ಬಿಎಚ್‌ಇಎಲ್‌ ಕಾರ್ಖಾನೆ ಲಾಭ ಈಗ ₹1,500 ಕೋಟಿ: ಎಚ್ಡಿಕೆ

KannadaprabhaNewsNetwork |  
Published : Nov 07, 2026, 02:00 AM IST
HDK | Kannada Prabha

ಸಾರಾಂಶ

ಕೇಂದ್ರದ ಬೃಹತ್ ಕೈಗಾರಿಕೆ ಸಚಿವನಾಗಿ ನಾನು ಅಧಿಕಾರ ವಹಿಸಿಕೊಂಡಾಗ 200 ಕೋಟಿ ರು. ಇದ್ದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್‌ಇಎಲ್‌) ಕಾರ್ಖಾನೆಯ ಲಾಭವು ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರು. ಮೀರಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರದ ಬೃಹತ್ ಕೈಗಾರಿಕೆ ಸಚಿವನಾಗಿ ನಾನು ಅಧಿಕಾರ ವಹಿಸಿಕೊಂಡಾಗ 200 ಕೋಟಿ ರು. ಇದ್ದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್‌ಇಎಲ್‌) ಕಾರ್ಖಾನೆಯ ಲಾಭವು ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರು. ಮೀರಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬಿಎಚ್‌ಇಎಲ್‌ ಕನ್ನಡ ಹಿತರಕ್ಷಣಾ ಸಮಿತಿ ಶುಕ್ರವಾರ ಬಿಎಚ್‌ಇಎಲ್‌ ಕಾರ್ಖಾನೆಯಲ್ಲಿ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಬೆಳವಣಿಗೆ ಆಶಾದಾಯಕವಾಗಿದೆ. ಈ ಪೈಕಿ ಬಿಹೆಚ್ಇಎಲ್ ಕಾರ್ಖಾನೆಯ ಬೆಳವಣಿಗೆ ಉತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕನ್ನಡಿಗರಿಗೆ ಹೆಚ್ಚಿನ ಅವಕಾಶ:

ರಾಷ್ಟ್ರದ ವ್ಯೂಹಾತ್ಮಕ ಯಂತ್ರೋಪಕರಣ ತಯಾರಿಕಾ ಕಾರ್ಖಾನೆಗಳಲ್ಲಿ ಬಿಎಚ್‌ಇಎಲ್‌ ಒಂದಾಗಿದ್ದು, ಈಗ ಸದೃಢವಾಗಿ ಲಾಭದ ಹಾದಿಯಲಿ ಮುನ್ನಡೆಯುತ್ತಿದೆ. ಕೇಂದ್ರ ಸ್ವಾಮ್ಯದ ಕಾರ್ಖಾನೆಗಳು ಕನ್ನಡ ಭಾಗವಾಗಿ, ಈ ನಾಡಿನ ಪರಂಪರೆಯ ಭಾಗವಾಗ ಕೆಲಸ ಮಾಡುತ್ತಿವೆ. ಬಿಎಚ್‌ಇಎಲ್‌ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಪ್ರಮುಖ ಹುದ್ದೆಗಳಲ್ಲಿಯೂ ಕೆಲಸ ಮಾಡುತ್ತಾ ನೀತಿ ನಿರೂಪಣೆಯಲ್ಲಿ ಕೂಡ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

3000 ರು. ಲಾಭ ಗಳಿಸುವ ಗುರಿ:

ಒಂದು ಹಂತದಲ್ಲಿ ಬಿಎಚ್‌ಇಎಲ್ ಕಾರ್ಖಾನೆ ಕುಸಿತದತ್ತ ಸಾಗುತ್ತಿತ್ತು. ನಂತರ ಅದು ಮತ್ತಷ್ಟು ಕುಸಿತ ಕಾಣದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಯಿತು. ಹೀಗಾಗಿ ಲಾಭದ ಪ್ರಮಾಣವು ವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ರು. ಲಾಭ ಗಳಿಸುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಇದು ನಮ್ಮ ಶ್ರೇಯಸ್ಸು ಎನ್ನುವುದಕ್ಕಿಂತ ಕಾರ್ಖಾನೆಯಲ್ಲಿ ದುಡಿಮೆ ಮಾಡುವ ಕಾರ್ಮಿಕರ ಶ್ರೇಯಸ್ಸು ಎಂದು ಕುಮಾರಸ್ವಾಮಿ ಹೇಳಿದರು. ಈ ಕಾರ್ಖಾನೆಯಲ್ಲಿ 24 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರ ಪ್ರಮಾಣ ದ್ವಿಗುಣ ಆಗಬೇಕು. ಅಂದರೆ, ಕಾರ್ಮಿಕರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದರು.

ಎಚ್‌ಎಂಟಿ ಕೈಗಡಿಯಾರ ಧರಿಸಿ:ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಎಚ್‌ಎಂಟಿ ಕನ್ನಡಿಗ ಸರಣಿಯ ನಾಲ್ಕು ಕೈಗಡಿಯಾರಗಳನ್ನು ಬಿಡುಗಡೆ ಮಾಡಿದ್ದೇವೆ. ಇದಕ್ಕೂ ಮೊದಲು ಕನ್ನಡ ಶ್ರೀಮಂತ ಪರಂಪರೆಯ ಪ್ರತೀಕವಾಗಿರುವ ಗಂಡಭೇರುಂಡದ ಎಚ್‌ಎಂಟಿ ಗಡಿಯಾರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಗಡಿಯಾರಗಳು ಕನ್ನಡಿಗರಿಗೆ ಮನಗೆದ್ದಿವೆ. ಈ ಎಚ್‌ಎಂಟಿ ಕೈಗಡಿಯಾರಗಳನ್ನು ಪ್ರತಿಯೊಬ್ಬರೂ ಧರಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.

ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನ:ಎಚ್‌ಎಂಟಿ ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಕೆಲಸ ಮಾಡುತ್ತಿದ್ದೇವೆ. ಯೋಜನಾ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಶಿಫಾರಸುಗಳನ್ನು ಸ್ವೀಕರಿಸಲಾಗಿದೆ. ಅದಷ್ಟು ಬೇಗ ಈ ಕಾರ್ಖಾನೆಯ ಪುನಶ್ಚೇತನಕ್ಕೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮೀ ದೇಶಮಾನೆ, ಸಾಹಿತಿ ಡಾ.ನಾ. ಸೋಮೇಶ್ವರ, ಡಾ.ರಾಹುಲ್ ದೇವರಾಜ್, ಬಿಎಚ್ಇಎಲ್ ಕನ್ನಡ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಸಾ.ರಾ. ಗೋವಿಂದು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ