ಸಾಂಸ್ಕೃತಿಕ ವಾತಾವರಣ ಹೆಚ್ಚಿಸಲು ಬಿದರಿ ಉತ್ಸವ ಪೂರಕ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Jan 13, 2026, 02:00 AM IST
ಚಿತ್ರ 12ಬಿಡಿಆರ್‌1ಬೀದರ್‌ನ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬಿದರಿ, ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಿದರಿ ಉತ್ಸವದಲ್ಲಿ ಬೀದರ್‌ನ ಹಿರಿಯ ಸಂಗೀತ ಕಲಾವಿದರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸಂಗೀತ ಸಾಂಸ್ಕೃತಿಕ ವಾತಾವರಣ ಹೆಚ್ಚಿಸುವಲ್ಲಿ ಬಿದರಿ ಉತ್ಸವ ಪೂರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ಸಂಗೀತ ಸಾಂಸ್ಕೃತಿಕ ವಾತಾವರಣ ಹೆಚ್ಚಿಸುವಲ್ಲಿ ಬಿದರಿ ಉತ್ಸವ ಪೂರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಅವರು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬಿದರಿ, ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಿದರಿ ಉತ್ಸವದಲ್ಲಿ ಮಾತನಾಡಿ, ಮಕ್ಕಳಲ್ಲಿನ ಹಾಗೂ ಯುವ ಪೀಳಿಗೆಯ ಸಂಗೀತಗಾರರನ್ನು ಗುರುತಿಸಿ ಅವರನ್ನು ಮೇಲೆತ್ತುವಲ್ಲಿ ಮತ್ತು ಹಿರಿಯ ಸಾಧಕನ್ನು ಗುರುತಿಸಿ ಅವರನ್ನು ಸನ್ಮಾನಿಸುವಲ್ಲಿ ಬಿದರಿ ಉತ್ಸವ ನಿರತವಾಗಿರುವದು ಪ್ರಶಂಸನೀಯ ಎಂದರು.

ಬಿದರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ಅವರು ಹಲವಾರು ಭಾಷೆಗಳನ್ನು ನಿರರ್ಗಳವಾಗಿ ಹಾಡುವ ಸಾಧಕಿಯಾಗಿದ್ದು, ಇನ್ನಷ್ಟು ಎತ್ತರಕ್ಕೆ ಅವರು ಬೆಳೆಯಲಿ ಎಂದು ಹಾರೈಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ ಎಲ್ಲರನ್ನೂ ಆಕರ್ಷಿಸುವಂಥದ್ದು, ಬಿದರಿ ಸಂಸ್ಥೆಯ ಸತತ ಕಾರ್ಯಕ್ರಮಗಳು ಜಿಲ್ಲೆಯ ಕಲಾ ಸೇವೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.

ಖ್ಯಾತ ಸಂಗೀತ ನಿರ್ದೇಶಕ ಅನೂಪ್‌ ಸಿಳೀನ್‌ ಮಾತನಾಡಿ, ಗಾಯನದಲ್ಲಿ ಮೇರು ಸಾಧನೆಯನ್ನು ಮಾಡುತ್ತಿರುವ ರೇಖಾ ಸೌದಿ ಅವರಿಗೆ ಅವಕಾಶಗಳನ್ನು ಕಲ್ಪಿಸುವ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಸರ್ಕಾರದ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ, ಒಕ್ಕೂಟದ ಅಧ್ಯಕ್ಷ ಅನೀಲಕುಮಾರ ಬೆಲ್ದಾರ್‌, ಜನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಗಡಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕರ್ನಾಟಕ ಲೇಖಕಿಯರ ಸಂಘಧ ಅಧ್ಯಕ್ಷೆ ಭಾರತಿ ವಸ್ತ್ರದ್‌, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ನಿಕಿತಾ ಇಂಡಸ್ಟ್ರೀಸ್‌ನ ಜೈರಾಜ್‌ ಖಂಡ್ರೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್‌ ಶಿಂಧೆ, ಬಿದರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಖಾ ಸೌದಿ ಸೇರಿದಂತೆ ಮತ್ತಿತರರು ಇದ್ದರು.

ಜಾನಕಿ ಅಮ್ಮ ಅವರಿಗೆ ಬಿದರಿ ದತ್ತಿ ಪ್ರಶಸ್ತಿ : ದೇಶದ ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅಮ್ಮಾ ಅವರಿಗೆ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿರುವ ಕುರಿತು ವಿಡಿಯೋ ಪ್ರದರ್ಶಿಸಲಾಯಿತು. ಬೀದರ್‌ನ 8 ಜನ ಹಿರಿಯ ಕಲಾವಿದರಿಗೆ ಸನ್ಮಾನಿಸಲಾಯಿತು.

ಖ್ಯಾತನಾಮರಿಂದ ಸಂಗೀತದ ರಸದೌತಣ: ಖ್ಯಾತ ಚಿತ್ರನಟ ಅಮಿತಾಬ್ ಬಚ್ಚನ್, ಗೋವಿಂದಾ ಮತ್ತಿತರರಿಗೆ ಧ್ವನಿ ನೀಡಿದ್ದ ಬಾಲಿವುಡ್ ದಿಗ್ಗಜ ಗಾಯಕ ಶಬ್ಬೀರ್ ಕುಮಾರ್, ಬೀದರ್ ನ ರೇಖಾ ಸೌದಿ, ಬೆಂಗಳೂರಿನ ಗೋವಿಂದ ಕರ್ನೂಲ್, ಶ್ರೀನಾಥ ಕಮಲಾಪುರಕರ, ಬೀದರ್ ರಾಜೇಶ್ ಕುಲಕರ್ಣಿ ಹಾಗೂ ಅಶ್ವಿನಿ ಶ್ರೀಕಾಂತ ಕೋಟಗೆ ಸೇರಿದಂತೆ ಹಲವು ಖ್ಯಾತನಾಮರು ತಮ್ಮ ಸಂಗೀತ ಸುಧೆಯನ್ನು ಹರಿಸಿದರು.

ಇದಕ್ಕೂ ಮುನ್ನ 16 ವರ್ಷದ ಒಳಗಿನ ಮಕ್ಕಳಿಗಾಗಿ ಬಿದರಿ ಸುಗಮ ಸಂಗೀತ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಶ್ರೀವರ್ಧನ್‌ (ಪ್ರಥಮ), ಶ್ರದ್ಧಾ (ದ್ವಿತೀಯ) ಹಾಗೂ ಬಸವಪ್ರಸಾದ (ತೃತೀಯ) ಬಹುಮಾನ ಪಡೆದರು. ಅಲ್ಲದೆ ಮಹಿಳೆಯರಿಗಾಗಿ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಆಕರ್ಷಕ ಕೋಲಾಟ ನಡೆಯಿತು. ದೇವಿದಾಸ ಜೋಷಿ, ಮಂಗಳಾ ಭಾಗವತ್‌ ಹಾಗೂ ಮುಕ್ರಮ್‌ ಖಾನ್‌ ನಿರೂಪಿಸಿ, ರಾಜೇಂದ್ರ ಮಣಿಗೇರಿ ಸ್ವಾಗತಿಸಿ ವಂದಿಸಿದರು.-------

ಬೀದರ್‌ನ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಬಿದರಿ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ