ಸುಂಟಿಕೊಪ್ಪ: ಪೊಂಗಲ್ ಹಬ್ಬ ಸಂಪನ್ನ

KannadaprabhaNewsNetwork |  
Published : Jan 18, 2026, 03:00 AM IST
ನೆರೆದಿದ್ದ  | Kannada Prabha

ಸಾರಾಂಶ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಪೊಂಗಲ್(ಮಕರಸಂಕ್ರಾಂತಿ) ಹಬ್ಬ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಪೊಂಗಲ್(ಮಕರಸಂಕ್ರಾಂತಿ) ಹಬ್ಬ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.ಗುರುವಾರ ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ 26ನೇ ವರ್ಷದ ಆಚರಣೆ ಅಂಗವಾಗಿ ಬೆಳಗ್ಗೆ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ಮಹಿಳೆಯರು, ಯುವತಿಯರು ಪೂರ್ಣಕುಂಭ ಕಳಸವನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇವಾಲಯದ ಟ್ರಸ್ಟಿ ಸಮಿತಿ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್ ಪೂರ್ಣಕುಂಭ ಕಳಸವನ್ನು ಹೊತ್ತು ಕೊಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮದುರಮ್ಮ ಬಡಾವಣೆಯ ವೃಕ್ಷೋದ್ಭವ ದೇವಾಲಯದಿಂದ ನಾದಸ್ವರದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಅಲಂಕೃತ ಭವ್ಯ ಮಂಟಪದಲ್ಲಿ ಇರಿಸಿ ಮುಖ್ಯ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿ ನಂತರ ಶ್ರೀ ಚಾಮುಂಡೇಶ್ವರಿ ಶ್ರೀ ಮುತ್ತಪ್ಪದೇವಾಲಯದಲ್ಲಿ ಕಳಸಗಳನ್ನಿಟ್ಟು ಪೂಜೆ ನಡೆಸಿ ದೇವಿಗೆ ವಿಶೇಷ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿದರು. ಭಕ್ತರು ದೇವಾಲಯದ ಆವರಣದಲ್ಲಿ ಪೊಂಗಲ್‌ಮಾಡಿ ಹಬ್ಬವನ್ನು ಸಂತೋಷ ಸಡಗರ ಸಂಭ್ರಮದಿಂದ ಆಚರಿಸಿದರು.ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ಸಮಿತಿಯ ಅಯ್ಯಪ್ಪ ನೇತೃತ್ವದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಸದಸ್ಯರಾದ ಸುರೇಶ ಎಸ್, ಸುಂದರೇಶ ಎಸ್, ರಾಜಾ ಎಂ., ಗಣೇಶ ಎಂ., ರಾಜ, ಜಗದೀಶ, ವೆಂಕಟೇಶ, ಗಣೇಶ, ವಿಘ್ನೇಶ್ ನಿಖಿಲ್, ಏಳುಮಲೈ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ