ಕನ್ನಡಪ್ರಭ ವಾರ್ತೆ ಹೊಸಕೋಟೆ
ಸುಮಾರು ಎರಡೂವರೆ ದಶಕಗಳ ದಲಿತ ನಾಯಕರ ಬೇಡಿಕೆಯಾದ ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಪ್ರತಿಮೆ ನಿರ್ಮಾಣಕ್ಕೆ ಚಿತ್ರದುರ್ಗದ ಮಾದಾರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಭೂಮಿ ಪ್ರಜೆ ನೆರವೇರಿಸಲು ಸಾಧ್ಯವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ತಾಲೂಕು ಕಚೇರಿಯ ಆವರಣದಲ್ಲಿ ಬಾಬು ಜಗಜೀವನ್‌ರಾಮ್ ಅವರ ಜನ್ಮ ಜಯಂತಿ ಕಾರ್ಯಕ್ರಮ ಹಾಗೂ ಪುತ್ಥಳಿ ನಿರ್ಮಾಕ್ಕೆ ಭೂಮಿ ಪ್ರಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೃಷಿ ಮಂತ್ರಿಗಳಾಗಿದ್ದಾಗ ಹಸಿರು ಕ್ರಾಂತಿಯನ್ನು ಮಾಡಿ ರೈತರಿಗೆ ವರದಾನವಾಗಿದ್ದರು. ಉನ್ನತ ಹುದ್ದೆ ಉಪರಾಷ್ಟçಪತಿಯಾಗಿ ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಇದೆ ಎಂದ ಅವರು ಇದೇ ಏ. 14ರಂದು ಅದ್ಧೂರಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ರವರ ಜಯಂತಿಯನ್ನು ಇದೇ ತಾಲೂಕು ಕಚೇರಿ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.ಚಿತ್ರದುರ್ಗ ಬಸವಮೂರ್ತಿ ಮಾದರ ಚನ್ನಯ್ಯ ಮಠದ ಶ್ರೀ ಮಾದರ ಚನ್ನಯ್ಯ ಸ್ವಾಮಿಜಿ ಮಾತನಾಡಿ, ಉತ್ತಮ ನಾಯಕರು ಸಮಾಜದಲ್ಲಿ ಹುಟ್ಟಿದರೆ ಏನು ಲಾಭ ಎಂಬುದನ್ನು ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ತೋರಿಸಿಕೊಟಿದ್ದಾರೆ ಎಂದರು.
ಮಾದಾರ ಮಹಸಭಾ ಅಧ್ಯಕ್ಷ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ನಾಳೆಯಿಂದ ಸದಾಶಿವ ಆಯೋಗದ ಗಣತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸರ್ಕಾರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಈ ಗಣತಿ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಉಪಜಾತಿ ಸಮೇತ ಸಂಪೂರ್ಣ ಮಾಹಿತಿ ನೀಡಬೇಕಾಗಿದೆ, ಇದರಿಂದ ಒಳಮೀಸಲಾತಿ ಜಾರಿಗೆ ಸಹಕಾರಿಯಾಗಲಿದೆ. ಎಂದರು.ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ಡಾ.ಸಿ.ಎನ್. ನಾರಾಯಣಸ್ವಾಮಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕ ಡಾ.ಎಚ್.ಎಂ. ಸುಬ್ಬರಾಜ್, ಮುಖಂಡರಾದ ಬಿ.ವಿ. ಬೈರೇಗೌಡ, ಡಾ.ಸಿ. ಜಯರಾಜ್, ಡಿ.ಎಂ. ಮುನಿರಾಜ್, ಶುಭಾಷ್‌ಗೌಡ, ವಿಜಯ್ ಕುಮಾರ್, ಶಿವಾನಂದ್, ಗುಟ್ಟಳ್ಳಿ ನಾಗರಾಜ್, ಕೆಆರ್‌ಬಿ ಶಿವಾನಂದ್, ಭೀಮ್ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ರಾವಣ್ ಹಾಜರಿದ್ದರು.ಫೋಟೋ: 5 ಹೆಚ್‌ಎಸ್‌ಕೆ 1
ಹೊಸಕೋಟೆಯ ತಾಲೂಕು ಕಚೇರಿ ಆವರಣದಲ್ಲಿ ಬಾಬು ಜಗಜೀವನ ರಾಮ್ ಪುತ್ಥಳಿ ನಿರ್ಮಾಣದ ಕಾಮಗಾರಿಗೆ ಚಿತ್ರದುರ್ಗದ ಮಾದಾರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಶರತ್ ಬಚ್ಚೇಗೌಡ ಸೇರಿ ಹಲವು ಮುಖಂಡರು ಚಾಲನೆ ನೀಡಿದರು.