ತುಂತುರು ಮಳೆ ನಡುವೆ ಸಂಭ್ರಮದ ಭೀಮೋತ್ಸವ

KannadaprabhaNewsNetwork |  
Published : May 28, 2025, 12:27 AM IST
 ಸೋಮವಾರ | Kannada Prabha

ಸಾರಾಂಶ

ಮಳೆ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಜನರು ಮೆರವಣಿಗೆಗೆ ಬರಲು ಸಾಧ್ಯವಾಗಲಿಲ್ಲವಾದರೂ ನೂರಾರು ಯುವಕರು ಪಡೆ ರಸ್ತೆಯಲ್ಲಿ ಡಿಜೆ ಸೌಂಡಿಗೆ ಹೆಜ್ಜೆ ಹಾಕುತ್ತಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದಲ್ಲಿ ತುಂತುರು ನಡುವೆಯೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಅಂಗವಾಗಿ ಅದ್ಧೂರಿ ಭೀಮೋತ್ಸವ ನಡೆಯಿತು.ಇಲ್ಲಿನ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಟಿ.ನರಸೀಪುರ ನಳಂದ ಬುದ್ಧ ವಿಹಾರದ ಭಂತೆ ಬೋಧಿರತ್ನ ಸಾನಿಧ್ಯದಲ್ಲಿ ಭೀಮೋತ್ಸವಕ್ಕೆ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಚಾಲನೆ ಕೊಟ್ಟರು.

ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಆಚರಣಾ ಸಮಿತಿ ಮುಖ್ಯಸ್ಥ ಡಾ.ನವೀನ್‌ ಮೌರ್ಯ ನೇತೃತ್ವದಲ್ಲಿ ಕೃತಕ ಆನೆ ಮೇಲೆ ಅಂಬೇಡ್ಕರ್‌ ಭಾವಚಿತ್ರ ಹಾಗೂ ಬೆಳ್ಳಿ ರಥದಲ್ಲಿ ಅಂಬೇಡ್ಕರ್‌ ಪ್ರತಿಮೆ ಜೊತೆ ಆಟೋಗಳ ಮೇಲೆ ಅಂಬೇಡ್ಕರ್ ಭಾವಚಿತ್ರ ಹೊತ್ತ ಮೆರವಣಿಗೆ ಪಟ್ಟಣದ ಬೀದಿಗಳಲ್ಲಿ ಸಾಗಿದರು.

ಮಳೆ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಜನರು ಮೆರವಣಿಗೆಗೆ ಬರಲು ಸಾಧ್ಯವಾಗಲಿಲ್ಲವಾದರೂ ನೂರಾರು ಯುವಕರು ಪಡೆ ರಸ್ತೆಯಲ್ಲಿ ಡಿಜೆ ಸೌಂಡಿಗೆ ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆ ಉದ್ಘಾಟನೆ ಸಮಯದಲ್ಲಿ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಾಂಗ್ರೆಸ್‌ ಮುಖಂಡ ಧೀರಜ್‌ ಪ್ರಸಾದ್‌, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್‌ ಮಾಡ್ರಹಳ್ಳಿ, ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಬಿಜೆಪಿ ಮುಖಂಡ ಅಗತಗೌಡನಹಳ್ಳಿ ಬಸವರಾಜು, ಜಿಲ್ಲಾ ಬಿಎಸ್‌ಪಿ ಉಪಾಧ್ಯಕ್ಷ ಬಸವಣ್ಣ ಕಿಲಗೆರೆ ಸೇರಿದಂತೆ ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್‌, ಬೇಗೂರು ಫ್ಯಾಕ್ಸ್‌ ಉಪಾಧ್ಯಕ್ಷ ಸದಾಶಿವಮೂರ್ತಿ ಸೇರಿದಂತೆ ಸಾವಿರಾರು ಮಂದಿ ಇದ್ದರು.

ಅಂಬೇಡ್ಕರ್‌ಗೆ ಗಣೇಶ್‌ ಪ್ರಸಾದ್‌ ನಮನ:

ಭೀಮೋತ್ಸವವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟನೆ ಆಗಮಿಸಬೇಕಿತ್ತಾದರೂ ತಡವಾಗಿ ಬಂದ ಕಾರಣ ಹೆದ್ದಾರಿ ಮಧ್ಯೆ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ತೆರಳಿದರು.

ಸಿಎಸ್‌ಎನ್‌ ಡ್ಯಾನ್ಸ್‌:

ಭೀಮೋತ್ಸವಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಮೆರವಣಿಗೆಯಲ್ಲಿ ಕೆಲ ಕಾಲ ಬಿಜೆಪಿ ಮುಖಂಡ ನವೀನ್‌ ಮೌರ್ಯ, ಎನ್.ಮಲ್ಲೇಶ್‌, ಹೊರೆಯಾಲ ಕೃಷ್ಣ,ವಕೀಲ ಉಮೇಶ್‌ ಹೆಜ್ಜೆ ಹಾಕಿದರು.

ಆರ್ಟಿಫಿಶಿಯಲ್‌ ಆನೆ:

ಅಂಬೇಡ್ಕರ್‌ ಜಯಂತಿ ಅಂಗವಾಗಿ ನಡೆದ ಭೀಮೋತ್ಸವಕ್ಕೆ ಸಾಕಾನೆಯಲ್ಲಿ ಅಂಬೇಡ್ಕರ್‌ ಮೆರವಣಿಗೆ ನಡೆಸಲಾಗುತ್ತದೆ ಎಂದು ಪ್ರಚಾರ ಸಂಘಟಕರು ಮಾಡಿದ್ದರು. ಆದರೆ ಸಾಕಾನೆ ತರಲು ಅನುಮತಿ ಸಿಗಲಿಲ್ಲ. ಆದರೆ ಅದೇ ಮಾದರಿಯಲ್ಲಿ ಆರ್ಟಿಫಿಶಿಯಲ್‌ ಆನೆ ಎಲ್ಲರ ಗಮನ ಸೆಳೆಯಿತು.ಬಿಜೆಪಿ ಮುಖಂಡ ಡಾ.ನವೀನ್‌ ಮೌರ್ಯ ನೇತೃತ್ವದಲ್ಲಿ ನಡೆದ ಜಾತ್ಯಾತೀತ, ಪಕ್ಷಾತೀತ ಹಾಗೂ ಹಲವು ಸಂಘಟನೆಗಳ ಬೆಂಬಲ ಜೊತೆಗೆ ಕಾಂಗ್ರೆಸ್‌, ಬಿಜೆಪಿಗರ ಬೆಂಬಲ ನೀಡಿದ್ದರಿಂದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಪ್ರಮುಖರ ಗೈರು:ಭೀಮೋತ್ಸವ ಉದ್ಘಾಟಿಸಬೇಕಿದ್ದ ಸಂಸದ ಸುನೀಲ್‌ ಬೋಸ್‌, ಮೈಸೂರು ಸಂಸದ ಯದುವೀರ್‌ ಓಡೆಯರ್‌, ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ ಗೈರಾಗಿದ್ದರು.

ಜನರು ಹೈರಾಣ:

ಪಟ್ಟಣದಲ್ಲಿ ನಡೆದ ಭೀಮೋತ್ಸವದ ಹಿನ್ನೆಲೆ ಮೈಸೂರು-ಊಟಿ ಹೆದ್ದಾರಿಯಲ್ಲಿ ಮೆರವಣಿಗೆ ಸಮಯದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜನರು ಗಂಟೆಗಟ್ಟಲೇ ನಿಂತು ನಿಂತು ಸಾಗಬೇಕಾಯಿತು.೨೭ಜಿಪಿಟಿ೨ಗುಂಡ್ಲುಪೇಟೆಯಲ್ಲಿ ಭೀಮೋತ್ಸವದದಲ್ಲಿ ಭಾಗವಹಿಸಿದ್ದರು ಸಾವಿರಾರು ಜನರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ