ಭೈರಪ್ಪರದ್ದು ನಿಷ್ಪಕ್ಷಪಾತ ನೋಟ, ಸತ್ಯಕ್ಕೆ ಬದ್ಧತೆ: ವಿ.ಸಿ.ಉಮಾಶಂಕರ

KannadaprabhaNewsNetwork |  
Published : Sep 29, 2025, 01:03 AM IST
28ಕೆಎಂಎನ್ ಡಿ20 | Kannada Prabha

ಸಾರಾಂಶ

ಭೈರಪ್ಪನವರು ತಮ್ಮ ಜೀವನವನ್ನು ಸಂಪೂರ್ಣ ಸಾಹಿತ್ಯ ಅಭ್ಯಾಸ ಅಧ್ಯಯನ ಬರವಣಿಗೆಗೆ ಅರ್ಪಿಸಿಕೊಂಡವರು. ಗ್ರಾ ಮೀಣ ಹಿನ್ನೆಲೆಯಿಂದ ಬಂದ ಭೈರಪ್ಪ ಅವರು ಶ್ರದ್ದೆ, ಪರಿಶ್ರಮ ಮತ್ತು ಅಧ್ಯಯನಶೀಲತೆ ಬಲದಿಂದಲೆ ಕನ್ನಡದ ಅತ್ಯಂತ ಪ್ರಭಾವಿ ಲೇಖಕರಾಗಿ ಹೊರಹೊಮ್ಮಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ನಿಷ್ಪಕ್ಷಪಾತ ನೋಟ ಮತ್ತು ಸತ್ಯಕ್ಕೆ ಬದ್ದತೆ ಭೈರಪ್ಪನವರ ಸಾಹಿತ್ಯದ ಶಕ್ತಿ. ಅದಕ್ಕಾಗಿ ಅವರು ಜನಪ್ರಿಯತೆಯ ಒತ್ತಡ, ರಾಜಕೀಯ ಸವಾಲುಗಳ ನಡುವೆಯು ತಮ್ಮದೆ ದಿಟ್ಟ ಧ್ವನಿ ಮೂಲಕ ಸಾಹಿತ್ಯ ಲೋಕದಲ್ಲಿ ಶಾಶ್ವತ ಛಾಪು ಮೂಡಿಸಿದರು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೊಗದಲ್ಲಿ ನಡೆದ ಎಸ್.ಎಲ್.ಭೈರಪ್ಪರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಭೈರಪ್ಪನವರು ತಮ್ಮ ಜೀವನವನ್ನು ಸಂಪೂರ್ಣ ಸಾಹಿತ್ಯ ಅಭ್ಯಾಸ ಅಧ್ಯಯನ ಬರವಣಿಗೆಗೆ ಅರ್ಪಿಸಿಕೊಂಡವರು. ಗ್ರಾ ಮೀಣ ಹಿನ್ನೆಲೆಯಿಂದ ಬಂದ ಭೈರಪ್ಪ ಅವರು ಶ್ರದ್ದೆ, ಪರಿಶ್ರಮ ಮತ್ತು ಅಧ್ಯಯನಶೀಲತೆ ಬಲದಿಂದಲೆ ಕನ್ನಡದ ಅತ್ಯಂತ ಪ್ರಭಾವಿ ಲೇಖಕರಾಗಿ ಹೊರಹೊಮ್ಮಿದರು ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿ, ಭೈರಪ್ಪರ ಕೃತಿಗಳು ಕಾಲವನ್ನು ಮೀರಿ ಜೀವಂತವಾಗಿವೆ ಎಂದು ಗುಣಗಾನ ಮಾಡಿದರು. ಇವರ ನಿಧನದಿಂದ ಕನ್ನಡ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಉಪಾಧ್ಯಕ್ಷ ಯರಗನಹಳ್ಳಿ ಮಹಾಲಿಂಗು, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಗ್ರಾಪಂ ಸದಸ್ಯರಾದ ವಿ.ಜೆ.ಸುನಿಲ್ ಕುಮಾರ್, ವಿ.ಎಚ್.ಶಿವಲಿಂಗಯ್ಯ, ಬ್ಯಾಂಕ್ ಚಿಕ್ಕಣ್ಣ, ತುಂಬಕೆರೆ ಸಿದ್ದರಾಮ, ಹೂತಗೆರೆ ಆನಂದ, ಎಂ.ವೀರಪ್ಪ, ಗುಂಡ ಮಹೇಶ್, ಪೂಜಾರಪ್ಪ, ಸೋಂಪುರ ಕುಮಾರ್, ನಿಂಗೇಗೌಡ, ಚಂದ್ರು ಮುಂತಾದವರು ಹಾಜರಿದ್ದರು.

ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ: ಕರೀಗೌಡರಿಗೆ ಸನ್ಮಾನ

ಹಲಗೂರು:

ಹೋಬಳಿ ಮಹಾಶಕ್ತಿ ಕೇಂದ್ರದಿಂದ ಭಿಕ್ಷು ಮಠದ ಆವರಣದಲ್ಲಿ ದೀನ್ ದಯಾಳ್ ಉಪಾಧ್ಯಯ ಜನ್ಮ ದಿನವನ್ನು ಆಚರಿಸಲಾಯಿತು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ತಾನೂ ಬೆಳೆಯುವ ಜೊತೆಗೆ ಇತರೆ ಪ್ರಮುಖ ನಾಯಕರನ್ನು ಬೆಳೆಸುವ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಸರಳ ಜೀವಿಯಾಗಿದ್ದರು‌. ದೀನರ ಏಳಿಗೆಗಾಗಿ ತನ್ನ ಸರ್ವಸ್ವವನ್ನೂ ಮುಡುಪಾಗಿಟ್ಟ ಮಹಾನ್ ನಾಯಕ ಎಂದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಬಿ.ರವಿ (ಮೋದಿ ರವಿ) ಮಾತನಾಡಿ, ಬಿಜೆಪಿ ವತಿಯಿಂದ ರಾಜ್ಯಾದ್ಯಂತ ನಡೆಸುತ್ತಿರುವ ‘ಸೇವಾ ಪಾಕ್ಷಿಕ’ ಪ್ರಯುಕ್ತ ಹಲವು ಸಾಮಾಜಿಕ ಸೇವಾ ಕಾರ್ಯ ಮಾಡಲಾಗುತ್ತಿದೆ ಎಂದರು.

ಇದೇ ವೇಳೆ ಕೊನ್ನಾಪುರ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತ ಕರೀಗೌಡರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಂಯೋಜಕ ಬಿ.ಎಂ.ಕೃಷ್ಣೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್.ಕೃಷ್ಣ, ಉಪಾಧ್ಯಕ್ಷ ನಾಗೇಗೌಡ, ಹಲಗೂರು ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಬಿ.ರವಿ (ಮೋದಿ ರವಿ), ರೈತ ಮೋರ್ಚಾ ಅಧ್ಯಕ್ಷ ಶಶಿಕುಮಾರ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಯ್ಯ, ಮುಖಂಡರಾದ ಜಯರಾಮು, ಈರೇಶ್, ಗಂಗಾಧರ್, ಸದಾಶಿವ, ಜಗದೀಶ್ ಬಾಲು ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ