ಭೀಮಾ ತೀರದ ತುಳಸಿರಾಮ ಚಾಮರಾಜನಗರ ಜೈಲಿಗೆ

KannadaprabhaNewsNetwork |  
Published : Jul 11, 2026, 01:30 AM IST
ಚಿತ್ರದುರ್ಗ 1  | Kannada Prabha

ಸಾರಾಂಶ

ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರ ಆದೇಶದ ಮೇರೆಗೆ ಭೀಮಾ ತೀರದ ರೌಡಿಶೀಟರ್ ತುಳಸಿರಾಮ ಹರಿಜನ್‌ ಮೇಲೆ ಗೂಂಡಾ ಕಾಯ್ದೆ ತೆರೆದು ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗಿದೆ ಎಂದು ವಿಜಯಪುರ ಎಸ್.ಪಿ. ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರ ಆದೇಶದ ಮೇರೆಗೆ ಭೀಮಾ ತೀರದ ರೌಡಿಶೀಟರ್ ತುಳಸಿರಾಮ ಹರಿಜನ್‌ ಮೇಲೆ ಗೂಂಡಾ ಕಾಯ್ದೆ ತೆರೆದು ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗಿದೆ ಎಂದು ವಿಜಯಪುರ ಎಸ್.ಪಿ. ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾದ ತುಳಸಿರಾಮ ಹರಿಜನ ಪ್ರಸ್ತುತ ವಿಜಯಪುರದ ಗಣೇಶ ನಗರದಲ್ಲಿ ವಾಸವಾಗಿದ್ದಾನೆ. ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ನ್ಯಾಯ ಸಂಹಿತೆ-2023ರ ಅಡಿಯಲ್ಲಿ ವಿವಿಧ ಅಪರಾಧ ಎಸಗಿರುವ ತುಳಸಿರಾಮ ಹರಿಜನ ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಮಾದಕ ದ್ರವ್ಯ ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ 1985 (ಗೂಂಡಾ ಕಾಯ್ದೆ) ಅಡಿಯಲ್ಲಿ ಬಂಧಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಸಕ್ರಿಯನಾಗಿದ್ದ ಹರಿಜನ ತುಳಸಿರಾಮ ವೃತ್ತಿಪರ ಅಪರಾಧಿ, ಸಮಾಜ ದ್ರೋಹಿ ಮತ್ತು ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಇದರಿಂದ ರೌಡಿಶೀಟ್‌ ಓಪನ್‌ ಮಾಡಿ ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ದಿಟ್ಟ ಕ್ರಮ ಕೈಗೊಳ್ಳಲಾಗಿದೆ‌ ಎಂದು ಎಸ್.ಪಿ. ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ
ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಯಾರ ಅನುಮತಿ ಬೇಕಿಲ್ಲ:ಜಿಗಜಿಣಗಿ