ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ನೂತನ ಕಲಾ ಮಂದಿರಕ್ಕೆ ಭೂಮಿಪೂಜೆ

KannadaprabhaNewsNetwork |  
Published : Jan 18, 2026, 03:00 AM IST
ಚಿತ್ರ : 15ಎಂಡಿಕೆ4 :  ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭ ಉದ್ಘಾಟನೆ.  | Kannada Prabha

ಸಾರಾಂಶ

ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೖತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದು, ಹೀಗಾಗಿಯೇ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೖತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದು, ಹೀಗಾಗಿಯೇ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾ ಮಂದಿರಕ್ಕೆ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅನಿಲ್, ವಿದೇಶಗಳಲ್ಲಿ ನೆಲಸಿರುವ ಭಾರತೀಯರು ತಮ್ಮ ದೇಶದ ಸಂಸ್ಕೖತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ವಿದೇಶದ ನೆಲದಲ್ಲಿ ಇರುವವರಿಗೆ ಭಾರತದ ಸಂಸ್ಕೖತಿಯ ಮಹತ್ವದ ಅರಿವಾಗುತ್ತದೆ. ಭಾರತದಲ್ಲಿ ಭಜನೆ, ಹಾಡು, ನೖತ್ಯ, ಯೋಗ, ಧ್ಯಾನಗಳ ಮೂಲಕ ಸಾಂಸ್ಕೖತಿಕ ಕೇಂದ್ರಗಳಾಗಿಯೂ ದೈವಿಕ ಕೇಂದ್ರಗಳು ರೂಪುಗೊಂಡಿವೆ ಎಂದರಲ್ಲದೆ ಮಕ್ಕಳಿಗೆ ಧಾಮಿ೯ಕ ಶಿಕ್ಷಣ ಕಲಿಸುವಲ್ಲಿ ದೇವಾಲಯಗಳ ಕಲಾ ಮಂದಿರಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾಗಿದ್ದ ಕೇಶವಪ್ರಸಾದ್ ಮುಳಿಯ ದೇವಾಲಯದ ಮೂಲಕ ಧಾರ್ಮಿಕ ಶಿಕ್ಷಣದಂಥ ವಿನೂತನ ಕಾರ್‍ಯಕ್ರಮ ಆಯೋಜಿಸಿದ್ದನ್ನು ಸ್ಮರಿಸಿದ ಅವರು, ಇಂಥ ಧರ್ಮಶಿಕ್ಷಣವನ್ನು ಮಕ್ಕಳಿಗೆ ಕಲಿಸುವಲ್ಲಿ ತಾಯದಿಂದರ ಪಾತ್ರವೂ ಮಹತ್ವದ್ದಾಗಿದೆ ಎಂದರು.

ಮೈಸೂರಿನ ಉದ್ಯಮಿ ಚೆರಿಯಮನೆ ನರೇಶ್ ಮಾತನಾಡಿ, ಪ್ರತಿಯೊಂದನ್ನೂ ಸಂಭ್ರಮದಿಂದ ಆಚರಿಸುವ ಮಹತ್ವದ ಗುಣ ಭಾರತೀಯರಲ್ಲಿದೆ. ಹೀಗಾಗಿಯೇ ಸಂಕ್ರಾಂತಿ ಸೇರಿದಂತೆ ಭಾರತದ ಹಬ್ಬಗಳೆಲ್ಲವೂ ಮನೆ ಮಂದಿಯ ಸಂಭ್ರಮವನ್ನು ಒಳಗೊಂಡಿರುತ್ತದೆ. ಸ್ಥಳೀಯರನ್ನು ಒಗ್ಗೂಡಿಸುವ ಗುಣ ಹಬ್ಬಗಳಿಗಿದೆ ಎಂದರು.

ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜೆ. ಯಶೋಧರ ಮಾತನಾಡಿ, ಪ್ರಕೃತ್ತಿ ಸೌಂದರ್‍ಯದ ನಡುವಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 80 ಲಕ್ಷ ರು. ವೆಚ್ಚದಲ್ಲಿ ಕಲಾ ಮಂದಿರ ನಿರ್ಮಾಣವನ್ನು ಒಂದು ವಷ೯ದೊಳಗೆ ಮುಕ್ತಾಯಗೊಳಿಸಲಾಗುತ್ತದೆ. ಈ ಮೂಲಕ ಭಜನೆ, ಯೋಗ, ಪ್ರಾಣಾಯಾಮ, ಬಾಲ ಸಂಸ್ಕಾರ, ಧಾರ್ಮಿಕ ಪ್ರವಚನಗಳಿಗೆ ಈ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.ಶ್ರೀಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೖದ್ದಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಮಲ, ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಆರ್. ರಾಜು ವೇದಿಕೆಯಲ್ಲಿದ್ದರು. ವಿಠಲ ನಿರೂಪಿಸಿದರು. ಮಕರ ಸಂಕ್ರಾಂತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತಿ ಕಡಲಿನಲ್ಲಿ ಮಿಂದೆದ್ದ ಉಡುಪಿ ಕೃಷ್ಣನಗರಿ...
ದ್ವಿಭಾಷಾ ನೀತಿ ತುಳು ಕಲಿಕೆಗೆ ಅಡ್ಡಿಯಾಗದು: ತಾರಾನಾಥ ಗಟ್ಟಿ ಕಾಪಿಕಾಡ್‌