;Resize=(412,232))
ಹೈದ್ರಾಬಾದ್/ ಔರಾದ್ : ಅತಿಥಿಗಳು ತಂದುಕೊಟ್ಟ ಮಾವಿನ ಹಣ್ಣನ್ನು ತಿಂದು ಬೀದರ್ ಮೂಲದ ಇಬ್ಬರು ಬಾಲಕಿಯರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಮೂವರು ಅಸ್ವಸ್ಥಗೊಂಡಿರುವ ಘಟನೆ ತೆಲಂಗಾಣದ ಹೈದ್ರಾಬಾದ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೇಂಬೆಳ್ಳಿ ಮೂಲದ ಭವಾನಿ ವೈಜಿನಾಥ ಮೇತ್ರೆ (17), ಸಂಧ್ಯಾರಾಣಿ ಮೇತ್ರೆ (14) ಮೃತ ಬಾಲಕಿಯರು. ಶೆಂಬಳ್ಳಿ ಗ್ರಾಮದ ವೈಜಿನಾಥ್ ಮೇತ್ರೆ ಕುಟುಂಬಸ್ಥರು ಹೈದ್ರಾಬಾದ್‌ನ ನಾರಾಯಣಗುಡ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು.
ಜೂ.8ರಂದು ರಾತ್ರಿ ಮನೆಯಲ್ಲಿ ಊಟದ ಬಳಿಕ ನೆಂಟರು ತಂದುಕೊಟ್ಟ ಮಾವಿನ ಹಣ್ಣನ್ನು ಕುಟುಂಬಸ್ಥರು ಸೇವನೆ ಮಾಡಿದ್ದಾರೆ. ನಂತರ ಏಕಕಾಲಕ್ಕೆ ಎಲ್ಲರಲ್ಲೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ 5 ಜನರನ್ನು ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ಇಬ್ಬರು ಬಾಲಕಿಯರು ಸಾವನಪ್ಪಿದ್ದಾರೆ. ಜಯಶ್ರೀ (19) ಎಂಬ ಯುವತಿಯ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.