ಸಾರ್ವಜನಿಕ ರಸ್ತೆಯನ್ನೇ ತನ್ನದೆಂದು ಅಗೆದ ಭೂಪ!

KannadaprabhaNewsNetwork |  
Published : Mar 03, 2024, 01:31 AM IST
2ಕೆಆರ್ ಎಂಎನ್ 4.ಜೆಪಿಜಿಬಿಡದಿ ಹೋಬಳಿ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗೆದಿರುವುದನ್ನು ವಿರೋಧಿಸುತ್ತಿರುವ ಸ್ಥಳೀಯರು. | Kannada Prabha

ಸಾರಾಂಶ

ರಾಮನಗರ: ಸಾರ್ವಜನಿಕ ರಸ್ತೆಯೇ ತನಗೆ ಸೇರಿದ್ದೆಂದು ವ್ಯಕ್ತಿಯೊಬ್ಬ ಜೆಸಿಬಿ ಯಂತ್ರದಿಂದ ಅಗೆದು ಮುಚ್ಚಿಲೆತ್ನಿಸಿದ ಘಟನೆಯೊಂದು ಬಿಡದಿ ಹೋಬಳಿಯ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿ ಬಳಿ ಶನಿವಾರ ಸಂಜೆ ನಡೆದಿದೆ.

ರಾಮನಗರ: ಸಾರ್ವಜನಿಕ ರಸ್ತೆಯೇ ತನಗೆ ಸೇರಿದ್ದೆಂದು ವ್ಯಕ್ತಿಯೊಬ್ಬ ಜೆಸಿಬಿ ಯಂತ್ರದಿಂದ ಅಗೆದು ಮುಚ್ಚಿಲೆತ್ನಿಸಿದ ಘಟನೆಯೊಂದು ಬಿಡದಿ ಹೋಬಳಿಯ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿ ಬಳಿ ಶನಿವಾರ ಸಂಜೆ ನಡೆದಿದೆ.

ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಪ್ರವೇಶ ದ್ವಾರದ ಮುಂಭಾಗವಿರುವ ಸೆರ್ವ ನಂ.107/1 ರ ಸಾರ್ವಜನಿಕ ರಸ್ತೆಯನ್ನು ಜಡೇನಹಳ್ಳಿ ಗ್ರಾಮದ ಹೋರಿ ಚಿಕ್ಕಣ್ಣ ಎಂಬಾತ ಜೆಸಿಬಿ ಯಂತ್ರದಿಂದ ಅಗೆದು ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದ್ದಾನೆ.

ತಮ್ಮ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯನ್ನು ದಿಢೀರ್ ಎಂದು ಬಂದ್ ಮಾಡಲು ನಿಂತಾಗ ಆತಂಕಕ್ಕೊಳಗಾದ ಗೌರಿಪುರದ ನಿವಾಸಿಗಳು ಪ್ರಶ್ನೆ ಮಾಡಿದ್ದಾರೆ.

ಸದರಿ ರಸ್ತೆಗೆ ನನ್ನ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಅವರನ್ನು ಬೆದರಿಸಿ ಚಿಕ್ಕಣ್ಣ, ಜೆಸಿಬಿ ಯಂತ್ರದಿಂದ ರಸ್ತೆ ಬಗೆಯಲಾರಂಭಿಸಿದ್ದಾನೆ. ತಕ್ಷಣ ನಿವಾಸಿಗಳು ಸ್ಥಳೀಯ ಜನಪ್ರತಿನಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಕಾರಿಗಳು ಸ್ಥಳಕ್ಕೆ ಧಾವಿಸಿ ರಸ್ತೆ ಅಗೆಯುವುದನ್ನು ನಿಲ್ಲಿಸಿದ್ದಾರೆ.

ಬಿಡದಿ ಹೋಬಳಿ ಉಪ ತಹಸೀಲ್ದಾರ್ ಮಲ್ಲೇಶ್, ರಾಜಸ್ವನಿರೀಕ್ಷಕ ಪ್ರಕಾಶ್ ನೇತೃತ್ವದ ಅಕಾರಿಗಳು ತಂಡ ಘಟಕಾ ಸ್ಥಳಕ್ಕೆ ಆಗಮಿಸಿ ದಾಖಲೆ ಪರಿಶೀಲಿಸಿದಾಗ ಸರ್ಕಾರಿ ನಕಾಶೆ ರಸ್ತೆ ಎಂಬುದು ಖಾತರಿಯಾಗಿದೆ. ತಕ್ಷಣವೇ ಸರ್ವೆ ಇಲಾಖೆ ಅಧಿಕಾರಿ ಪ್ರಭಾಕರ್ ಅವರನ್ನು ಕರೆಯಿಸಿ ಸರ್ವೆ ಮಾಡಿಸಿದಾಗ ಸದರಿ ರಸ್ತೆಗೆ ಸೇರಿದ ಜಾಗ ಹೋರಿ ಚಿಕ್ಕಣ್ಣರವರಿಗೆ ಸೇರಿದ್ದಲ್ಲವೆಂದು ದೃಢಪಟ್ಟಿರುತ್ತದೆ. ಇದರಿಂದ ಆತಂಕದಲ್ಲಿದ್ದ ಹಕ್ಕಿಪಿಕ್ಕಿ ಕಾಲೋನಿ ನಿವಾಸಿಗಳು ನಿಟ್ಟುಸಿರು ಬಿಟ್ಟರು.

ಸಾರ್ವಜನಿಕ ರಸ್ತೆಯನ್ನು ಏಕಾಏಕಿ ಕಿತ್ತುಹಾಕಿದ ಕಾರಣಕ್ಕೆ ಜೆಸಿಬಿ ಯಂತ್ರವನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ರಸ್ತೆಯನ್ನು ಬಗೆದು ಹಾಳು ಮಾಡಿರುವ ಆರೋಪಿಗಳ ವಿರುದ್ಧ ಕೇಸ್ ದಾಖಲಿಸುವಂತೆ ಉಪ ತಹಸೀಲ್ದಾರ್ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸರು ಚಿಕ್ಕಣ್ಣ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಕೋಟ್ .............

ನೂರಾರು ವರ್ಷಗಳಿಂದ ಬಳಕೆಯಲ್ಲಿರುವ ಸಾರ್ವಜನಿಕ ರಸ್ತೆಯನ್ನು ತನ್ನ ಸ್ವತ್ತೆಂದು ಅಗೆದ ಸದರಿ ವ್ಯಕ್ತಿ ಈ ಹಿಂದೆಯೂ ಒಮ್ಮೆ ಬಿಡದಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಅಗೆದ ಆರೋಪವಿದೆ. ಅಕಾರಿಗಳು ಆ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

-ಗಾಣಕಲ್ ನಟರಾಜು, ಮಾಜಿ ಅಧ್ಯಕ್ಷರು, ತಾಪಂ, ರಾಮನಗರ

2ಕೆಆರ್ ಎಂಎನ್ 4.ಜೆಪಿಜಿ

ಬಿಡದಿ ಹೋಬಳಿ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗೆದಿರುವುದನ್ನು ವಿರೋಧಿಸುತ್ತಿರುವ ಸ್ಥಳೀಯರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ