‘ರೋಹನ್‌ ಮಿರಾಜ್‌’ ನೂತನ ವಸತಿ ಸಂಕೀರ್ಣಕ್ಕೆ ಭೂಮಿಪೂಜೆ

KannadaprabhaNewsNetwork | Published : Apr 6, 2025 1:49 AM

ಸಾರಾಂಶ

ಪ್ರಸಿದ್ಧ ನಿರ್ಮಾಣ ಸಂಸ್ಥೆ ರೋಹನ್‌ ಕಾರ್ಪೊರೇಶನ್‌ ಮಂಗಳೂರು ಹೊರವಲಯದ ಬೈತುರ್ಲಿಯಲ್ಲಿ ನಿರ್ಮಿಸುತ್ತಿರುವ ನೂತನ ವಸತಿ ಸಂಕೀರ್ಣ ‘ರೋಹನ್‌ ಮಿರಾಜ್‌’ಗೆ ಶನಿವಾರ ಭೂಮಿಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಹನ್‌ ಅವರಲ್ಲಿ ಇರುವ ಧೈರ್ಯವೇ ಹೊಸ ಯೋಜನೆಗಳಿಗೆ ಬುನಾದಿಯಾಗಿದ್ದು, ಮತ್ತಷ್ಟು ಗುಣಮಟ್ಟದ ಅತ್ಯುತ್ತಮ ಯೋಜನೆಗಳು ಅವರ ಮೂಲಕ ಪ್ರಾಪ್ತಿಯಾಗಲಿ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಆಶಿಸಿದರು.

ಪ್ರಸಿದ್ಧ ನಿರ್ಮಾಣ ಸಂಸ್ಥೆ ರೋಹನ್‌ ಕಾರ್ಪೊರೇಶನ್‌ ಮಂಗಳೂರು ಹೊರವಲಯದ ಬೈತುರ್ಲಿಯಲ್ಲಿ ನಿರ್ಮಿಸುತ್ತಿರುವ ನೂತನ ವಸತಿ ಸಂಕೀರ್ಣ ‘ರೋಹನ್‌ ಮಿರಾಜ್‌’ಗೆ ಶನಿವಾರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ರೋಹನ್‌ ಮೊಂತೆರೋ ನಿರ್ಮಿಸುವ ಪ್ರತಿಯೊಂದು ಯೋಜನೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಕಡಿಮೆ ಲಾಭವಿಟ್ಟುಕೊಂಡು ಗುಣಮಟ್ಟದ ಮನೆಯನ್ನು ಗ್ರಾಹಕರಿಗೆ ನೀಡುತ್ತಾರೆ. ಗ್ರಾಹಕರು ರೋಹನ್‌ ಕಾರ್ಪೊರೇಷನ್‌ನ್ನು ನೆಚ್ಚಿಕೊಂಡಿದ್ದಾರೆ ಎಂದರು.

ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಕುಲಶೇಖರ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಕ್ಲಿಫರ್ಡ್‌ ಫರ್ನಾಂಡಿಸ್‌ ಮಾತನಾಡಿ, ಸಮಾಜಮುಖಿ ಚಿಂತನೆಯೊಂದಿಗೆ ಜನರ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕ ವ್ಯವಹಾರದ ಕಾರಣ ಅವರ ಮೇಲೆ ದೇವರ ಆಶೀರ್ವಾದವಿದೆ. ನೂತನ ಕಟ್ಟಡಗಳಿಗೆ ದೇವರ ಆಶೀರ್ವಾದ ಸಾದಾ ಇರಲಿ ಎಂದ ಅವರು, ಯೋಜನೆಯು ನಿರ್ವಿಘ್ನವಾಗಿ ಪೂರ್ಣಗೊಳ್ಳಲಿ. ಅತ್ಯುತ್ತಮ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದರು.ರೋಹನ್‌ ಕಾರ್ಪೊರೇಷನ್‌ನ ನಿರ್ದೇಶಕ ಡಿಯೋನ್‌ ಮೊಂತೇರೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪೂಜಾರಿ, ಮಾಜಿ ಮೇಯರ್‌ ಭಾಸ್ಕರ ಮೊಯ್ಲಿ, ಕ್ರೆಡೈ ಅಧ್ಯಕ್ಷ ವಿನೋದ್‌ ಪಿಂಟೊ, ಪಾಲಿಕೆಯ ಮಾಜಿ ಸದಸ್ಯ ಲ್ಯಾನ್ಸಿ ಪಿಂಟೊ, ನವೀನ್‌ ಡಿ’ಸೋಜಾ, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್‌ ಮತ್ತಿತರರಿದ್ದರು. ಬಾಕ್ಸ್‌----ಅಧುನಿಕ ಸೌಲಭ್ಯದ 50 ಅಪಾರ್ಟ್‌ಮೆಂಟ್‌ಗಳುಡಾ. ರೋಹನ್‌ ಮೊಂತೇರೊ ಪ್ರಾಸ್ತಾವಿಕ ಮಾತನಾಡಿ, ‘ಮಿರಾಜ್‌’ ವಸತಿ ಸಮುಚ್ಛಯ 10 ಅಂತಸ್ತಿನಿಂದ ಕೂಡಿದೆ. 2 ಬಿಎಚ್‌ಕೆಯ 50 ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. 1,060 ರಿಂದ 1,080 ಚದರ ಅಡಿ ವಿಸ್ತೀರ್ಣದ ಮನೆಗಳಲ್ಲಿ ಅತ್ಯಾಧುನಿಕ ಸವಲತ್ತುಗಳು ಹೊಂದಿವೆ. ಪ್ರತೀ ಘಟಕವು ವಿಶಾಲ ಸ್ಥಳಾವಕಾಶ ಹೊಂದಿದೆ. ಸಮುಚ್ಛಯದಲ್ಲಿ ಸ್ವಯಂಚಾಲಿತ ಲಿಫ್ಟ್‌ಗಳು, ಪವರ್‌ ಬ್ಲಾಕಪ್‌, ವಿಟ್ರಿಫೈಡ್‌ ಟೈಲ್‌ ಫ್ಲೋರಿಂಗ್‌ ಮತ್ತು ಸುರಕ್ಷತೆಗಾಗಿ ಸರ್ವೆಲೆನ್ಸ್‌ ಕೆಮರಾಗಳು ಸೇರಿದಂತೆ ಹಲವು ಸೌಕರ್ಯಗಳನ್ನು ಹೊಂದಿದೆ ಎಂದರು.ಆಕರ್ಷಕ ದರದಲ್ಲಿ ಮನೆಗಳು ಲಭ್ಯ:ರೋಹನ್‌ ಕಾರ್ಪೊರೇಶನ್‌ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರು ಗಳಿಸಿದೆ. ಕಂಪೆನಿಯು ಅನೇಕ ರೆಸಿಡೆನ್ಸಿಯಲ್‌, ಕಮರ್ಶಿಯಲ್‌ ಮತ್ತು ಲೇಔಟ್‌ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ರೋಹನ್‌ ಮಿರಾಜ್‌ ಯೋಜನೆಯು ಕುಲಶೇಖರ ಬೈತುರ್ಲಿ ಮುಖ್ಯರಸ್ತೆಯ ರೋಹನ್‌ ಎಸ್ಟೇಟ್‌ ಬಡಾವಣೆಯ ಮುಖ್ಯದ್ವಾರದಲ್ಲಿ ತಲೆ ಎತ್ತಲಿದೆ. ಹೆದ್ದಾರಿಗೆ ಸಮೀಪವಾಗಿ ಈ ಯೋಜನೆ ಇದೆ. ಇಲ್ಲಿ ಆಕರ್ಷಕ ಕಂತುಗಳಲ್ಲಿ ಮನೆಗಳು ದೊರೆಯಲಿವೆ. ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್‌ ಕಾರ್ಪೊರೇಶನ್‌, ರೋಹನ್‌ ಸಿಟಿ, ಬಿಜೈ, ಮಂಗಳೂರು-575004 ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

Share this article