ಕನ್ನಡಪ್ರಭ ವಾರ್ತೆ ಬೀದರ್
ಈ ಕುರಿತಂತೆ ನಡೆದ ಸಭೆಯಲ್ಲಿ ನಿರ್ದಾರ ಕೈಗೊಳ್ಳಲಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಬಿದರಿ ಉತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಾ ಬಂದಿರುವ ಬಿದರಿ ಸಾಂಸ್ಕೃತಿಕ ವೇದಿಕೆಯು ಪ್ರಸಕ್ತ ವರ್ಷಾಂತ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬಿದರಿ ಉತ್ಸವ -2026 ಆಯೋಜಿಸಲು ಯೋಜಿಸಲಾಗಿದೆ ಎಂದು ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಲೇಖಕಿ ಭಾರತಿ ವಸ್ತ್ರದ್ ಹಾಗೂ ಪುಣ್ಯವತಿ ವಿಸಾಜಿ ಅವರು, ಬಿದರಿ ಉತ್ಸವ ಜಿಲ್ಲೆಯ ಹೆಮ್ಮೆಯಾಗಿ ಮಾರ್ಪಟ್ಟಿದೆ, ಹಿರಿಯ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲು ನಿರ್ಧರಿಸಿರುವುದು ಸೂಕ್ತವಾಗಿದೆ ಎಂದರು.ಬಿದರಿ ಉತ್ಸವದ ಅಂಗವಾಗಿ 16ರಿಂದ 20 ವರ್ಷದೊಳಗಿನ ವಯೋಮಿತಿಯೊಳಗಿನವರಿಗೆ ಸುಗಮ ಸಂಗೀತ ಸ್ಪರ್ಧೆಯನ್ನು ಆಯೋಜಿಸುವ ಕುರಿತಾಗಿ ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಪ್ರಸ್ತಾಪಿಸಿದಾಗ ಅದಕ್ಕೆ ಬಾಬುರಾವ್ ದಾನಿ, ಶಿವಕುಮಾರ ಕಟ್ಟೆ, ಶರಣಪ್ಪ ಬಿರಾದರ್, ಓಂಪ್ರಕಾಶ ದಡ್ಡೆ, ಅರವಿಂದ ಕುಲಕರ್ಣಿ ಹಾಗೂ ಪೃಥ್ವಿರಾಜ್ ಅವರು ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘಧ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ಮಾತನಾಡಿ, ಈ ಬಾರಿಯ ಬಿದರಿ ಉತ್ಸವದಲ್ಲಿ ಸಂಗೀತ ಸಂಜೆಗೆ ಮತ್ತಷ್ಟು ಮೆರಗು ತರುವಂಥ ಕಲಾವಿದರನ್ನು ಕರೆಯಿಸಲು ಸಲಹೆಯಿತ್ತರು. ಸಭೆಯಲ್ಲಿ ಶಿಖರೇಶ್ವರ, ಮುಕ್ರಂಖಾನ್, ರಾಜು ಮಣಿಗೇರಿ ಅವರು ಉಪಸ್ಥಿತರಿದ್ದರು.