SIR ವೇಳೆ ಮೃತಮಟ್ಟ ಅಧಿಕಾರಿ ಭುವನಾಗೆ ₹1.3 ಕೋಟಿ ಪರಿಹಾರ

Published : Jul 06, 2026, 12:52 PM IST
Bhuvana

ಸಾರಾಂಶ

ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಗೂಳೂರು ಗ್ರಾಪಂ ವಿಎಲ್‌ಒ ಭುವನಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ವಿಮೆ ಮೊತ್ತ ₹1 ಕೋಟಿ ಹಾಗೂ ಚುನಾವಣಾ ಆಯೋಗದಿಂದ ₹30 ಲಕ್ಷ ಸೇರಿ ಒಟ್ಟು ₹1 ಕೋಟಿ 30 ಲಕ್ಷ ನೆರವು

 ತುಮಕೂರು:  ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಗೂಳೂರು ಗ್ರಾಪಂ ವಿಎಲ್‌ಒ ಭುವನಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ವಿಮೆ ಮೊತ್ತ ₹1 ಕೋಟಿ ಹಾಗೂ ಚುನಾವಣಾ ಆಯೋಗದಿಂದ ₹30 ಲಕ್ಷ ಸೇರಿ ಒಟ್ಟು ₹1 ಕೋಟಿ 30 ಲಕ್ಷ ನೆರವು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಿಂದ ಭುವನಾ ಸಾವನ್ನಪ್ಪಿದ್ದಕ್ಕೆ ಕೆಲಸದ ಒತ್ತಡವೇ ಕಾರಣ ಎಂದು ದೂರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಂದಾಯ ನೌಕರರ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿಸಿಎಂ ಅವರ ಭರವಸೆ ಮೇರೆಗೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

ಇದೊಂದು ದುರಾದೃಷ್ಟಕರ ಘಟನೆ.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್‌, ಇದೊಂದು ದುರಾದೃಷ್ಟಕರ ಘಟನೆ. ಅಪಘಾತ ಒತ್ತಡದ ಕಾರಣದಿಂದ ಆಯಿತೇ ಅಥವಾ ಬೇರೆ ಕಾರಣಗಳಿಂದ ಆಯಿತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಪ್ರತಿಭಟನೆಗೆ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದ ಯಶಸ್ವಿನಿ: ಈ ಮಧ್ಯೆ, ಪ್ರತಿಭಟನೆಗೆ ಅಪಘಾತದಲ್ಲಿ ಗಾಯಗೊಂಡ ತಿಪಟೂರು ತಾಲೂಕಿನ ಹುಣಸೆಘಟ್ಟ ಗ್ರಾಮ ಆಡಳಿತಾಧಿಕಾರಿ (ವಿಎಒ) ಯಶಸ್ವಿನಿ ಅವರು ವ್ಹೀಲ್‌ಚೇರ್‌ನಲ್ಲೇ ಆಗಮಿಸಿದ್ದರು. ಶನಿವಾರ ಅವರು ಎಸ್‌ಐಆರ್‌ ಕಾರ್ಯ ನಿಮಿತ್ತ ತಿಪಟೂರಿನಿಂದ ಹುಣಸೇಘಟ್ಟಕ್ಕೆ ಹೋಗುವಾಗ ದಾರಿ ಮಧ್ಯೆ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದರು.

ನನಗೆ ಆರೋಗ್ಯದ ಸಮಸ್ಯೆ ಇದ್ದುದ್ದರಿಂದ ಘಟನೆ ನಡೆದ ಕೂಡಲೇ ಬರಲಾಗಲಿಲ್ಲ. ಆದರೆ, ಜಿಲ್ಲಾಡಳಿತದ ಜೊತೆ ಸಂಪರ್ಕದಲ್ಲಿದ್ದು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.

ಎಸ್ಐಆರ್ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ 2 ತಿಂಗಳಾದರೂ ಸಮಯಾವಕಾಶ ನೀಡಬೇಕಾಗಿತ್ತು. ಹೀಗಾಗಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ಮೃತ ಭುವನಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿ ಅವರ ಕುಟುಂಬಕ್ಕೆ ಸೇರಿದ ತೋಟದಲ್ಲಿ ಭಾನುವಾರ ಸಂಜೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಭುವನಾ ಅವರು ಎಸ್‌ಐಆರ್ ಪ್ರಕ್ರಿಯೆಗಾಗಿ ತೆರಳುತ್ತಿದ್ದ ವೇಳೆ ತುಮಕೂರಿನ ಗೂಳೂರು ಬಳಿ ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಅವರು ಮೃತಪಟ್ಟಿದ್ದರು.

ಎಸ್‌ಐಆರ್ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬಿಎಲ್‌ಒ ಹೃದಯಾಘಾತದಿಂದ  ಮೃತ

ಬೀದರ್: ಎಸ್‌ಐಆರ್ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೀದರ್‌ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿ ಸುನೀಲ್ (45) ಮೃತಪಟ್ಟ ಬಿಎಲ್‌ಒ. ಸುನೀಲ್ ಅವರು ಬೀದರ್ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ಅಮಲಾಪುರ ಗ್ರಾಮದ ಬೂತ್ ಸಂಖ್ಯೆ 33ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

PREV
Stay informed with the latest developments from Bidar district (ಬೀದರ್ ಸುದ್ದಿ) — including local governance, agriculture, heritage, environment, civic issues, events and community stories. Read timely headlines and in-depth reporting on Bidar’s district-level news from Kannada Prabha.
Read more Articles on

Recommended Stories

ನಕಲಿ ಜಾತಿ ಪ್ರಮಾಣಪತ್ರ ಹಾವಳಿಯನ್ನು ತಡೆಗಟ್ಟಬೇಕು: ವಿ.ಎಸ್.ಉಗ್ರಪ್ಪ
ಶಾಸಕರಾಗಿ ಸಚಿವರಾದ್ರೂ ಬದಲಾಗಲಿಲ್ಲ ಪ್ರಭು ಚವ್ಹಾಣ