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಶಿಬಿರ ಆಯೋಜಿಸಲಾಗಿದೆ. ಸಂಜೆ ೬ ಗಂಟೆಗೆ ಸದಾಶಿವ ಮಂಗಲ ಭವದಲ್ಲಿ ಭಾವೈಕ್ಯ ತುಲಾಭಾರ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.