ಸದಾಶಿವನಗರ ಪಾರ್ಕ್‌ ಅಭಿವೃದ್ಧಿಗೆ ಭೂಮಿ ಪೂಜೆ

KannadaprabhaNewsNetwork |  
Published : May 11, 2026, 04:00 AM IST
ಸದಾಶಿವನಗರ ಪಾರ್ಕ್‌ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಯಿತು | Kannada Prabha

ಸಾರಾಂಶ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿ 10.65 ಲಕ್ಷ ರು. ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿ 10.65 ಲಕ್ಷ ರು. ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಈಗಾಗಲೇ ಮೂಡ ವತಿಯಿಂದ ಈ ಹಿಂದೆಯೇ ಪಾರ್ಕ್ ಅಭಿವೃದ್ಧಿಗೊಂಡಿದ್ದು ಪ್ರತಿನಿತ್ಯ ಅನೇಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇನ್ನಷ್ಟು ಮುಂದುವರಿದ ಅಭಿವೃದ್ಧಿ ಕಾರ್ಯ ಅಗತ್ಯವಿರುವ ಬಗ್ಗೆ ಅನೇಕರು ಮನವಿ ಮಾಡಿದಂತೆ ಮೂಡ ಸಭೆಯಲ್ಲಿ ಅದಕ್ಕೆ ಎಲ್ಲರ ಸಹಕಾರದೊಂದಿಗೆ ಅನುಮೋದನೆ ದೊರೆತಿದ್ದು ಸಂತಸ ತಂದಿದೆ ಎಂದು ಹೇಳಿದರು.ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಪ್ರಾಧಿಕಾರದ ಆಯುಕ್ತ ಮೊಹಮ್ಮದ್ ನಜೀರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ರೈ, ರಘುನಾಥ್ ಶೆಟ್ಟಿ, ಸುಕೇಶ್, ಚೇತನ್ ನೆಕ್ಕರೆಮಾರ್, ಸುಮತಿ, ಮಾನಸ ರೈ, ಮೌನೇಶ್ ಚೌಟ, ಯಶೋಧ ಗಟ್ಟಿ, ತನುಜಾ ಎಕ್ಕೂರು, ನೀರಚ್‌ಚಂದ್ರ ಪಾಲ್, ಸುಮನ್‌ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ ಮಂಜೂರು: ಶಾಸಕ ಜೆ.ಟಿ. ಪಾಟೀಲ
ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಶಿವಾನಂದ ಪಾಟೀಲ