ಓವರ್ ಟ್ಯಾಂಕ್ ನಿರ್ಮಿಸಲು ನಗರಸಭೆ ಅಧ್ಯಕ್ಷರಿಂದ ಭೂಮಿ ಪೂಜೆ

KannadaprabhaNewsNetwork |  
Published : Nov 07, 2024, 11:57 PM IST
7ಎಚ್ಎಸ್ಎನ್12 :  | Kannada Prabha

ಸಾರಾಂಶ

ವಿಜಯನಗರ ಬಡಾವಣೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ೪,೭೫,೦೦೦ ಲೀಟರ್‌ ಸಾಮರ್ಥ್ಯದ ಸಂಗ್ರಹದ ಓವರ್‌ ರೆಡ್‌ಟ್ಯಾಂಕನ್ನು ನಿರ್ಮಿಸಲು ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಇನ್ನು ಒಂದು ವರ್ಷದೊಳಗೆ ನದೀ ನೀರನ್ನು ಈ ಬಡಾವಣೆಗೆ ನೀಡಲಾಗುವುದು ಎಂದರಲ್ಲದೆ ಈ ಯೋಜನೆ ಅನುಷ್ಠಾನ ಮಾಡುವ ಕಂಪನಿಯವರು ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕೆಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಿಜಯನಗರ ಬಡಾವಣೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ೪,೭೫,೦೦೦ ಲೀಟರ್‌ ಸಾಮರ್ಥ್ಯದ ಸಂಗ್ರಹದ ಓವರ್‌ ರೆಡ್‌ಟ್ಯಾಂಕನ್ನು ನಿರ್ಮಿಸಲು ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ವಿಜಯನಗರ ಬಡಾವಣೆ ಪ್ರಾರಂಭದಿಂದಲೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇತ್ತು, ಇಲ್ಲಿಯ ನಿವಾಸಿಗಳಿಗೆ ಪ್ರಾಧಿಕಾರವು ಕೊಳವೆ ಬಾವಿಗಳಿಂದ ಕುಡಿಯಲು ನೀರನ್ನು ಒದಗಿಸಲಾಗುತ್ತಿತ್ತು. ಇತ್ತೀಚೆಗೆ ಈ ಬಡಾವಣೆ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿಯ ಮೂಲಭೂತ ಸೌಲಭ್ಯಗಳನ್ನು ಅಂತ ಹಂತವಾಗಿ ಬಗೆಹರಿಸಲಾಗುವುದು ಎಂದರು. ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮತ್ತು ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರನ್ನು ಇನ್ನು ಮುಂದೆ ಈ ಯೋಜನೆ ಮೂಲಕ ಇನ್ನು ಒಂದು ವರ್ಷದೊಳಗೆ ನದೀ ನೀರನ್ನು ಈ ಬಡಾವಣೆಗೆ ನೀಡಲಾಗುವುದು ಎಂದರಲ್ಲದೆ ಈ ಯೋಜನೆ ಅನುಷ್ಠಾನ ಮಾಡುವ ಕಂಪನಿಯವರು ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಎಚ್. ನಾರಾಯಣಗೌಡ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿ ಮೊಗಣ್ಣಗೌಡ ಸಂಘದ ನಿರ್ದೇಶಕರುಗಳಾದ ಬ್ಯಾಟಾಚಾರ್‌, ಚಂದ್ರೇಗೌಡ, ಅನಂತರಾಮು, ನಾಗರಾಜು, ಸೋಮಣ್ಣ ತಾಳೂರು, ರವಿಕುಮಾರ್‌, ತಿಮ್ಮೇಗೌಡ, ನಟರಾಜ್, ರಾಜಪ್ಪ, ತಿರುಮಲಯ್ಯ, ಬೆಟ್ಟೇಗೌಡ, ಸುರೇಶ್ ಜಿ, ಮರಿಸ್ವಾಮಿ, ದತ್ತಾತ್ರಿ ಕುಮಾರ್‌, ಶ್ರೀಮತಿ ಶ್ರೀದೇವಿ, ಶ್ರೀಮತಿ ವೀಣಾ, ಅರ್ಚಕರಾದ ಗಣೇಶ್, ಬಿಎಸ್‌ಆರ್‌ ಕಂಪನಿ ವಿನೋದ್ ನಿವಾಸಿಗಳಾದ ಉದ್ಯಮಿ ದೇವರಾಜ್ ವಿಜಯ ಕುಮಾರ್, ಪ್ರಭು, ಸಂಜಯ್ ಗುರುರಾಜ್, ರಂಗರಾಜು, ಸುಬ್ರಹ್ಮಣ್ಯ, ನಂಜೇಗೌಡ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು