ಕನ್ನಡಪ್ರಭ ವಾರ್ತೆ ಬೀದರ್
ಈ ಶ್ವಾನ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ದಿಲೀಪ ಬದೋಲೆ ಮುಖ್ಯ ಅತಿಥಿಯಾಗಿ ಭಾಗವಸಿದ್ದರು.
ಬೀದರ್ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ ಶ್ವಾನ ಮಾಲೀಕರು ವಿವಿಧ ತಳಿಗಳ ಅಂದರೆ 19 ತಳಿಯ ಶ್ವಾನಗಳು ಸೇರಿದಂತೆ ಒಟ್ಟಾರೆ 97 ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದವು. ತಳಿವಾರು ಮೊದಲ ಮತ್ತು ದ್ವಿತೀಯ ಬಹುಮಾನ ಹಾಗೂ ಉಳಿದ ಎಲ್ಲಾ ಶ್ವಾನಗಳ ಮಾಲೀಕರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್‌ನಿಂದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಧ್ಯಾಪಕರು ನಿರ್ಣಾಯಕರಾಗಿ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ತಳಿವಾರು ಮೊದಲ ಬಹುಮಾನ ಪಡೆದ ಶ್ವಾನಗಳಲ್ಲಿ ಮತ್ತೆ ಆಯ್ಕೆ ಮಾಡಿ ಚಾಂಪಿಯನ್ ಬಹುಮಾನವನ್ನು ಮೊದಲ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನಾಗಿ ನೀಡಿ ಸತ್ಕರಿಸಲಾಯಿತು. ಪೋಲೀಸ್ ಇಲಾಖೆ ಶ್ವಾನ ತಳಿಗೆ ವಿಶೇಷ ಬಹುಮಾನವನ್ನು ನೀಡಲಾಯಿತು.