ಆಸ್ಪತ್ರೆ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

KannadaprabhaNewsNetwork | Published : Jan 28, 2025 12:47 AM

ಸಾರಾಂಶ

ಸುಲಬ್ ಇಂಟರ್‌ನ್ಯಾಷಿನಲ್ ಸಂಸ್ಥೆಯೂ ಹಲವು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ನಿರ್ವಹಣೆಯನ್ನು ಸಹ ಮಾಡುತ್ತಿದ್ದಾರೆ. ಅದೇ ರೀತಿ ಪಟ್ಟಣದಲ್ಲಿ ಶೌಚಾಲಯದವನ್ನು ನಿರ್ಮಿಸಿ ಸಂಸ್ಥೆಯವರೇ 30 ವರ್ಷಗಳ ಕಾಲ ನಿರ್ವಹಣೆ ಮಾಡಲು ಮುಂದಾಗಿರುವುದು ಖುಷಿ ವಿಚಾರ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಲಬ್ ಇಂಟರ್‌ ನ್ಯಾಷಿನಲ್ ಸಂಸ್ಥೆ ಸಿಎಸ್‌ಆರ್ ಫಂಡ್‌ನ 33 ಲಕ್ಷ ರು. ಅನುದಾನದಲ್ಲಿ ನಿರ್ಮಿಸುವ ಸಾರ್ವಜನಿಕ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇದ್ದ ಹಳೇ ಶೌಚಾಲಯವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸುಲಬ್ ಇಂಟರ್‌ನ್ಯಾಷಿನಲ್ ಸಂಸ್ಥೆಯೂ ಹಲವು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ನಿರ್ವಹಣೆಯನ್ನು ಸಹ ಮಾಡುತ್ತಿದ್ದಾರೆ. ಅದೇ ರೀತಿ ಪಟ್ಟಣದಲ್ಲಿ ಶೌಚಾಲಯದವನ್ನು ನಿರ್ಮಿಸಿ ಸಂಸ್ಥೆಯವರೇ 30 ವರ್ಷಗಳ ಕಾಲ ನಿರ್ವಹಣೆ ಮಾಡಲು ಮುಂದಾಗಿರುವುದು ಖುಷಿ ವಿಚಾರ ಎಂದರು.

ಸುಲಬ್ ಇಂಟರ್‌ ನ್ಯಾಷಿನಲ್ ಸಂಸ್ಥೆ ಮುಖ್ಯಸ್ಥ ವಿಶ್ವನಾಥ್‌ ಮಳಿಗೆ ಮಾತನಾಡಿ, ಸಂಸ್ಥೆಯು ಸಿಎಸ್‌ಆರ್ ಅನುದಾನ 33 ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದ್ದೇವೆ. ದೇಶಾದ್ಯಂತ ಸಂಸ್ಥೆಯಲ್ಲಿ ಸುಮಾರು 60 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಸುಮಾರು 20 ಸಾವಿರ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನಿರ್ವಹಣೆ ಮಾಡುತ್ತಿದ್ದೇವೆ ಎಂದರು.

ಈಗಾಗಲೇ 20 ಲಕ್ಷ ಶೌಚಾಲಯಗಳನ್ನು ಶಾಲೆಗಳು, ಹಳ್ಳಿಗಳಲ್ಲಿ ನಿರ್ಮಿಸಿ ನಿರ್ವಹಣೆ ಮಾಡುತ್ತಿದ್ದೇವೆ. ಶೌಚಾಲಯ ನಿರ್ಮಿಸಲು ಸ್ಥಳೀಯ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಅರವಿಂದ್ ಅವರ ಸಹಕಾರ ಕಾರಣವಾಯಿತು ಎಂದರು.ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಅಶೋಕ್, ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಎಲೆಕೆರೆ ಚಂದ್ರು, ಹಾರೋಹಳ್ಳಿ ಅಭಿ, ಎಣ್ಣೆಹೊಳೆಕೊಪ್ಪಲು ಮಂಜು, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಅಂಗಡಿ ಸೋಮಣ್ಣ, ಬಿ.ಟಿ.ಶಿವಣ್ಣ, ಹೆಲ್ತ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ಸುಲಬ್ ಸಂಸ್ಥೆಯ ಎಂಜಿನಿಯರ್ ಅರುಣ್, ನವೀನ್ ಸೇರಿದಂತೆ ಹಲವರು ಇದ್ದರು.

ಪಿಎಲ್‌ಡಿ ಬ್ಯಾಂಕ್‌ಗೆ ಚುನಾವಣೆ ನಿಗದಿ

ಮಳವಳ್ಳಿ:

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ನ ಆಡಳಿತ ಮಂಡಳಿಗೆ ಫೆ.10ರಂದು ಚುನಾವಣೆ ನಿಗದಿಯಾಗಿದೆ. ಜ.27ರಿಂದ ಫೆ.2ರವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.ಪಿಎಲ್ ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಇದರಲ್ಲಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ- 1, ಪರಿಶಿಷ್ಟ ಪಂಗಡ- 1, ಮಹಿಳಾ ಕ್ಷೇತ್ರ- 2. ಹಿಂದುಳಿದ ವರ್ಗ ಎ- 1, ಹಿಂದುಳಿದ ವರ್ಗ ಬಿ-1, ಮೀಸಲು ನಿಗದಿಯಾಗಿದೆ. ಮತದಾನವು ಫೆ.10ರ ಸೋಮವಾರ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಬೆಳಿಗ್ಗೆ 9ಗಂಟೆಯಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ.

ಆಕಾಂಕ್ಷಿತ ಅಭ್ಯರ್ಥಿಗಳು ರಜೆದಿನಗಳನ್ನು ಹೊರತುಪಡಿಸಿ ಜ.27ರಿಂದ ಫೆ.2ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆವರೆಗೆ ಬ್ಯಾಂಕಿನಲ್ಲಿ ನಾಮಪತ್ರ ಸಲ್ಲಿಸಬಹುದು. ಫೆ.3ರಂದು ನಾಮಪತ್ರ ಪರಿಶೀಲಿಸಿ ಅಂದೇ ಕ್ರಮಬದ್ಧ ಅಭ್ಯರ್ಥಿಗಳನ್ನು ಪ್ರಕಟಣೆ ಮಾಡಲಾಗುವುದು ಎಂದರು.

ಫೆ.4ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಅಂದೇ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು. ಫೆ.10ರಂದು ಚುನಾವಣೆ ನಡೆಯಲಿದ್ದು, ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

Share this article